ಆಲೇಮಾರಿ, ಅರೇಅಲೇಮಾರಿ ಜನಾಂಗದವರಿಂದ ನಿವೇಶನ ಸಹಿತ ವಸತಿ ಸೌಲಭ್ಯ ಒದಗಿಸಲು ಪಟ್ಟಣದ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ..

Spread the love

ಆಲೇಮಾರಿ, ಅರೇಅಲೇಮಾರಿ ಜನಾಂಗದವರಿಂದ ನಿವೇಶನ ಸಹಿತ ವಸತಿ ಸೌಲಭ್ಯ ಒದಗಿಸಲು ಪಟ್ಟಣದ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ..

ಪಟ್ಟಣ ಪಂಚಾಯತಿ ಕಾರ್ಯಾಲಯ ತಾವರಗೇರಾ ಇವರಿಗೆ ಆಲೇಮಾರಿ ಅರೇಅಲೇಮಾರಿ ಜನಾಂಗದವರಾದ ನಮಗೆ ಸೂಕ್ತ ನಿವೇಶನ ಸಹಿತ ವಸತಿ ಸೌಲಭ್ಯ ಒದಗಿಸಿಕೊಡುವ ಬಗ್ಗೆ ಮಾನ್ಯರೇ ಈ ಮೇಲ್ಕಾಣಿಸಿದ ವಿಷಯದನ್ವಯ ನಾವುಗಳು ಅಂದರೆ ಅಲೇಮಾರಿ ಅರೇ ಅಲೇಮಾರಿ ಜನಾಂಗದವರಾದ ನಾವು ತಾವರಗೇರಾ ಸಿಮೇಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ( ಗದ್ದೇರ ಹಟ್ಟಿ ) ಹಾಗೂ ಹಳ್ಳೇರ ಹಟ್ಟಿಯಲ್ಲಿ ನಮ್ಮ ಪೂರ್ವಜರ ಕಾಲದಿಂದಲೂ ನಾವು ವಾಸಿಸುತ್ತಿದ್ದು , ನಮ್ಮ ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡುತ್ತಾ ಗುಡಿಸಲಿನಲ್ಲಿ ಸುಮಾರು 80 ಕ್ಕು ಅಧಿಕ ಕುಟುಂಬಗಳು ವಾಸವಿದ್ದು ನಮಗೆ ಸರ್ಕಾರದಿಂದ ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆ ಕೂಡ ಇದ್ದು , ನಮಗೆ ಸರ್ಕಾರದ ವತಿಯಿಂದ ಮೂಲ ಭೂತ ಸೌಕರ್ಯಗಳು ಇಲ್ಲಿಯ ವರೆಗೂ ದೊರೆತಿಲ್ಲ. ಹಾಗೂ ನಮ್ಮ ಮನೆ ಗುಡಿಸಲುಗಳು ಮಳೆ ಗಾಳಿಗೆ ಸಂಪೂರ್ಣವಾಗಿ ಹಾಳಾಗುತ್ತಿದ್ದಾನೆ. ಸಾಯಂಕಾಲವಾದರೆ ಸಾಕು ಹಾವು, ಚೇಳು, ವಿಷಜಂತುಗಳು ಬರುತ್ತವೆ. ನಮ್ಮ ಚಿಕ್ಕ ಮಕ್ಕಳು ಹಾಗೂ ವಯೋವೃದ್ಧರಿಗೆ ಅನಾರೋಗ್ಯದ ಸಂದರ್ಭದಲ್ಲಿ ಮೂಲ ವೈದ್ಯಕೀಯ ಸೇವೆಗಳು ಇಲ್ಲ. ಹಾಗೂ ನಮ್ಮ ಗುಡಿಸಲು ಮನೆಗಳು ನವಿಕರಿಸಿಕೊಳ್ಳಲು ಸ್ಥಳೀಯ ಅರಣ್ಯಾಧಿಕಾರಿಗಳು ತಿವೃತರವಾಗಿ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಇದೆ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತ  ಮಾನ್ಯ ತಹಶೀಲ್ದಾರರು, ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿ ಇಲ್ಲಿಯ ಸಮಸ್ಯೆಗಳನ್ನು ಖದ್ದಾಗಿ ಮನವರಿಕೆ ಮಾಡಿಕೊಂಡು ಇಲ್ಲಿ ಯಾವುದೇ ಸರ್ಕಾರಿ ಜಮೀನು ಇರುವುದಿಲ್ಲ. ಯಾರಾದರು. ಖಾಸಗಿ ವ್ಯಕ್ತಿಗಳು ಜಮೀನನ್ನು ಕೊಟ್ಟರೆ ಮಂಜುರಾತಿ ಮಾಡಿಸುವುದಕ್ಕಾಗಿ ಆಶ್ವಾಸನೆ ನೀಡಿದ್ದರು. ಖಾಸಗಿ ವ್ಯಕ್ತಿಗಳು ಜಮೀನು ಕೊಡದೇ ಕಾರಣ, ಈ ಯೋಜನೆಯು ನೆನೆಗುದಿಗೆ ಬಿದ್ದಿತ್ತು. ಆದರೆ ಈಗ ಒಬ್ಬರು ಖಾಸಗಿ ವ್ಯಕ್ತಿಗಳಾದಂತಹ ಶ್ರೀಮಹಂತೇಶ ತಂ.ಶಿವಶಂಕ್ರಪ್ಪ ಐಲಿ ಮಾಲಿಕತ್ವದ ತಾವರಗೇರಾ ಸೀಮಾದ ಸರ್ವೇ ನಂ 58 ಹಿಸ್ಸಾ 4, ವಾರ್ಡ ನಂ .17, ಜಿಲ್ಲಾಧಿಕಾರಿಗಳಿಂದ ಮಂಜುರಾತಿ ಪಡೆದ ನಿವೇಶನಗಳನ್ನು ಸರ್ಕಾರ ಗ್ರದ ಒಪ್ಪಿರುತ್ತಾರೆ. ಆದ ಕಾರಣ ದಯಾಳುಗಳಾದ ತಾವು ಈ ಆಲೇಮಾರಿ ಜನರಿಗೆ ನಿವೇಶನ ಮತ್ತು ಮನೆಗಳು ನಿಗದಿಪಡಿಸಿದ ದರಕ್ಕೆ ಕೊಡಲು ಒದಗಿಸಿಕೊಡಲು ತಮ್ಮಲ್ಲಿ ವಿನಂತಿಸಿಕೊಂಡಿದ್ದಾರೆ. ಫಲಾನುಭವಿಗಳು ಸಂಪೂರ್ಣ ದಾಖಲಾತೆಗಳು ಈ ಕೆಳಗಿನಂತೆ ಲಗತ್ತಿಸಿದ್ದಾರೆ. ಫಲಾನುಭವಿಗಳ ದಾಖಲಾತಿ ಲಗತ್ತಿಸಿದೆ . 1. ಆಧಾರ ಕಾರ್ಡ 2. ಜಾತಿ ಮತ್ತು ಆದಾಯ 3. ಪಡಿತರ ಚೀಟಿ 4. ಫೋಟೊ. ಈ ಮನವಿಯನ್ನು ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳಾದ ನಭಿಸಾಬ್ ರವರ ಮುಖಾಂತರ ಪ್ರತಿಗಳನ್ನು 1. ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲಾಡಳಿತ ಭವನ ಕೊಪ್ಪಳ ಇವರಿಗೆ 2. ಮಾನ್ಯ ತಹಶೀಲ್ದಾರರು ತಹಶೀಲ್ದಾರ ಕಾರ್ಯಲಯ ಕುಷ್ಟಗಿ ಇವರಿಗೆ . 3. ಸನ್ಮಾನ್ಯ ಶ್ರೀಅಮರೇಗೌಡ ಬಯ್ಯಾಪೂರ ಸಾಹೇಬರು ಜನಪ್ರಿಯ ಶಾಸಕರು ಕುಷ್ಟಗಿ ವಿಧಾನಸಭಾ ಕ್ಷೇತ್ರ ಕುಷ್ಟಗಿ ಇವರಿಗೆ, ಲಕ್ಷಣ ಮುಖಿಯಾಜಿ, ಮಾಜಿ ಸದಸ್ಯರು, ಆಲೇಮಾರಿ ಅನುಷ್ಠಾನ ಸಮೀತಿ ಕೊಪ್ಪಳ ಶ್ಯಾಮೂರ್ತಿ ಅಂಚಿ, ಪಟ್ಟಣ ಪಂಚಾಯತ ಸದಸ್ಯರು, ಕೆ.ಮಹೇಶ ಗದ್ದೇರಹಟ್ಟಿ, ಗೊಲ್ಲರ ಸಮಾಜದ ಮುಖಂಡರಾದ ವೀರೇಶಪ್ಪ ಭೋವಿ, ಪಟ್ಟಣ ಪಂಚಾಯತಿ ಮಾಜಿ ಸದಸ್ಯರು. ಸುರೇಶ ದಾಸನೂರ ಗೊಲ್ಲರ ಸಮಾಜದ ಮುಖಂಡರು. ಇತರರು ಪಾಲುಗೊಂಡಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *