ಯಲಬುರ್ಗಾ ಸಂಸ್ಥಾನ ಹಿರೇಮಠದ ಸಿದ್ದರಾಮೇಶ್ವರ ಸ್ವಾಮೀಜಿ ಸಾಮೂಹಿಕ ವಿವಾಹಗಳಿಂದ ಸಾಮಾಜಿಕ ಪರಿವರ್ತನೆ ಎಂದರು.

Spread the love

ಯಲಬುರ್ಗಾ ಸಂಸ್ಥಾನ ಹಿರೇಮಠದ ಸಿದ್ದರಾಮೇಶ್ವರ ಸ್ವಾಮೀಜಿ ಸಾಮೂಹಿಕ ವಿವಾಹಗಳಿಂದ ಸಾಮಾಜಿಕ ಪರಿವರ್ತನೆ ಎಂದರು.

ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳು ಸೌಹಾರ್ದ ಕೇಂದ್ರಗಳಾಗಿ ಪರಿವರ್ತನೆ ಯಾಗಬೇಕಾದರೆ ಸಾಮೂಹಿಕ ವಿವಾಹದಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ನಡೆಸಬೇಕೆಂದು ಯಲಬುರ್ಗಾ ಸಂಸ್ಥಾನ ಹಿರೇಮಠದ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು. ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದಲ್ಲಿ ಶ್ರೀ ಗುರು ಸಚ್ಚಿದಾನಂದ ಅವಧೂತರ ಪುರಾಣ ಮಂಗಲೋತ್ಸವ ಏಳು ದಿನಗಳ ಕಾಲ ನಡೆಯಲಿದ್ದು ಹಾಗೂ ಪ್ಯಾಟಿ ಬಸವೇಶ್ವರ ಮತ್ತು ಶ್ರೀ ಕರಿಸಿದ್ದೇಶ್ವರ ದೇವಸ್ಥಾನದ ಮುಂಬಾಗದಲ್ಲಿ 6ನೇ ವರ್ಷದ ಸರ್ವಧರ್ಮ 8 ಜೋಡಿ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದರು. ಸಾಮೂಹಿಕ ವಿವಾಹಗಳಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿಯ ಬದುಕು ಕಂಡುಕೊಳ್ಳಬಹುದು. ಜೊತೆಗೆ ಪರಸ್ಪರ ಪ್ರೀತಿ, ವಿಶ್ವಾಸ ವೃದ್ಧಿಸುತ್ತದೆ. ‌ ಮನುಷ್ಯ ಜೀವನದಲ್ಲಿ ಸರಳತೆ ಪಾಲಿಸಬೇಕು. ಅಂದಾಗ ಮಾತ್ರ ಜಿವನದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಲು ಸಾಧ್ಯ ಎಂದರು. ನಂತರ ಮಾತನಾಡಿದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿಯವರು ಇಂದಿನ ದಿನಮಾನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಕಬ್ಬಿಣದ ಕಡಲೆ ಇದ್ದಂತೆ. ಉಳ್ಳವರು ಸಾಮೂಹಿಕ ವಿವಾಹದಂತಹ ಸತ್ಕಾರ್ಯಕ್ಕೆ ಮುಂದಾಗಿ ಬಡವ, ಶ್ರೀಮಂತ, ಮೇಲು, ಕೀಳೇನ್ನದೆ ಎಲ್ಲರೂ ಒಂದೇ ಎನ್ನುವ ಭಾವನೆಯೊಂದಿಗೆ ನಡೆಸುವ ಎಲ್ಲ ಸತ್ಕಾರ್ಯಗಳಿಗೆ ಜಯ ಖಂಡಿತ. ಇಂತಹ ಸಾಮಾಜಿಕ ಕಳಕಳಿಯಿಂದ ನಡೆಯುವ ಧರ್ಮ ಕಾರ್ಯಗಳು ಭಗವಂತನಿಗೆ ಇಷ್ಟ. ಜೊತೆಗೆ ಸಮಾಜವನ್ನು ಈಗಲೂ ಕಾಡುತ್ತಿರುವ ವರದಕ್ಷಿಣೆ ನಿರ್ಮೂಲನೆಗೆ ಎಲ್ಲರೂ ಸಂಕಲ್ಪ ತೊಡಬೇಕು ಎಂದರು. ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಉಳ್ಳಾಗಡ್ಡಿ  ಮಾತನಾಡಿ, ಸಮಾಜದಲ್ಲಿ ಆರ್ಥಿಕ ಹೊರೆಯಿಂದ ಬಳಲುತ್ತಿರುವರ ‌ನೆಮ್ಮದಿ ಜೀವನ ನಡೆಸಲು ಸಾಮೂಹಿಕ ವಿವಾಹಗಳು ‌ಹೆಚ್ಚಾಗಿ ನಡೆಯಬೇಕು. ಎಂದು ಹೇಳಿದರು, ನಿರೂಪಣೆ ಮಾಡಿದ ರಮೇಶ್ ಸಿಳ್ಳಿನ ಪ್ರಾಸ್ತಾವಿಕವಾಗಿ ಮಾತನಾಡಿದ ಬಸವರಾಜ ಸೀಳಿನ್ ವಕೀಲರು ಹಾಗೂ ರಾಜಣ್ಣ ಪಲ್ಲೇದ ಮತ್ತು ಗ್ರಾಂ ಪಂ ಸದಸ್ಯ ಬಸಪ್ಪ ಅಕ್ಕಿ , ಇದೇ ಸಂದರ್ಭದಲ್ಲಿ ಒಪ್ಪತ್ತೇಶ್ವರ ಸ್ವಾಮಿಗಳು ಒಪ್ಪತ್ತೇಶ್ವರ ಮಠ ಗುಳೇದಗುಡ್ಡ, ಗುರುಪಾದೇಶ್ವರ ಸ್ವಾಮಿಗಳು ಗುಲಗಂಜಿ ಮಠ ರೋಣ ಚನ್ನಬಸವ ಸ್ವಾಮೀಜಿಗಳು ಶಾಖಾ ಶಿವಯೋಗಮಂದಿರ ನಿಡಗುಂದಿಕೊಪ್ಪ ಸಿದ್ದೇಶ್ವರ ಸ್ವಾಮಿ ಸಿದ್ಧಾರೂಢ ಮಠ, ಗ್ರಾಂ ಪಂ ಉಪಾಧ್ಯಕ್ಷರಾದ ಚಂದ್ರಬಾಯಿ ಕುದರಿ, ಶ್ರೀ ಕರಿಸಿದ್ದೇಶ್ವರ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ವೀರಭದ್ರಪ್ಪ ಪಲ್ಯದ ಅಧ್ಯಕ್ಷರಾದ ಬಸವರಾಜ್ ಮಠದ  ಮುಖಂಡರಾದ ಚಂದ್ರು ದೇಸಾಯಿ ನವೀನ್ ಗುಳಗಣ್ಣವರ, ಹೇಮರೆಡ್ಡಿ ರೆಡ್ಡೇರ ಮನೋಹರ್ ಮತ್ತು ಶರಣಪ್ಪ ಪುರ್ತಗೇರಿ ಗ್ರಾಂ ಪಂ ಸದಸ್ಯರು ಗ್ರಾಮದ ವರೆಲ್ಲರೂ ಹಾಗೂ ಪರವೂರಿನ ಸಕಲ ಸದ್ಭಕ್ತರ ಎಲ್ಲರೂ ಭಾಗವಹಿಸಿದ್ದರು,

ವರದಿ – ಹುಸೇನಬಾಷಾ ಮೊತೇಖಾನ.

Leave a Reply

Your email address will not be published. Required fields are marked *