ಚಿಕ್ಕಬೇರಗಿ : ಅದ್ದೂರಿಯಾಗಿ ಸಾಗಿದ ಮರಿದೇವಿ ಜಾತ್ರಾ ಮಹೋತ್ಸವ..
ಸಿಂಧನೂರು : ತಾಲೂಕಿನ ಚಿಕ್ಕಬೇರ್ಗಿ ಗ್ರಾಮದ ಗ್ರಾಮ ದೇವತೆಯಾದ ಶ್ರೀ ಮರಿದೇವಿ ದೇವತೆಯ ಉಚ್ಚಯ ಮಹೋತ್ಸವ ಡೊಳ್ಳು ಕುಣಿತ, ಭಜಂತ್ರಿ, ಸಕಲ ವೈಭವದಿಂದ ಅದ್ದೂರಿಯಾಗಿ ಜರುಗಿತು . ಕೊರೊನಾ ಹಿನ್ನೆಲೆಯಲ್ಲಿ ನಿಂತಿದ್ದ ಜಾತ್ರೆ ಸಮಾರಂಭ ಕಾರ್ಯಕ್ರಮಗಳು ಕೊರೊನಾದ ಸಡಿಲಿಕೆಯಿಂದ ಎಲ್ಲೆಡೆ ಜನರಲ್ಲಿ ಹರ್ಷ ಮನೆ ಮಾಡಿದೆ, ತಾಯಿಯ ಅಡ್ಡ ಪಲ್ಲಕ್ಕಿ ಗಂಗಾ ಸ್ನಾನ ಹಾಗೂ ತಾಯಿಯ ಪೂಜಾರಿಗಳಿಂದ ಭಕ್ತಿಯ ಹಲಗ ಕೊಂಡ ಕಾರ್ಯಕ್ರಮಗಳನ್ನು ತಾಯಿಗೆ ಹರ್ಪಿಸಲಾಯಿತು. ಜಾತ್ರೆಯ ನಿಮಿತ್ಯ ರುದ್ರ ಭೂಮಿಯಿಂದ ಎದ್ದು ಬಂದ ಶಿವರುದ್ರ ಎಂಬ ಸುಂದರ ಸಾಮಾಜಿಕ ನಾಟಕವನ್ನು ಸ್ಥಳೀಯ ಕಲಾವಿದರು ಪ್ರರಂಬಿಸಿದರು, ಗಾಯಕರಾದ ಹನುಮೇಶ ಬೇರ್ಗಿಯವರ ಸಾರಥ್ಯದಲ್ಲಿ ನಾಟಕ ನಡೆಯಿತು, ಗ್ರಾಮದ ಪ್ರಮುಖ ಬೀದಿ ಬೀದಿಗಳಲ್ಲಿ ಬಣ್ಣ ಬಣ್ಣದ ದೀಪಗಳಿಂದ ಅಲಂಕೃತ ಗೊಂಡು ನೋಡುಗರ ಕಣ್ಣುಗಳಿಗೆ ಹಿತ ತರುವಂತಿತ್ತು.
ವರದಿ – ಸೋಮನಾಥ ಹೆಚ್.ಎಂ. ಸಂಗನಾಳ