ನೊಂದಣಿ ಸಂಖ್ಯೆ ಇಲ್ಲದೆ ವಾಹನಗಳಲ್ಲಿಉಸುಗು ಸಾಗಣೆ.

Spread the love

ನೊಂದಣಿ ಸಂಖ್ಯೆ ಇಲ್ಲದೆ ವಾಹನಗಳಲ್ಲಿಉಸುಗು ಸಾಗಣೆ.

ಕುಕನೂರು ತಾಲೂಕಿನ ಹಲವೆಡೆ ನೊಂದಣಿ ಸಂಖ್ಯೆ ಇಲ್ಲದೆ ಅಕ್ರಮ ಮರಳು ಸಾಗಿಸುವ ವಾಹನಗಳು ಸಂಚರಿಸುತ್ತಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಅಥವಾ ಅವರು ಸಹ ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುವುದು ಜನಸಾಮಾನ್ಯರ ಪ್ರಶ್ನೆಯಾಗಿ ಕಾಡುತ್ತಿದೆ.ತಾಲೂಕಿನ ಹಲವು ಮರಳು ಕೇಂದ್ರದಿಂದ ಅಕ್ರಮ ನಡೆಯುತ್ತಿರುವದು ಸಹಜವಾಗಿ ಪತ್ರಿಕೆಯಲ್ಲಿ ಹಾಗೂ ನಮ್ಮ ಸುದ್ದಿವಾಹಿನಿಯಲ್ಲಿ ಸಹ ವರದಿ ವರದಿ ಪ್ರಸಾರವಾಗಿದ್ದರೆ ಸಹ ಮರಳು ಲೂಟಿಕೋರರು ಅಡೆತಡೆ ಇಲ್ಲದೆ ಅಕ್ರಮ ಮರಳು ನಡೆಯುತ್ತಿದ್ದುರು  ಸಹ ಸಂಬಂಧಪಟ್ಟ ಯಾವುದೇ ಅಧಿಕಾರಿಗಳು ಈ ವಿಷಯ ಕುರಿತು ಎಲ್ಲಿಯೂ ಸಹ ಕ್ರಮ ಕೈಗೊಂಡಿರುವುದಿಲ್ಲ ಹಾಗೂ ಎಲ್ಲಿಯೂ ಕೂಡ ಈ ವಿಷಯದ ಬಗ್ಗೆ ಚರ್ಚೆ ನಡೆದಿರುವುದಿಲ್ಲ ಹೀಗಾಗಿ ಸಹಜವಾಗಿ ಸಾರ್ವಜನಿಕರಲ್ಲಿ ಅಧಿಕಾರಿಗಳು ಸಹ ಅಕ್ರಮ ಮರಳು ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದು ಸಂಶಯಕ್ಕೆ ಕಾರಣವಾಗಿರುತ್ತದೆ. ಹಾಗೂ ಮರಳು ಸಾಗಣೆಯನ್ನು ನೊಂದಣಿ ಸಂಖ್ಯೆ ಇಲ್ಲದ ವಾಹನಗಳಲ್ಲಿ, ವಾಹನದ ಭಾರಮಿತಿಗಿಂತ ಹೆಚ್ಚು ಹೆಚ್ಚು ಮರಳು ತುಂಬಿಕೊಂಡು ಸಾಗುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದ್ದ ಮಿತಿಗಿಂತ ಹೆಚ್ಚು ಭಾರವಾದ ಸಾಗಾಣಿಕೆ ಸಮಯದಲ್ಲಿ ಚಾಲಕರ ನಿಯಂತ್ರಣ ತಪ್ಪಿ ಅನಾಹುತ ಸಂಭವಿಸಿದರೆ ಚಾಲಕರ ಕುಟುಂಬದ ಗೋಳು ಕೇಳುವವರಾರು…? ಎಂಬ ಪ್ರಶ್ನೆಯು ಸಹಜವಾಗಿ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಸೂಕ್ತ ರೀತಿಯ ಮರಳು ದಂಧೆಗೆ ಕ್ರಮವಹಿಸುತ್ತಾರೆಯೆ ಎಂಬುದನ್ನು ಕಾದು ನೋಡಬೇಕಾಗಿದೆ.

ವರದಿ – ಸೋಮನಾಥ ಹೆಚ್ ಎಮ್

Leave a Reply

Your email address will not be published. Required fields are marked *