ಮಳಿಗೆಯನ್ನು ತೆರವುಗೊಳಿಸಿದ ಕುಷ್ಟಗಿ ಪುರಸಭೆ..
ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಬಸ್ ನಿಲ್ದಾಣ ಮೇನ್ ರೋಡ್ ಗೆ ಹಾಗೂ ಕೆ.ಇ.ಬಿ ಹತ್ತಿರ ಇರುವ ಪುರಸಭೆ ವಾಣಿಜ್ಯ ಮಳಿಗೆಯಲ್ಲಿ ಸುಮಾರು ವರ್ಷಗಳಿಂದ ಅತ್ಯಲ್ಪ ಬಾಡಿಗೆಯಲ್ಲಿ ವ್ಯಾಪಾರ ವೈವಾಟು ಮಾಡುತ್ತಿದ್ದ ವ್ಯಾಪಾರಿಗಳ ವಾಣಿಜ್ಯ ಮಳಿಗೆಯನ್ನು ತೆರವುಗೊಳಿಸಿ ಸಾರ್ವಜನಿಕರು ಮೆಚ್ಚುವಂತ ಕೆಲಸವನ್ನ ಕುಷ್ಟಗಿ ಪುರಸಭೆ ಮಾಡಿದೆ. ಕೇವಲ ಬರಿ 8 ನೂರು ರೂಪಾಯಿ ಬಾಡಿಗೆಯಲ್ಲಿ ಪ್ರತಿನಿತ್ಯ ವ್ಯಾಪಾರ ನಡೆಸುತ್ತಿದ್ದರು ಆದರೆ ಬಹು ವರ್ಷಗಳಿಂದ ಟೆಂಡರ್ ಕರೆಯದೆ ಕೆಲ ಪ್ರಭಾವಿ ವ್ಯಕ್ತಿಗಳಿಂದ ಹಾಗೆಯೇ ಬಿಟ್ಟಿದ್ದರು. ಪುರಸಭೆ ಸಾಮಾನ್ಯ ಸಭೆಯಲ್ಲಿ ಮರು ಟೆಂಡರ್ ಕರೆಯುವಂತೆ ಠಾರಾವು ಪಾಸ್ ಆಗಿತ್ತು, ಆದರೆ ಪುರಸಭೆ ಮಳಿಗೆಯಲ್ಲಿ ವ್ಯಾಪಾರ ನೆಡೆಸುತ್ತಿದ್ದ ವ್ಯಾಪಾರಿಗಳು ಧಾರವಾಡ ಹೈಕೋರ್ಟ್ ಮೋರೆ ಹೋಗಿದ್ದರು. ಆದರೆ ಧಾರವಾಡ ಹೈಕೋರ್ಟ್ ಪುರಸಭೆ ಕಾರ್ಯಲಯದ ಅರ್ಜಿಯನ್ನು ಎತ್ತಿ ಹಿಡಿದು ವ್ಯಾಪಾರಿಗಳ ಅರ್ಜಿ ತಿರಸ್ಕರಿಸಿ ಮಳಿಗೆಯಲ್ಲಿ ಇರುವ ವ್ಯಾಪಾರಿಗಳ ಅಂಗಡಿಯನ್ನು ತೆರವುಗೊಳಿಸಿ ಮರು ಟೆಂಡರ್ ಕರೆಯುವಂತೆ ಆದೇಶ ನೀಡಿತ್ತು. ಇದರ ಆದೇಶದ ಮೇರಿಗೆ ಇಂದು ಪುರಸಭೆ ಅಧ್ಯಕ್ಷರಾದ ಜಿ.ಕೆ ಹಿರೇಮಠ, ಪುರಸಭೆ ಸರ್ವ ಸದಸ್ಯರ ಸಾತ್ ನೊಂದಿಗೆ ಪುರಸಭೆ ಮುಖ್ಯಾಧಿಕಾರಿ ಉಮೇಶ ಹಿರೇಮಠ, ಹೆಚ್ವುವರಿ ಮುಖ್ಯಾಧಿಕಾರಿ ಟಿ.ಎ. ಮಂಜುನಾಥ, ಧರ್ಮಂದ್ರಕುಮಾರ, ಪುರಸಭೆ ಲೆಕ್ಕಾಧಿಕಾರಿ ಚಿರಜೀವಿ, ಹಾಗೂ ಪುರಸಭೆ ಸಿಬ್ಬಂದಿಗಳು, ಮತ್ತು ಕುಷ್ಟಗಿ ಪೋಲಿಸ್ ಪಿ.ಎಸ್.ಐ ತಿಮ್ಮಣ್ಣ ನಾಯಕ ಪೋಲಿಸ್ ಸಿಬ್ಬಂದಿಗಳೊಂದಿಗೆ ತೆರವು ಕಾರ್ಯಚರಣೆ ಮಾಡಲಾಯಿತು.
ವರದಿ – ಸಂಪಾದಕೀಯ