ಪಟ್ಟಣದ ಮುಖ್ಯಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಅಂಗನವಾಡಿ ನೌಕರರ 2 ದಿನದ ಅಖೀಲ ಭಾರತದ ಮುಷ್ಕರದಲ್ಲಿ ಕಾರ್ಮಿಕರಿಗೆ ನ್ಯಾಯ ಹಾಗೂ ಸೂಕ್ತ ಬೆಲೆ ದೊರೆಯಲಿ ಎಂದು ಸಿಐಟಿಯು ಆಗ್ರಹ…
ತಾವರಗೇರಾ ಪಟ್ಟಣ ಪಂಚಾಯತ ಕಾರ್ಯಲಯದ ಮುಂದೆ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಕರೆಯ ಮೇಲೆ ಕೆಳಕಂಡ ಬೇಡಿಕೆಗಳಿಗಾಗಿ ಒತ್ತಾಯಿಸಿ ಮಾರ್ಚ್ 28-29ರಂದು ಭಾರತ ದೇಶದಲ್ಲಿರುವ ಸಂಘಟಿತ, ಅಸಂಘಟಿತ, ಗುತ್ತಿಗೆ ಕಾರ್ಮಿಕರು ಮತ್ತು ಕೇಂದ್ರ – ರಾಜ್ಯ ಸೇವೆಯನ್ನೊಳಗೊಂಡಂತೆ ಸಾರ್ವಜನಿಕ ಕೈಗಾರಿಕೆಗಳು, ಸಾರಿಗೆ ರಂಗದ ಎಲ್ಲ ನೌಕರರು ಮತ್ತು ಕಾರ್ಮಿಕರು ಕೆಲಸವನ್ನು ನಿಲ್ಲಿಸಿ ಮುಷ್ಕರ ನಡೆಸುತ್ತಿದ್ದಾರೆ. ಅಂಗನವಾಡಿ ನೌಕರರು ಈ ದೇಶದ ಮಾನವ ಸಂಪನ್ಮೂಲಗಳ ಬೆಳವಣಿಗೆಗೆ ಪೂರಕವಾಗಿ ಆಹಾರ, ಆರೋಗ್ಯ ಮತ್ತು ಶಿಕ್ಷಣವನ್ನು ಪ್ರತಿಯೊಂದು ಮಗುವಿಗೂ ತಲುಪಿಸುವ ಮೌಲ್ಯಧಾರಿತವಾದ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಇವರಿಗೆ ಕನಿಷ್ಠ ಬದುಕಿನ ಖಾತ್ರಿಯಿಲ್ಲದೇ ಅತ್ಯಂತ ಶೋಷಣೆಗೊಳಗಾಗಿದ್ದಾರೆ. ಆದ್ದರಿಂದ ಈ ನೌಕರರು ಕೂಡಾ ಮಾರ್ಚ್ 28-29ರಂದು ಕೆಲಸವನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಎಂದೂ ಈ ಮೂಲಕ ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇವೆ ಎಂದು ಅಂಗನವಾಡಿ ಕಾರ್ಯಕರ್ತರ ಅಧ್ಯಕ್ಷರಾದ ಕಲಾವತಿಯವರು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಟ್ಟಣ ಪಂಚಾಯತ ಕಾರ್ಯಲಯದ ಮುಂದೆ ಧರಣಿ ಹಮ್ಮಿಕೊಂಡರು. ಪಟ್ಟಣದ ಸಮವಿಧಾನ ಹಿತಾ ರಕ್ಷಣಾ ಸಮಿತಿಯ ಹಿರಿಯ ಮುಖಂಡರುಗಳಾದ ಹೇಮರಾಜ್ ವೀರಾಪೂರ, ಯಮನೂರಪ್ಪ ಬಿಳೆಗುಡ್ಡ, ವಿಜೇಯ ಚಲುವಾದಿ, ಆರ್.ಬಿ.ಅಲಿಆದಿಲ್ ಪಾಲುಗೊಂಡಿದ್ದರು. ಬೇಡಿಕೆಗಳು:-
1. ಕೇಂದ್ರ ಸರ್ಕಾರ ಕಡಿತ ಮಾಡಿರುವ 40 % ಅನುದಾನವನ್ನು ಕೊಡಬೇಕು,
- 45 ಮತ್ತು 46 ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಯೋಜನೆಗಳಲ್ಲಿ ದುಡಿಯುವವರನ್ನು ಕೆಲಸಗಾರರು ವರ್ಕ್ಸ್ ಎಂದು ಪರಿಗಣಿಸಬೇಕು ಮತ್ತು ಶಾಸನಬದ್ಧ ಸವಲತ್ತುಗಳನ್ನು ನೀಡಬೇಕು.
- ಬೆಲೆಯೇರಿಕೆಯಾಧಾರದಲ್ಲಿ 24 ಸಾವಿರ ಕನಿಷ್ಠ ವೇತನದ ಜಾರಿ ಮಾಡಬೇಕು.
- ICDS ಯೋಜನೆಗಳನ್ನು ಖಾಯಂ ಮಾಡಬೇಕು.
- ICDS ಯೋಜನೆಯನ್ನು ಯಾವುದೇ ಸ್ವರೂಪದಲ್ಲಿಯೂ ಖಾಸಗೀಕರಣ ಮಾಡಬಾರದು.
- ಎಲ್ಲಾ ಯೋಜನಾ ನೌಕರರಿಗೂ, ನಿವೃತ್ತಿ ಸೌಲಭ್ಯ ಕೊಡಬೇಕು.
- ಆಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಯನ್ನು ಪ್ರಾರಂಭಿಸಬೇಕು. ಐಸಿಡಿಎಸ್‌ನಲ್ಲಿ NEP ಶಿಫಾರಸ್ಸುಗಳನ್ನು ಜಾರಿ ಮಾಡಬಾರದು.
- ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು
- ಕೃಷಿ ಕಾನೂನುಗಳು ಮತ್ತು ವಿದ್ಯುತ್ (ತಿದ್ದುಪಡಿ) ಮಸೂದೆಯನ್ನು ರದ್ದುಗೊಳಿಸಬೇಕು.
- ಯಾವುದೇ ರೂಪದಲ್ಲಿ ಖಾಸಗೀಕರಣ ಬೇಡ ಮತ್ತು ಎನ್ ಎಂಪಿಯನ್ನು ರದ್ದು ಮಾಡಬೇಕು.
- ಆದಾಯ ತೆರಿಗೆ ಪಾವತಿಸದ ಕುಟುಂಬಗಳಿಗೆ ತಿಂಗಳಿಗೆ 7500 ರೂ.ಗಳ ಪರಿಹಾರ ನೀಡಬೇಕು.
- ನರೇಗಾಗೆ ಹೆಚ್ಚಿನ ನಿಧಿ ನೀಡಿ ಮತ್ತು ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೆ ವಿಸ್ತರಿಸಿ.
- ಅನೌಪಚಾರಿಕ ವಲಯದ ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತೆ ನೀಡಬೇಕು.
- ಮಹಾಮಾರಿಯ ನಡುವೆ ಜನರಿಗೆ ಸೇವೆ ಸಲ್ಲಿಸುತ್ತಿರುವ ಮುಂಚೂಣಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಮತ್ತು ` ವಿಮಾ ಸೌಲಭ್ಯಗಳನ್ನು ನೀಡಬೇಕು.
- ರಾಷ್ಟ್ರೀಯ ಆರ್ಥಿಕತೆಯನ್ನು ಪುನರುಜ್ಜಿವನಗೊಳಿಸಲು , ಶ್ರೀಮಂತರಿಗೆ ಆಸ್ತಿ ತೆರಿಗೆ ಇತ್ಯಾದಿಗಳನ್ನು ‘ ವಿಧಿಸಬೇಕು.
- ಕೃಷಿ , ಶಿಕ್ಷಣ , ಆರೋಗ್ಯ ಮತ್ತು ಇತರ ನಿರ್ಣಾಯಕ ಸಾರ್ವಜನಿಕ ಸೇವೆಗಳಿಗೆ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವುದು.
- ಪೆಟ್ರೋಲಿಯಂ ಉತ್ಪನ್ನದ ಮೇಲಿನ ಕೇಂದ್ರೀಯ ಅಬಕಾರಿ ಸುಂಕವನ್ನು ಕಡಿಮೆ ಮಾಡುವುದು ಮತ್ತು ಬೆಲೆ ಏರಿಕೆಯನ್ನು ನಿಗ್ರಹಿಸಲು ದೃಢವಾದ ಪರಿಹಾರ ಕ್ರಮ ಕೈಗೊಳ್ಳುವುದು.
18, ಗುತ್ತಿಗೆ ಮತ್ತು ಯೋಜನಾ ಕಾರ್ಮಿಕರಿಗೆ ಸಮಾನ ವೇತನ ನೀಡಬೇಕು.
ಈ ಹೋರಾಟದಲ್ಲಿ ಪಟ್ಟಣದ ಅಂಗನವಾಡಿ ಕಾರ್ಯಕರ್ತರು ಹಾಗೂ ಪಟ್ಟಣದ ಸಂವಿಧಾನ ಹಿತಾ ರಕ್ಷಣಾ ಸಮಿತಿಯ ಹಿರಿಯ ಮುಖಂಡರುಗಳಾದ ಹೇಮರಾಜ್ ವೀರಾಪೂರ, ಯಮನೂರಪ್ಪ ಬಿಳೆಗುಡ್ಡ, ವಿಜೇಯ ಚಲುವಾದಿ, ಆರ್.ಬಿ.ಅಲಿಆದಿಲ್ ಇತರರು ಪಾಲುಗೊಂಡು, ಈ ಹೋರಾಟ ಯಶಸ್ವಿಗೊಳಿಸಿದರು.
ವರದಿ – ಸಂಪಾದಕೀಯ