ಪಟ್ಟಣದಲ್ಲಿಂದು ಶ್ರೀ ಕನಕದಾಸರ ಪುತ್ಥಳಿ ಅನಾವರಣ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಇವರಿಂದ.
ಕನಕದಾಸರ ಜೀವನ ಸಂದೇಶ ಮಾನವ ಕುಲದ ಬದುಕಿಗೆ ಸಂಜೀವಿನಿ ದ್ರವ್ಯ ಇದ್ದಂತಾಗಿದೆ. ದಾಸ ಸಾಹಿತ್ಯದಲ್ಲಿ ದಿಗ್ಗಜರೆನಿಸಿಕೊಂಡಿರುವ ಕನಕದಾಸರು ಒಬ್ಬರಾಗಿದ್ದು, ಇವರಿಗೆ ದಾಸ ಸಾಹಿತ್ಯದಲ್ಲಿ ವಿಶಿಷ್ಠ ಸ್ಥಾನವಿದೆ. ಕನಕದಾಸರು ಸಮಾಜದ ಕೆಳಸ್ತರದಿಂದ ಬಂದವರಾಗಿದ್ದರಿಂದ ಕೆಳ ಜಾತಿಯವರ ನೋವಿನ ಅರಿವು ಮೇಲ್ವರ್ಗದವರ ವೈಭವ ಜೀವನದ ಅನುಭವ ಚೆನ್ನಾಗಿ ಗೊತ್ತಿತ್ತು. ತಮ್ಮ ಕಾವ್ಯ ಕೀರ್ತನೆಗಳಲ್ಲಿ ಸಮಕಾಲೀನ ಜನಜೀವನದ ಚಿತ್ರಣವನ್ನು ಬಹು ಮಾರ್ಮಿಕವಾಗಿ ಚಿತ್ರಿಸಿ ಸಮಾಜಕ್ಕೆ ಸ್ಫೂರ್ತಿಯಾಗಿದ್ದಾರೆ ಎಂದರು. ಸಾಮಾಜಿಕ ಸಮಾನತೆ ಹಾಗೂ ಧರ್ಮ ಉದ್ಧಾರಕ್ಕಾಗಿ ಶ್ರಮಿಸಿದ ಕನಕದಾಸರು ವ್ಯಕ್ತಿಯ ವ್ಯಕ್ತಿತ್ವ ಮತ್ತು ಚಿಂತನೆಯಲ್ಲಿ ಬದಲಾವಣೆ ಆಗಬೇಕೆಂಬ ಹಂಬಲ ಇಟ್ಟುಕೊಂಡಿದ್ದರು. ಸಮಾಜದ ಅಂಕು ಡೊಂಕುಗಳನ್ನು ತಮ್ಮ ಕೀರ್ತನೆಗಳ ಮೂಲಕ ತಿದ್ದಿ ಸಮಾಜಕ್ಕೆ ನೈತಿಕ ಶಿಕ್ಷಣ ಸಂದೇಶವನ್ನು ನೀಡಿದ ಇವರು ಜೀವನದ ತತ್ವ ಸಿದ್ದಾಂತ ಇಂದಿನ ಮನುಕುಲಕ್ಕೆ ದಾರಿ ದೀಪವಾಗಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ತಾವರಗೇರಾ ಪಟ್ಟಣದ ಕನಕದಾಸ ವೃತ್ತದಲ್ಲಿ ಕನಕದಾಸರ ಪುತ್ತಳಿಯನ್ನು ಅನಾವರಣಗೊಳಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಉದ್ಯಮಿ ಅಯ್ಯನಗೌಡ ಮಾಲಿಪಾಟೀಲ್, ಶೇಖರಗೌಡ ಪೊಲೀಸ್ ಪಾಟೀಲ್, ಕೆ ಮಹೇಶ್, ವೀರಭದ್ರಪ್ಪ ನಾಲತವಾಡ, ಸಾಗರ ಭೇರಿ, ಬಸಪ್ಪ ನಾಲತವಾಡ, ನಾದೀರ ಪಾಷಾ ಮುಲ್ಲಾ, ಬಸನಗೌಡ ಓಲಿ, ಶಿವನಗೌಡ, ರಾಘವೇಂದ್ರ ಗರ್ಜಿನಾಳ, ನಿರುಪಾದಪ್ಪ ಪುಂಡಗೌಡರ, ಬುದ್ದೆಗೌಡ, ನಿಂಗಪ್ಪ ಸುದ್ದಿ, ಹನುಮಂತ ಮದ್ದಿನ್, ಮಾನಪ್ಪ ಮದ್ದಿನ್, ಲಕ್ಷ್ಮಣ ಸಿಂಗ್ ವಗರನಾಳ ಸೇರಿದಂತೆ ಸಮಾಜದ ಮುಖಂಡರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು, ಕಾರ್ಯಕ್ರಮದ ಸಾನಿಧ್ಯವನ್ನು ಬಾದಿಮನಾಳದ ಶ್ರೀ ಶಿವ ಸಿದ್ದೇಶ್ವರ ಸ್ವಾಮಿಗಳು, ಬಸಾಪಟ್ಟಣದ ಶ್ರೀ ಸಿದ್ದಯ್ಯ ಸ್ವಾಮಿಗಳು, ಸ್ಥಳೀಯ ಸಿದ್ದಾರೋಡ ಮಠದ ಶ್ರೀ ಕುಮಾರ ಸಿದ್ದಾರೋಡ ಸ್ವಾಮಿಗಳು ವಹಿಸಿದ್ದರು. ಕುರುಬರು ಜನಾಂಗದ ಹಿರಿಯ ಮುಖಂಡರು ಹಾಗೂ ಯುವ ನಾಯಕರು ಪಾಲುಗೊಂಡು ಈ ಪುತ್ಥಳಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.