ಆಟಿಸಂ ಹಾಗೂ ಬುದ್ದಿ ಮತ್ತೆ ಬೆಳವಣಿಗೆಯಲ್ಲಿ ತೊಂದರೆ ಎದುರಿಸುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಳ: ಡಾ. ಸುರೇಶ್‌ ರಾವ್‌ ಅರೂರ್‌….

Spread the love

ಆಟಿಸಂ ಹಾಗೂ ಬುದ್ದಿ ಮತ್ತೆ ಬೆಳವಣಿಗೆಯಲ್ಲಿ ತೊಂದರೆ ಎದುರಿಸುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಳ: ಡಾ. ಸುರೇಶ್‌ ರಾವ್‌ ಅರೂರ್‌….

ಆಟಿಸಂ ನಿರ್ವಹಣೆಗೆ ದೇಶದಲ್ಲೇ ಮೊದಲ ಥ್ರೀಡಿ ವರ್ಚುಯಲ್‌ ಇಮ್ಮರ್ಸಿವ್ ರಿಯಾಲಿಟಿ ಥೆರಪಿ, ಬೆಂಗಳೂರು ಏಪ್ರಿಲ್‌ 1: ಆಟಿಸಂ ಹಾಗೂ ಬುದ್ದಿಮತ್ತೆ ಬೆಳವಣಿಗೆಯಲ್ಲಿ ತೊಂದರೆ ಎದುರಿಸುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಕಳೆದೊಂದು ದಶಕದಲ್ಲಿ ಈ ಪ್ರಮಾಣ ಶೇಡಕಾ 300 ರಷ್ಟು ಹೆಚ್ಚಾಗಿದೆ ಎಂದು ಖ್ಯಾತ ಮಕ್ಕಳ ನ್ಯೂರಾಲಜಿಸ್ಟ್‌ ಮತ್ತು ಪರಿಜ್ಮ ಮೆಡಿಕಲ್‌ ಸೆಂಟರ್‌ನ ಮುಖ್ಯಸ್ಥರಾದ ಡಾ. ಸುರೇಶ್‌ ರಾವ್‌ ಅರೂರ್‌ ಕಳವಳ ವ್ಯಕ್ತಪಡಿಸಿದರು. ಏಪ್ರಿಲ್‌ 2 ವಿಶ್ವ ಆಟಿಸಂ ದಿನಾಚರಣೆಯ ಹಿನ್ನೆಲೆಯಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 2004 ರಲ್ಲಿ 166 ಮಕ್ಕಳಲ್ಲಿ ಒಬ್ಬರಿಗೆ ಈ ರೀತಿಯ ಡಿಸ್‌ಆರ್ಡರ್‌ ಕಾಣಿಸಿಕೊಳ್ಳುತ್ತಿದ್ದರೆ, 2020 ರಲ್ಲಿ 54 ಮಕ್ಕಳಲ್ಲಿ ಒಬ್ಬರಿಗೆ ಆಟಿಸಂ ನಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಈ ರೀತಿಯ ಹೆಚ್ಚಳಕ್ಕೆ ತಜ್ಞರ ಸಮಯಪೂರ್ವಕ ಗುರುತಿಸುವಿಕೆಯ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿದ್ದರೆ, ನಿಜವಾದ ಹೆಚ್ಚಳವೂ ಕಾರಣವಾಗಿದೆ. ಕಳೆದ ಮೂರು ವರ್ಷಗಳ ನಮ್ಮನ್ನ ಕಾಡಿದ ಸಾಂಕ್ರಾಮಿಕ ರೋಗದ ಸಮಯದಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ ಎಂದು ಹೇಳಿದರು. ಮತ್ತೊಬ್ಬ ಖ್ಯಾತ ಮಕ್ಕಳ ನರತಜ್ಞರಾದ ಡಾ ಸುಧೀಂದ್ರ ಅರೂರ್‌ ಮಾತನಾಡಿ, ಇಂತಹ ಮಕ್ಕಳ ಚಿಕಿತ್ಸೆಗೆ ಪರಿಜ್ಮಾ ಚಿಕಿತ್ಸಾ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಕಳೆದ 30 ವರ್ಷಗಳಿಂದ ಇಲ್ಲಿ ಅತ್ಯುತ್ತಮ ಹಾಗೂ ಕೈಗೆಟಕುವ ದರದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಮಕ್ಕಳ ನ್ಯೂರಾಲಜಿ ಸಂಬಂಧಿತ ರೋಗಗಳಿಗೆ ಚಿಕಿತ್ಸೆ ನೀಡುತ್ತಿರುವ ದೇಶದ ಪ್ರಮುಖ ಕೇಂದ್ರವಾಗಿರುವ ಪರಿಜ್ಮಾದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಅಖಿಲ್ ಥ್ರೀಡಿ ವರ್ಚುಯಲ್‌ ಇಮ್ಮರ್ಸಿವ್‌ ರಿಯಾಲಿಟಿ ಥೆರಪಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ನ್ಯೂರೋ ಡೆವಲಪ್‌ಮೆಮಂಟಲ್‌ ಡಿಸ್‌ಆರ್ಡರ್‌ ಹೊಂದಿರುವ ಮಕ್ಕಳ ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಚಿಕಿತ್ಸಾ ವಿಧಾನ ಇದಾಗಿದೆ ಎಂದರು.

ಥ್ರೀಡಿ ವರ್ಚುಯಲ್‌ ಇಮ್ಮೇರ್ಸಿವ್‌ ರಿಯಾಲಿಟಿ ಥೆರಪಿ ಕೇಂದ್ರದ ವಿಶೇಷತೆಗಳು: ಆಟಿಸಂ, ಸೆರಬ್ರಲ್‌ ಪಾಲ್ಸಿಯಂತಹ ಆರೋಗ್ಯ ಸಮಸ್ಯೆಗಳಿಗೆ ಅತ್ಯಾಧುನಿಕ ಚಿಕಿತ್ಸೆಯನ್ನು ಒಳಗೊಂಡಿದೆ. ನಿಜ ಜೀವನದ ಘಟನೆಯಂತೆಯೇ ನಿರ್ಮಿಸಲಾಗಿರುವ ಇಮ್ಮೆರ್ಸಿವ್‌ ರಿಯಾಲಿಟಿಯಲ್ಲಿ ಮಕ್ಕಳು ನಿಜ ಜೀವನದಲ್ಲಿ ತಾವು ಕಲಿಯದೇ ಇರುವಂತಹ ಸಂವಹನ ಕೌಶಲ್ಯವನ್ನು ಇಲ್ಲಿ ಕಲಿಯಬಹುದಾಗಿದೆ. ಆಯಾ ಮಕ್ಕಳ ಅನುಗುಣವಾಗಿ ಅವರು ಹೆದರುವ ಅಥವಾ ಅವರಲ್ಲಿ ಧೈರ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಇರಬೇಕಾದ ವಾತಾವರಣವನ್ನು ಕೂಡಾ ಇದರ ಮೂಲಕ ನಿರ್ಮಿಸಬಹುದಾಗಿದೆ. ಇಂತಹ ಸೌಲಭ್ಯ ಹೊಂದಿರುವ ದೇಶದಲ್ಲೇ ಮೊದಲ ಚಿಕಿತ್ಸಾ ಕೇಂದ್ರ ಇದಾಗಿದೆ.  ಆದಷ್ಟು ಬೇಗ ಈ ತೊಂದರೆಗಳನ್ನು ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಚಿಕಿತ್ಸೆಯ ಪರಿಣಾಮ ಹೆಚ್ಚು. ಒಂದುವರೆ ವರ್ಷದಿಂದ ಚಿಕಿತ್ಸೆ ಪ್ರಾರಂಭಿಸಿದ ಮಗು 2 ವರ್ಷದಲ್ಲಿ ಚಿಕಿತ್ಸೆ ಪ್ರಾರಂಭಿಸಿದ ಮಗುವಿಗಿಂತಾ ಬಹಳ ಬೇಗ ಚೇತರಿಸಿಕೊಳ್ಳುವುದನ್ನ ನಾವು ನೋಡಿದ್ದೇವೆ. ಅಲ್ಲದೆ, ಮಲ್ಟಿ ಡಿಸಿಪ್ಲೀನರಿ ಥೆರಪಿ ಬಹಳಷ್ಟು ಉಪಯೋಗವಾಗುತ್ತದೆ ಎಂದು ಹೇಳಿದರು.

ವರದಿ – ಹರೀಶ ಶೇಟ್ಟಿ ಬೆಂಗಳೂರು

Leave a Reply

Your email address will not be published. Required fields are marked *