ಬೇವೂರು ಹೋಬಳಿಗಾಗಿ ಬೇವೂರು ಹೋರಾಟ ಸಮಿತಿಯಿಂದ 2ನೇ ದಿನದ ಅನಿರ್ಧಿಷ್ಟವದಿ ಧರಣಿ.

Spread the love

ಬೇವೂರು ಹೋಬಳಿಗಾಗಿ ಬೇವೂರು ಹೋರಾಟ ಸಮಿತಿಯಿಂದ 2ನೇ ದಿನದ ಅನಿರ್ಧಿಷ್ಟವದಿ ಧರಣಿ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕುಷ್ಟಗಿ, ಗಂಗಾವತಿ , ಕೊಪ್ಪಳ ತಾಲೂಕುಗಳಿಗೆ ಹೃದಯ ಭಾಗಲಿದ್ದು. ನೇರಾ ಸಾರಿಗೆ ಸಂಪರ್ಕವನ್ನು ಹೊಂದಿರುತ್ತದೆ . ಬೇವೂರಲ್ಲಿ ದಶಕದಲ್ಲಿ ಬ್ಲ್ಯಾಕ್ ಡೆವಲಪ್ಟೆಂಟ್ ಆಫಿಸ್ ಕಾರ್ಯನಿರ್ವಹಿಸಿರುತ್ತದೆ . ಬೇವೂರಲ್ಲಿ ಗ್ರಾಮ ಪಂಚಾಯತಿ ಕಛೇರಿ , ಕರ್ನಾಟಕ ಗ್ರಾಮೀಣ ಬ್ಯಾಂಕು , ಪ್ರಾಥಮಿಕ ಆರೋಗ್ಯ ಕೇಂದ್ರ , ಪಶು ಆಸ್ಪತ್ರೆ , ಹೆಡ್ ಪೋಸ್ಟ್ ಆಫೀಸ್ , ಬಿ.ಎಸ್ ಎನ್ ಎಲ್ ಕೇಂದ್ರ ಪೊಲೀಸ್ ಠಾಣೆ , ಪ್ರಾಥಮಿಕ , ಪ್ರೌಢ , ಪದವಿ ಪೂರ್ವ ಸರ್ಕಾರಿ ಶಿಕ್ಷಣ ಸಂಸ್ಥೆಗಳು , ಬಾಲಕ , ಬಾಲಕಿಯರ ವಸತಿ ನಿಲಯಗಳು , ಮುರಾರ್ಜಿ ದೇಸಾಯಿ ವಸತಿ ಶಾಲೆ , ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ , ಕೆ ಎಮ್ ಎಫ್ ನ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಹಾಲು ಶಿಥಿಲೀಕರಣ ಘಟಕ , ಕೃಷಿ ಬೀಜ ವಿತರಣ ಉಪ ಕೇಂದ್ರ , ಎಣ್ಣೆ ಕಾಳು ಉತ್ಪಾದಕರ ಸಹಕಾರಿ ಸಂಘ ರೈತ ಉತ್ಪಾದಕರ ಕಂಪನಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿದ ಗ್ರಾಮ ಇದಾಗಿದ್ದು ಸುಮಾರು 10000 ಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ . ಬೇವೂರು ಹೋಬಳಿ ವ್ಯಾಪ್ತಿಯ ಸುಮಾರು 50000-50000 ಜನಸಂಖ್ಯೆಗೆ ಅನುಕೂಲವಾಗಲಿದೆ . ಯಲಬುರ್ಗಾ ಮತ್ತು ಕುಕನೂರು ತಾಲೂಕುಗಳಾಗಿ ಮುನರ್‌ ವಿಂಗಡನೆಯ ನಂತರ ಈ ಭಾಗದ ನಾಗರಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಈ ಭಾಗದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಬೇವೂರ ಹೋಬಳಿ ಹೋರಾಟ ಸಮಿತಿಯನ್ನು ಬಡತನರೇಖೆ ನ್ಯಾಯ ರಚಿಸಲಾಗಿದೆ.ಈ ಭಾಗದ ಸಾರ್ವಜನಿಕರಿಗೆ ಸಾಮಾಜಿಕ ಕೆಳಗಿರುವ ಜನರ ಬದುಕನ್ನು ಸುದಾರಿಸುವ ಧೈಯಕ್ಕೆ ಪೂರಕವಾಗಿ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸಿ ನ್ಯಾಯಯುತವಾದ ನಮ್ಮ ಬೇಡಿಕೆಗೆ ಸ್ಪಂಧಿಸಬೇಕೆಂದು ಬೇವೂರು ಹೋರಾಟ ಸಮಿತಿಯವರು ಭ್ರಷ್ಟಾ ರಾಜಕಾರಣಿಗಳ ವಿರುದ್ದ ಹಲವು ಘೋಷಣೆ ಕೂಗುವ ಮೂಲಕ ಹಾಗೂ ಹೋರಾಟದ ಹಾಡುಗಳು ಹಾಡುತ್ತ ಜನರಿಗೆ ಕಿಚ್ಚು ತುಂಬಿದರು. ಒಂದುವೇಳೆ ಬೇವೂರು ಹೋಬಳಿ ಕೇಂದ್ರವನ್ನಾಗಿ ಘೋಷಿಸಿ ಸರಕಾರಿ ಆದೇಶವನ್ನು ಹೊರಡಿಸದಿದ್ದಲ್ಲಿ ಬೇವೂರು ಹೋಬಳಿ ಹೋರಾಟ ಸಮಿತಿಯಿಂದ ನಿರಂತರವಾಗಿ ಹೋರಾಟವನ್ನು ಹಮ್ಮಿಕೋಳ್ಳಲಾಗುವುದು. ನಮ್ಮ ಬೇಡಿಕೆಗಳು 01 ) ಬೇವೂರನ್ನು ಹೋಬಳಿ ಕೇಂದ್ರವನ್ನಾಗಿ ಘೋಷಿಸಬೇಕು. 02 ) ಹುಣಸಿಹಾಳ ಹಾಗೂ ತರಲಕಟ್ಟೆಗಳನ್ನು ಹೊಸ ಗ್ರಾ.ಪಂ. ಗಳನ್ನಾಗಿ ಘೋಷಿಸಬೇಕು 03 ) ಹಿರೇಅರಳಿಹಳ್ಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿ ಸ್ಥಾಪಿಸಬೇಕು ಎಂದು ಆಗ್ರಾಹಿಸಿದರು. ಈ ಅನಿರ್ಧಿಷ್ಟಾವದಿ ಧರಣಿಯಲ್ಲಿ ಅಧ್ಯಕ್ಷರಾದ ಮಲ್ಲನಗೌಡ ಎಸ್.ಕೋನನಗೌಡ. ಉಪಾಧ್ಯಕ್ಷರಾದ ಮಾರುತಿ ಕೆ.ಚರಾರಿ.ಪ್ರಧಾನ ಕಾರ್ಯದರ್ಶಿಯಾದ ಸಿದ್ದು.ಕೆ.ಮಣ್ಣಿನವರು. ಒಟ್ಟಿನಲ್ಲಿ ಕಾರ್ಯಕಾರಿ ಮಂಡಳಿ ಸಮಿತಿಯವರು.ಹುಲುಗಪ್ಪ ಹಿರೇಮನಿ, ಶರಣಪ್ಪ ಬಳಿಗಾರ್, ಮಲ್ಲಿಕಾರ್ಜುನ ಕೂರ್ಜಿ, ಮಲ್ಲಪ್ಪ ಜಾಲಿಹಳ, ಸಿದ್ದಪ್ಪ ಚಿರಾರಿ. ಹನಮಂತಪ್ಪ ತಳವಾರ.ಈರಣ್ಣ ಹಳ್ಳಿ. ಈರಪ್ಪ ಹಿರೇಮನಿ. ಮಲ್ಲಪ್ಪ ಕರಡಿ. ಬಸವರಾಜ ಮರಪ್ಪನವರು. ಮಲ್ಲಪ್ಪಹಳ್ಳಿ. ಶ್ರೀಕಾಂತಗೌಡಮಾಲಿಪಾಟೀಲ್ ವರದಿಗಾರರು ಪಾಲುಗೊಂಡಿದ್ದು. ಈ ಸಮಿತಿಯವರ ಹೋರಾಟಕ್ಕೆ ಬೇವೂರು ಗ್ರಾಮದ ಹೋರಾಟಗಾರರು ಹಾಗೂ wpi ಅಧ್ಯಕ್ಷರಾದ ಯಮನೂರಪ್ಪ ಳೆಗುಡ್ದ ತಾವರಗೇರಾ ಇವರು ಪಾಲುಗೊಂಡಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *