ಕೂಡ್ಲಿಗಿ ಪಟ್ಟಣದಲ್ಲಿ ತುಕ್ಕು ಹಿಡಿದ ಶುದ್ಧ ನೀರಿನ ಘಟಕಗಳು, ಸಾರ್ವಜನಿಕರ ಜನಪ್ರತಿನಿಧಿಗಳ ಆಕ್ರೋಶ..
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ, ಇಪ್ಪತ್ತಕ್ಕೂ ಹೆಚ್ಚು ಶುದ್ಧ ಕುಡಿಯೋ ನೀರಿನ ಘಟಕಗಳಿದ್ದು.ಅವುಗಳಲ್ಲಿ 14 ಘಟಕಗಳು ಕೆಟ್ಟು ನಿಂತಿವೆ.ಹಲವು ಘಟಕಗಳು ಹತ್ತಾರು ತಿಂಗಳುಗಳಿಂದ, ಕೆಲವು ಘಟಕಗಳು ವರ್ಷದಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಬದಲಿಗೆ ಸುಖಾ ಸುಮ್ಮನೇ ಘಟಕಗಳು ತೆರೆದಿಡಲಾಗಿದೆ,ಇದರಿಂದಾಗಿ ಸಾರ್ವಜನಿಕರು ನಿತ್ಯ ನೀರಿಗಾಗಿ ಪರದಾಡುವಂತಾಗಿದೆ. ತಿಳಿಯದಂತಹ ಬಹುತೇಕ ಸಾರ್ವಜನಿಕರು ಕೆಟ್ಟ ಮಿಷನ್ ಗೆ ತಮ್ಮ ಐದು ರೂ ಹಣ ಹಾಕಿ, ಮೋಸ ಹೋಗುತ್ತಿದ್ದಾರೆ ಎಂದು ಸಾರ್ವಜನಿಕರು ಹಾಗೂ ಜನಪ್ರತಿ ನಿಧಿಗಳು ದೂರಿದ್ದಾರೆ. ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಿಗೆ ಮತ್ತು ಶಾಸಕರಿಗೆ ದೂರು ನೀಡಲಾಗಿದೆ,ಶಾಸಕರು ಸಂಬಂಧಿಸಿದಂತೆ ನಿರ್ವಹಣೆಯ ಹೊಣೆಹೊತ್ತ ಗುತ್ತಿಗೆದಾರರಿಗೆ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಗುತ್ತಿಗೆದಾರರನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಜನಪ್ರತಿನಿಧಿಗಳು- ಸಮರ್ಪಕವಾಗಿ ನಿರ್ವಹಿಸದ ಗುತ್ತಿಗೆದಾರನ ವಿರುದ್ಧ ಜನಪ್ರತಿನಿಧಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಸಂಬಂಧಿಸಿದಂತೆ ಪಪಂ ಸದಸ್ಯರು ಪಪಂ ಅಧಿಕಾರಿ ನೇತೃತ್ವದಲ್ಲಿ ಕೂಡ್ಲಿಗಿ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿದ್ದಾರೆ. ಗುತ್ತಿಗೆ ದಾರನು ಪಪಂ ಸೇರಿದಂತೆ ಕೆಲ ಇಲಾಖೆಗಳಿಗೆ,ತಾನು ಸಂದಾಯ ಮಾಡಬೇಕಿರುವ ಬಾಕಿ ಹಣ ಸಂದಾಯ ಮಾಡದೇ ಸಂಪರ್ಕಕ್ಕೂ ಸಿಗುತ್ತಲ್ಲ.ಜಿಲ್ಲಾಧಿಕಾರಿಗಳು ಘಟಕಗಳನ್ನು ಪ್ರಾರಂಭಿಸಲು ಆದೇಶಿಸಿದ್ದಾರೆ, ಈವರೆಗೂ ಅವರ ಆದೇಶಕ್ಕೆ ಕ್ಯಾರೇ ಅನ್ನದೇ ಗುತ್ತಿಗೆದಾರ ನಾಪತ್ತೆಯಾಗಿದ್ದು, ಕೆಇಬಿ.ಪಪಂ ಸೇರಿದಂತೆ ಕೆಲವು ಲಕ್ಷಗಟ್ಟಲೆ ಹಣ ಸಂದಾಯ ಮಾಡಿಲ್ಲ,ಬಾಕಿ ಹಣವೂ ಇಲ್ಲ ವರ್ಷದಿಂದ ಗುತ್ತಿಗೆದಾರನೂ ಪತ್ತೆಯಿಲ್ಲ ಸಂಪರ್ಕಕ್ಕೆ ಇಲ್ಲ. ಕಾರಣ ಗುತ್ತಿಗೆ ದಾರನ ವಿರುದ್ಧ ವಂಚನೆ ಆರೋಪದಡಿ, ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಾನೂನು ಸಮರ ಸಾರಲಾಗುವುದೆಂದು ಜನಪ್ರತಿನಿಧಿಗಳು ತಿಳಿಸಿದ್ದಾರೆ. ಪ್ರತಿ ಘಟಕ ನಿರ್ಮಾಣಕ್ಕೆ 14 ಲಕ್ಷ ರೂ.ವೆಚ್ಚ ಮಾಡಲಾಗುತ್ತಿದ್ದು,ಪಟ್ಟಣದ 20 ವಾರ್ಡ್ ಗಳಲ್ಲಿಯೂ ನಿರ್ಮಿಸಲಾಗಿದೆ ಅಗತ್ಯ ಇರೋಕಡೆ ಎರೆಡು ಘಟಕಗಳನ್ನ ನಿರ್ಮಿಸಲಾಗಿದೆ. ಪಟ್ಟಣದಲ್ಲಿ 20ಕ್ಕೂ ಹೆಚ್ಚು ಘಟಕಗಳಿದ್ದು, ಬೆರಳೆಣಿಕೆಯಷ್ಟು ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಹತ್ತಕ್ಕೂ ಹೆಚ್ಚು ಘಟಕಗಳು ಕೆಲವು ತಿಂಗಳುಗಳಿಂದ, ಹಾಗೂ ಕೆಲವು ವರ್ಷದಿಂದ ಕಾರ್ಯನಿರ್ವಹಿಸುತ್ತಿಲ್ಲ.ನಿರ್ವಹಣೆ ಇಲ್ಲದೇ ಧೂಳು ಇಡಿದವೆ ಯಂತ್ರಗಳು ತುಕ್ಕು ಹಿಡಿದಿದ್ದು,ತೋರ್ಪಡೆಗೆ ಘಟಕಗಳನ್ನು ತೆರಯಲಾಗುತ್ತಿದೆ ಇದರಿಂದಾಗಿ ಸಾರ್ವಜನಿಕರು ತೀವ್ತ ಪರದಾಡುವಂತಾಗಿದೆ.ಬಹುತೇಕ ವಾರ್ಡಿನ ಸಾರ್ವಜನಿಕರು ತಮ್ಮ ಮನೆ ಹತ್ತಿರ ಘಟಕ ಇದ್ದುರೂ ಕೂಡ,ಅದು ಕಾರ್ಯನಿರ್ವಹಿಸದ ಕಾರಣ ಶುದ್ಧ ಕುಡಿಯೋ ನೀರಿಗಾಗಿ ಕಿಮೀ ನಷ್ಟು ಕ್ರಮಿಸುವ ದುಸ್ಥಿತಿ ಸೃಷ್ಟಿಯಾಗಿದೆ. ಇದು ಬಹುತೇಕ ವಾರ್ಡ್ ಗಳ ದುಸ್ಥಿತಿಯಾಗಿದೆ, ಸಂಬಂಧಿಸಿದಂತೆ ಪಪಂ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಸಿಗೆ ಪ್ರಾರಂಭಗೊಂಡಿದ್ದು ನೀರಿನ ಸಮಸ್ಯೆ ತಲೆದೋರದಂತೆ ಕ್ರಮಕ್ಕೆ ಶಾಸಕರು ಸೂಚಿಸಿದ್ದಾರೆ,ಈ ನಿಟ್ಟಿನಲ್ಲಿ ಸ್ಥಗಿತಗೊಂಡ ಶುದ್ದಕುಡಿಯೋ ನೀರಿನ ಘಟಕಗಳನ್ನು ಪ್ರಾರಂಭಿಸಬೇಕಿದೆ. ಆದ್ರೆ ಗುತ್ತಿಗೆದಾರ ನಾಪತ್ತೆಯಾಗಿದ್ದು ಅನಿವಾರ್ಯವಾಗಿ ಕಾನೂನು ರೀತ್ಯ ಸೂಕ್ತ ಕ್ರಮಕ್ಕೆ ಮುಂದಾಗಲಿದ್ದೇವೆ, ಸಾರ್ವಜನಿಕರ ಹಿತಕ್ಕಾಗಿ ಶೀಘ್ರವೇ ಕಾನೂನು ನಿಯದಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಘಟಕಗಳ ನಿರ್ವಹಣೆಯನ್ನು ಪಪಂ ವ್ಯಾಪ್ತಿಗೆ ತಂದುಕೊಂಡು ತುರ್ತಾಗಿ ಘಟಕಗಳನ್ನು ಪುನರಾರಂಭಿಸಲು, ಕನೂನು ರೀತ್ಯ ಎಲ್ಲಾ ರೀತಿಯ ಪ್ರಯತ್ನ ನಡೆದಿದೆ ಎಂದು ಕೆಲ ಪಪಂ ಸದಸ್ಯರು ತಿಳಿಸಿದ್ದಾರೆ. ಸಾರ್ವಜನಿಕರಿಗೆ ವಂಚನೆ- ಕೆಲ ವಾರ್ಡ್ ಗಳಲ್ಲಿ ನಾನಾ ಕಾರಣಗಳಿಂದ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ, ಆದ್ರೆ ಇದಕ್ಕೆ ಸಂಬಂಧಿಸಿದಂತೆ ಘಟಕಗಳಲ್ಲಿ ಸೂಚನಾ ಫಲಕ ಹಾಕಿಲ್ಲ.ಅದರಿಂದಾಗಿ ಸಾರ್ವಜನಿಕರು ವೃತಾಃ ಅಲೆದಾಡುವಂತಾಗಿದೆ ಮತ್ತು ತಿಳಿಯದೇ ಯಂತ್ರಕ್ಕೆ ಸುಖಾ ಸುಮ್ಮನೆ ಐದು ರೂ ಹಾಕಿ ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಮೂಲಕವೂ ಕೆಲವು ಕಿಡಿಗೇಡಿ ನಿರ್ವಹಣೆಗಾರರ ಲೋಪದಿಂದಾಗಿ, ಸಾರ್ವಜನಿಕರು ನೀರು ಇಲ್ಲದೇ ಹಣವೂ ಇಲ್ಲದೇ ನಿತ್ಯ ವಂಚನೆಗೀಡಾಗುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.ಈ ಮೂಲಕವೂ ಸಾರ್ವಜನಿಕರಿಂದ ಹಗಲು ದರೋಡೆ ಮಾಡಿದಂತಾಗಿದೆ, ಕಾರಣ ಕೂಡಲೇ ಕಾರ್ಯನಿರ್ವಹಿಸದ ಘಟಕಗಳಿಗೆ ಬೀಗ ಹಾಕಬೇಕು, ಸೂಚನಾ ಫಲಕ ಖಡ್ಡಾಯವಾಗಿ ಹಾಕುವಂತೆ ಕ್ರಮ ಕೈಗೊಳ್ಳಬೇಕೆಂದು ಪಪಂ ಅಧಿಕಾರಿಗೆ ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಘಟಕ ಇದ್ದೂ ಶುದ್ಧ ನೀರು ಮರೀಚಿಕೆ- ಪಟ್ಟಣದ ಬಹುತೇಕ ವಾರ್ಡ್ ಗಳಲ್ಲಿ ಶುದ್ಧ ಕುಡಿಯೋ ನೀರು ಮರೀಚಿಕೆಯಾಗಿದೆ, ಘಟಕ ಇದ್ದರೂ ಕೂಡ ಕಿಮೀ ದೂರ ಕ್ರಮಿಸಿ ತರಬೇಕಿದೆ.ಕಾರಣ ಕೂಡಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳು ಶುದ್ಧ ಕುಡಿಯುವ ನೀರು ಘಟಕಗಳನ್ನು ಪ್ರಾರಂಭಿಸಬೇಕು, ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಕ್ರಮಕ್ಕಾಗಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಜಿಲ್ಲಾಧಿಕಾರಿಗಳಲ್ಲಿ ಈ ಮೂಲಕ ಒತ್ತಾಯಿಸಿದ್ದಾರೆ. ಕಾಣೆಯಾದ ಹಿಣೆಗೇಡಿ ಗುತ್ತಿಗೆದಾರನ ವಿರುದ್ಧ,ಕ್ರಿಮಿನಲ್ ಮೊಕದಮ್ಮೆಗೆ ಜನಪ್ರತಿನಿಧಿಗಳಿಂದ ಒತ್ತಾಯ-ಕಳಪೆ ನಿರ್ವಹಣೆಯ ಗುತ್ತಿಗೆ ದಾರರನ್ನ ಕೈಬಿಡಬೇಕು ಮತ್ತು ಕಾನೂನು ರೀತ್ಯ ಶಿಸ್ಥು ಕ್ರಮ ಜರುಗಿಸಬೇಕು,ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ಪಪಂ ಸದಸ್ಯರಾದ ಕಾವಲ್ಲಿ ಶಿವಪ್ಪನಾಯಕ,ಸಿರಿಬಿ ಮಂಜುನಾಥ, ಗೋವಿಂದಗಿರಿ ತಾಂಡದ ಬಾಸೂನಾಯ್ಕ,ಶ್ರೀಮತಿ ಊರಮ್ಮ ಸೇರಿದಂತೆ ಬಹುತೇಕ ಸದ್ಯರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428