ಕೂಡ್ಲಿಗಿ ನ್ಯಾಯಾಲಯದಲ್ಲಿ ವಿಶ್ವ ಜಲ ದಿನ ಆಚರಣೆ..
ವಿಜಯನಗರ ಜಿಲ್ಲೆ ಕೂಡ್ಲಿಗಿ ನ್ಯಾಯಾಲಯದ ಆವರಣದಲ್ಲಿ,ವಿಶ್ವ ಜಲ ದಿನ ಆಚರಿಸಲಾಯಿತು. ನ್ಯಾಯಾಲಯ ಇಲಾಖೆ,ವಕೀಲ ಸಂಘ,ಕಾನೂನು ಸೇವಾ ಸಮಿತಿ ಮತ್ತು ಪಟ್ಟಣ ಪಂಚಾಯ್ತಿ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿತು.ಹಿರಿಯ ಶ್ರೇಣಿ ನ್ಯಾಯಾಧೀಶರಾದ ಕೆ.ಎ.ನಾಗೇಶರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಜೀವ ಜಲವನ್ನು ಉಳಿಸಿವುದು ಸರ್ವರ ಆಧ್ಯ ಕರ್ಥವ್ಯ ವಾಗಿದೆ.ಪ್ರಪಂಚದ ಬಹುಪಾಲು ನೀರಿದೆಯಾದರೂ ಅದು ನಾನಾ ಕಾರಣದಿಂದಾಗಿ ಅನುಪಯುಕ್ತವಾಗಿದೆ,ಸಕಲ ಜೀವಿಗಳು ಆಶ್ರಯಸಿರುವುದು ಜೀವ ಜಲವನ್ನು ಕಾರಣ ನೀರಿನ ಸಂರಕ್ಷಣೆ ಸರ್ವರ ಹೊಣೆಯಾಗಿದೆ ಎಂದರು. ಪ್ಯಾನಲ್ ವಕೀಲರಾದ ಜಿ.ಎಮ್.ಮಲ್ಲಿಕಾರ್ಜುನ ಸ್ವಾಮಿ ಉಪನ್ಯಾಸ ನೀಡಿ,ನೀರು ಆಹಾರಕ್ಕಿಂತ ಬಹು ಪ್ರಮುಖದ್ದಾಗಿದ್ದು. ನೀರು ಜೀವಿಸಲಿಕ್ಕೂ ಹಾಗೂ ಜೀವನ ನಡೆಸಲು ಅತಿ ಮುಖ್ಯವಾಗಿದ್ದು, ಮನುಷ್ಯನ ವಾಣಿಜ್ಯೋದ್ಯಮಕ್ಕೂ ನೀರು ಅತ್ಯವಶ್ಯಕ ವಾಗಿದೆ.ಪ್ರಪಂಚ ಜೀವಿಸುವುದೇ ನೀರಿನಿಂದಾಗಿ ಮಂದಿನ ಪೀಳೆಗಾಗಿ ನೀರಿನ ಮಿತವ್ಯಯ ಮಾಡಬೇಕಿದೆ.ಯುವ ಪೀಳೆಗೆಯಲ್ಲಿ ನೀರಿನ ಮಹತ್ವ ಕುರಿತು ಪೋಷಕರು ಜಾಗ್ರತೆ ಮೂಡಿಸಬೇಕು, ಸರ್ಕಾರದ ಮಳೆನೀರು ಕೊಯ್ಲು ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಿರಿಯ ಶ್ರೇಣಿ ನ್ಯಾಯಾಧೀಶರಾದ ಮುರುಗೇಂದ್ರ ತುಭಾಕೆರವರು ಮಾತನಾಡಿ,ನೀರು ಬೆಲೆಕಟ್ಟಲಾಗದ ಸಂಪನ್ಮೂಲವಾಗಿದೆ. ಅದರ ಮಿತವ್ಯಯ ಅತ್ಯಗತ್ಯ,ನೀರಿನ ಮಹತ್ವ ಹಾಗು ಉಳಿಸುವಂತೆ ಸಾರ್ವಜನಿಕರಲ್ಲಿ ಜಾಗ್ರತೆ ಮೂಡಿಸುವ ಕಾರ್ಯವನ್ನು. ಸ್ಥಳೀಯ ಆಡಳಿತಗಳು ಮತ್ತು ಸಂಘ ಸಂಸ್ಥೆಗಳು ಮಾಡಬೇಕಿದೆ. ಕಣ್ಣಿಗೆ ಕಾಣುವ ಹಾಗೂ ಕಾಣದಂತಹ ಅಸಂಖ್ಯಾತ ಜೀವ ಸಂಕುಲಗಳು ನೀರನ್ನೇ ಅವಲಂಬಿಸಿವೆ, ಮನುಷ್ಯ ಬುದ್ದಿ ಜೀವಿಯಾಗಿದ್ದು ನೀರಿನ ಸಂರಕ್ಷಣೆಗೆ ಆಧ್ಯತೆ ನೀಡಬೇಕೆಂದರು.ವಕೀಲರ ಸಂಘದ ಅಧ್ಯಕ್ಷ ಜಿ.ಹೊನ್ನೂರಪ್ಪ, ಸರ್ಕಾರಿ ಅಪರ ವಕೀಲರಾದ ಕೆ.ಜಿ.ಶಿವಪ್ರಸಾದ್ ಕಾರ್ಯದರ್ಶಿ ಬಿ.ಸಿದ್ದಲಿಂಗಪ್ಪ,ವೇದಿಕೆಯಲ್ಲಿದ್ದರು.ಹಿರಿಯ ಮಹಿಳಾ ವಕೀಲರಾದ ಕೆ.ಹೆಚ್.ಎಮ್.ಶೈಲಜಾ ಸ್ವಾಗತಿಸಿದರು.ವಕೀಲರಾದ ಕೊಟ್ರುಗೌಡ್ರು ನಿರೂಪಿಸಿದರು. ವಕೀಲರಾದ ಟಿ.ರಮೇಶ ವಂದಿಸಿದರು.ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು,ನ್ಯಾಯಾಲಯ ಸಿಬ್ಬಂದಿ,ಕಾನೂನು ಸೇವಾ ಸಮತಿ ಸಿಬ್ಬಂದಿ ಹಾಗೂ ಪಟ್ಟಣ ಪಂಚಾಯ್ತಿ ಸಿಬ್ಬಂದಿ ಹಾಜರಿದ್ದರು.
ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428