ಕೂಡ್ಲಿಗಿ:ದೇಶವ್ಯಾಪಿ ನಡೆದ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲಿಸಿ ಕೂಡ್ಲಿಗಿ ಎಐಟಿಯುಸಿ ಪ್ರತಿಭಟನೆ-

Spread the love

ಕೂಡ್ಲಿಗಿ:ದೇಶವ್ಯಾಪಿ ನಡೆದ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲಿಸಿ ಕೂಡ್ಲಿಗಿ ಎಐಟಿಯುಸಿ ಪ್ರತಿಭಟನೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಎಐಟಿಯುಸಿ ಸಂಘಟನೆಯ ನೇತೃತ್ವದಲ್ಲಿ ದೇಶವಾಗಿದೆ ಸಾರ್ವರ್ತಿಕ ಮುಷ್ಕರಕ್ಕೆ ಬೆಂಬಲಿಸಿ ಭಾರತ ಉಳಿಸಿ ಕಾರ್ಮಿಕ ರೈತ ಕೂಲಿಕಾರರು ಮತ್ತು ಜನರನ್ನ ರಕ್ಷಿಸಿ ಎಂಬ ಹೋರಾಟದಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬಿಸಿಯೂಟ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಕಟ್ಟಡ ಕಾರ್ಮಿಕರು ಗಾಂಧಿ ಚಿತಾಭಸ್ಮದಿಂದ ಮೆರವಣಿಗೆ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸೇವಾ ಭದ್ರತೆ ಕಾಯಂ ಕೆಲಸ ಸರ್ಕಾರಿ ನೌಕರಿ 25000 ಸಂಬಳ ಇನ್ನಿತರೆ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಸರ್ಕಾರ ಸಂಬಳ ಕಡಿಮೆ ನೀಡಿ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದ ಸರ್ಕಾರದ್ದು ಮೊಸಳೆ ಕಣ್ಣೀರು ಒರೆಸುವ ನಿಟ್ಟಿನಲ್ಲಿ ಭಿಕ್ಷುಕರಿಗೆ ನೀಡುವಂತೆ ಬಜೆಟ್ ನಲ್ಲಿ,ಸ್ವಲ್ಪ ವೇತನ ಹೆಚ್ಚಳ ಮಾಡಿ ಮಹಿಳೆಯರನ್ನು ಶೋಷಣೆ ಮಾಡುತ್ತಿದ್ದು.ಸಾಮಾಜಿಕ ನ್ಯಾಯ ನೀಡದೆ ನ್ಯಾಯಾಲಯಗಳ ತೀರ್ಪುಗಳನ್ನು ಪರಿಗಣಿಸದೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ,ಹಾಗೂ ಬೆಲೆ ಏರಿಕೆಯಾಗಿ ಜನಸಾಮಾನ್ಯರು ಬದುಕಲು ಸಾಧ್ಯವಾಗಿದೆ. ಅಡುಗೆ ಎಣ್ಣೆ ಬೆಲೆ ತೈಲ ಬೆಲೆ ಔಷಧಿಗಳ ಬೆಲೆ ಹೆಚ್ಚಾಗಿದ್ದು ಜನಸಾಮಾನ್ಯರು, ಬದುಕಲು ಕಷ್ಟಪಡುತ್ತಿದ್ದ ಕೇಂದ್ರ ಸರ್ಕಾರ ಜನರನ್ನ ಬದುಕಲು ಬಿಡದೇ ಸೌಲಭ್ಯಗಳು ಕೊಡದೆ ಮಾಡುತ್ತಿದೆಯೆಂದು. ಈ ನಿಟ್ಟಿನಲ್ಲಿ ದೇಶವ್ಯಾಪ್ತಿ ಭಾರತ ಉಳಿವಿಗಾಗಿ ಜನರ ರಕ್ಷಣೆಗಾಗಿ ಕಾರ್ಮಿಕರ ಹಕ್ಕುಗಳಿಗಾಗಿ, ಎಲ್ಲಾ ಕಾರ್ಮಿಕ ಸಂಘಟನೆಗಳು ಹೋರಾಟ ಮಾಡುತ್ತೇವೆ ಎಂದು ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ.ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು,ಭಾರತ ಕಮ್ಯುನಿಸ್ಟ್ ಪಕ್ಷದ ತಾಲೂಕು ಕಾರ್ಯದರ್ಶಿ ಹೆಚ್ಚು ವೀರಣ್ಣ ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಯು ಪೆನ್ನಪ್ಪ, ಅಧ್ಯಕ್ಷ ಕನ್ನಡ ಕಾರ್ಮಿಕರ ಸಂಘ ಪ್ರಕಾಶ್, ಸಹ ಕಾರ್ಯದರ್ಶಿ ಹನುಮಂತಪ್ಪ ಪ್ರಧಾನ ಕಾರ್ಯದರ್ಶಿ ಅನಂತೇಶ ಕೊಟ್ರೇಶ್ ಪ್ರಕಾಶಣ್ಣ ಲೋಕೇಶ್ ಬಿ. ಮಹಾಂತಮ್ಮ, ಅಧ್ಯಕ್ಷರು ಅಂಗನವಾಡಿ ಸಂಘಟನೆ ರತ್ನಮ್ಮ, ಸುಮಾ, ಬಸಮ್ಮ ಕವಿತಾ,ದ್ರಾಕ್ಷಿಣಿ, ನೇತ್ರಾವತಿ,ಪದ್ಮಾವತಿ, ದಾನಮ್ಮ, ಶಕುಂತಲಾ ತಾಲೂಕಿನ ಎಲ್ಲಾ ಪದಾಧಿಕಾರಿಗಳು ಸದಸ್ಯರು ಸುಜಾತ ಅಧ್ಯಕ್ಷರು ಬಿಸಿಊಟ ಸಂಘದ ತಿಪ್ಪಮ್ಮ ರಾಧಮ್ಮ ಭುವನೇಶ್ವರಿ ಧನಲಕ್ಷ್ಮಿ ಎಸ್ ಈರಮ್ಮ ಅಧ್ಯಕ್ಷರು ಆಶಾ ಕಾರ್ಯಕರ್ತೆಯರ ಸಂಘಟನೆ ಸಂತೋಷ್,ಜಿಲ್ಲಾ ಮುಖಂಡರಾದ, ಎಸ್.ಎಂ.ಕೊಟ್ರಮ್ಮ ಬಿ.ನಾಗಮ್ಮ ತಿಪ್ಪಈರಮ್ಮ ಇನ್ನು ಮುಂತಾದ ತಾಲೂಕಿನ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು.ಮದಕರಿ ವೃತ್ತದಲ್ಲಿ ಸಭೆಸೇರಿ ಪ್ರತಿಭಟನೆ ನಡೆಸಿ ನಂತರ ಉಪ ತಹಶಿಲ್ದಾರ್ ಕುಮಾರ್ ಅವರಿಗೆ,ತಮ್ಮ ಬೇಡಿಕೆಗಳ ಮನವಿಯನ್ನು ಪ್ರಧಾನಮಂತ್ರಿಗಳಿಗೆ ನೀಡಿದರು.

ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *