ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಯವರ 115 ನೇ ಜನ್ಮೋತ್ಸವ🌹🌹🌹🌹🌹
ಭುವಿಯಲುದಿಸಿಹ ದೇವಮಾನವ
ಭುವಿಯೊಳು ನರಮಾನವನಾಗಿ ಜನಿಸಿದ ಶ್ರೀ
ನೋಡಿಲ್ಲಿ ನಡೆದಾಡುವ ದೇವಮಾನವ ಪದವಿಗೇರಿಹ ಪರಿ//ಪ//
ಕಾಯಕಯೋಗದಿ ಕಾಯವ ತೊಡಗಿಸಿ
ಅನ್ನದಾಸೋಹ ನಿರತ ಊರೂರ ಅಲೆದೆ
ಅನ್ನ ಅಕ್ಷರ ಜ್ಞಾನದಾಸೋಹ ಜೋಳಿಗೆಯೊಡ್ಡಿ
ತನು-ಮನವ ನಿತ್ಯ ದುಡಿಮೆಗೈದ ಯೋಗಿ//೧//
ಸತ್ಯಶುದ್ಧ ಕಾಯಕದಿ ಜಗದ ಕಣ್ಣ ತೆರೆಯಿಸಿ
ಮಾನವ ಹೃದಯ ಮಂದಿರ ಹಸನಾಗಿಸಿ
ಮಾನವತಾವಾದಿ ಮಾತೃಹೃದಯಿ ನೀನಾಗಿ
ದೈವತ್ವಕ್ಕೇರಿ ನಿಂತಿಹ ಯುಗಪುರುಷ ನೀನೇ//೨//
ಯುಗದ ಜಗದ ಅಜ್ಞಾನವಳಿಸಿ ಸುಜ್ಞಾನ ಸುಧೆಬೀರಿ
ಮಿತಪ್ರಸಾದಿ ಮಿತನಿದ್ರೆಗೈದ ಋಷಿಮುನಿ
ಧ್ಯಾನ ಮಾರ್ಗದಿ ನಡೆದ ಅವತಾರಪುರುಷ ನೀ
ಜನಮಾನಸದಿ ಭಕ್ತಿಭಾವ ಬೀಜ ಬಿತ್ತಿಹ ಕೃಷಿಕನು ನೀನೇ//೩//
ಸೂರ್ಯನುದಯಕೆ ಮುನ್ನವೇ ಬೆಳಗಾಯಿತು ನಿನಗೆ
ಬ್ರಾಹ್ಮೀ ಮೂಹೂರ್ತದಿ ಆರಾಧನೆಗೆ
ಅಷ್ಟವಿಧಾರ್ಚನೆಯಲಿ ಇಷ್ಟಲಿಂಗದ ಪೂಜೆಗೆ
ಮತ್ತೊಮ್ಮೆ ಜಗದಿ ಅವತರಿಸಿ ಬಾ ಎಂದು ಕರೆವೆ//೪//
ನಿನ್ನೀ ಜನನವೇ ಮಹಾಸ್ಪೋಟ ಭುವನಕೆ
ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯೇ
ಹೊನ್ನಿನ ಹೊಗೆಯನು ಜಗದಗಲ ಹರಿಸಿದೆ
ನಿನ್ನೀ ಪರುಷಸ್ಪರ್ಶದಿ ಪಾವನವಾಯ್ತೀ ಧರೆ//೫//
ಶ್ರೀಮತಿ ಗಿರಿಜಾ ಹಿರೇಮಠ
✍️ 89719 42723