ಕನ್ನಡ ಸುಧೆಯೊಳ್ ಲೀನಾ….
ಏಸೂರು ಕೊಟ್ಟರು ಸರಿಯೇ ಈಸೂರು ಮಾತ್ರ ಕೊಡೆವು ಘೋಷಣೆಯೊಡನೆ ಸ್ವಾತಂತ್ರ್ಯ ಹೊಂದಿದ ಮೊದಲನೆ ಊರು |
ಶಿಕಾರಿಪುರದ ಕುಮುದ್ವತಿ ನದಿ ದಂಡೆಯ ಸ್ವಾತಂತ್ರ್ಯಸಂಗ್ರಾಮದಿ ಮಲೆನಾಡಿನ ಮುಡಿಗೆ ಗರಿಯಿತ್ತ ಹೆಮ್ಮೆಯ ಊರಿದು ಈಸೂರು |
ಅಂದು ಗಾಂಧೀಜಿಯ ಭಾರತ ಬಿಟ್ಟು ತೊಲಗಿ ಚಳವಳಿಯದು ಬ್ರಿಟೀಷರಿಗೆ ಧಿಕ್ಕಾರ ಕೂಗುತ ಇಲ್ಲಿಯುಾ ಬಿಸಿಯಲಿ ನೆಡೆದಿತ್ತು |
ಸರಕಾರಕೆ ತೆರಿಗೆಯ ನೀಡದೆ ಈ ಸೂರರು, ಸ್ವತಂತ್ರ ಗ್ರಾಮ ಬ್ರಿಟೀಷರಿಗಿಲ್ಲಿ ಪ್ರವೇಶವಿಲ್ಲ ಎಂಬ ನಾಮಫಲಕ ಪ್ರವೇಶದ್ವಾರದಿ ಹಾಕಿತ್ತು |
ಸಿಟ್ಟಿಗೆದ್ದ ಬ್ರಿಟಿಷ್ ಪೋಲೀಸರು ಲಾಠಿಬೀಸುತ ಗುಂಡುಹಾರಿಸುತ ಹೆಂಗಸರು ಮಕ್ಕಳೆನ್ನದೆ ಹಿಂಸಿಸುತ ಸೆರೆಹಾಕಿದರು ಆರೋಪಿಗಳೆನುತ |
ನ್ಯಾಯಾಲಯ ಧೀರವನಿತೆರಾದ ಪಾವ೯ತಿ,ಹಾಲಮ್ಮಗೆ ಗಡೀಪಾರು ಕೆಲವರಿಗದು ಕಾರಾಗೃಹಬಂಧನ ಜೀವಾವಧಿ ಶಿಕ್ಷೆಯ ವಿಧಿಸಿತದು |
ಕ್ರುರವಾಗಿ ವತಿ೯ಸಿದ ಸರಕಾರವು ಮುಂದಾಳಾದ ಸತ್ಯನಾರಾಯಣ ಆಚಾರಿ,ಹಾಲಪ್ಪನನು ಗಲ್ಲಿಗೇರಿಸಿ ಹೋರಾಟದ ಸೇಡನು ತೀರಿಸಿತು |
ದೇಶಸ್ವಾತಂತ್ರ್ಯ ಕಾಣುವಮುನ್ನ ಸ್ವತಂತ್ರಗೊಂಡ ಹೆಮ್ಮಯಪಡೆದು ಬಲಿದಾನವಗೈದಿಹ ವೀರರಹೊಂದಿ ಕರುನಾಡಿಗೆ ಹೆಮ್ಮೆಯ ತಂದಿಹುದು || ✍️ಡಾ” ಸುಧಾಜೋಷಿ ಕಲೆ:ಲೀನಾ ಸಂದೇಶ