ವಿಶ್ವ ಕ್ಷಯರೋಗ ದಿನಾಚರಣೆ,ಜಾಥ–
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಆರೋಗ್ಯ ಇಲಾಖೆಯಿಂದ,ಪಟ್ಟಣದಲ್ಲಿ ತಾಲೂಕು ಸಾವ೯ಜನಿಕ ಆಸ್ಪತ್ರೆ ಕೆ.ಹಚ್.ಪಿ ಯಿಂದ. ಮಾ 24 ವಿಶ್ವ ಕ್ಷಯರೋಗ ದಿನಾಚರಣೆ ಪ್ರಯುಕ್ತ ಜರುಗಿತು, ಕಾರ್ಯಕ್ರಮದಲ್ಲಿ ತಹಶೀಲ್ದಾರರಾದ ಜಗದೀಶ್,ತಾಪಂ ಜಿ.ಎಮ್.ಬಸಣ್ಣ, ತಾಲೂಕು ಆರೋಗ್ಯ ಆಧಿಕಾರಿ ಷಣ್ಮುಖ ನಾಯ್ಕ,ಹಾಗೂ ಜಿ.ಹೆಚ್ ಅಧಿಕಾರಿಗಳು ಆರೋಗ್ಯ ಇಲಾಖೆ ಸಿಬ್ಬಂದಿಗಳು. ಆರೋಗ್ಯ ಇಲಾಖೆಯ ರಾಘವೇಂದ್ರ,ಪ್ಯಾರ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು, ವೈ.ಎಸ್.ಎಸ್.ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ “ಬಿ.ಷಣ್ಮುಖ ನಾಯ್ಕ ಮಾತನಾಡಿ, ಕ್ಷಯ ಮುಕ್ತ ಭಾರತವನ್ನಾಗಿ ಮಾಡುವ ಗುರಿಹೊಂದಿದ್ದಾರೆ. ಕಾರಣ ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸೋಣ ಎಂದರು. ನಂತರ ತಾಲೂಕು ಮಟ್ಟದ ಅಧಿಕಾರಿಗಳಿಂದ ಗಿಡಕ್ಕೆ ನೀರು ಹಾಕುವುದರ ಮೂಲಕ,ಜಾಗ್ರತೆ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿದುರು. ಟಿಬಿ ಸಂಪೂರ್ಣ ನಿರ್ಮೂಲನೆ ಮಾಡಲು ಸಹಕಾರ ನೀಡಬೇಕು ಎಂದು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದರು.ನಂತರ ಜಾತ ಕಾರ್ಯಕ್ರಮದ ಚಾಲನೆ ಮಾನ್ಯ ತಾಲೂಕು ದಂಡಾಧಿಕಾರಿ ಶ್ರೀ ಜಗದೀಶ್ ಸರ್ ನೀಡಿದರು, ಆಸ್ಪತ್ರೆಯಿಂದ ಮದಕರಿ ನಾಯಕ ಸಕ೯ಲ್ ವರೆಗೆ ಜಾಥಾ ಕಾರ್ಯಕ್ರಮ ನೆರವೆರಿತು. ಸಂದರ್ಭದಲ್ಲಿ ಎಸ್.ಟಿ.ಎಸ್. ರಾಜಕುಮಾರ್,ಕೆ.ಹೆಚ್.ಪಿ.ಟಿ ಸಿಬ್ಬಂದಿಗಳು ಸೇರಿದಂತೆ ವಿವಿದ ಆರೋಗ್ಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ -✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428