ಭಾರತೀಯ ಸೇನೆಯಲ್ಲಿ ಬರೋಬ್ಬರಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ಸ್ವಗ್ರಾಮಕ್ಕೆ ಮರಳಿದ ಯೋಧರಿಗೆ ಅದ್ದೂರಿ ಸ್ವಾಗತ..
ಭಾರತೀಯ ಸೇನೆಯಲ್ಲಿ ಬರೋಬ್ಬರಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ಸ್ವಗ್ರಾಮಕ್ಕೆ ಮರಳಿದ 3 ಜನ ಯೋಧರಾದ ಕಾಶಿನಾಥ ಗುರವ , ಬಸಪ್ಪ ಹಳ್ಳದಮಳ , ಮಹೇಶ ಹೊಸಟ್ಟಿ ಅವರನ್ನು ತಾಲೂಕಿನ ಮಾಜಿ ಸೈನಿಕರ ಸಂಘ ಹಾಗೂ ಅಥಣಿ ಜನತೆ ಅದ್ಧೂರಿ ಸ್ವಾಗತದ ಮೂಲಕ ಬರಮಾಡಿಕೊಳ್ಳಲಾಯಿತು . ಸ್ಥಳೀಯ ಗಚ್ಚಿನಮಠದಲ್ಲಿ ಮಾಜಿ ಸೈನಿಕರು ಹಾಗೂ ಗ್ರಾಮಸ್ಥರು ಸನ್ಮಾನಿಸಿದರು . ಉಡುಗೊರೆ , ಹೂಗುಚ್ಛ ನೀಡುವ ಜೊತೆಗೆ ಆರತಿ ಬೆಳಗಿ ಯೋಧರನ್ನು ಬರಮಾಡಿಕೊಳ್ಳಲಾಯಿತು . ಯೋಧರ ಸಾರ್ಥಕ ಸೇವೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ , ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು . ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ ಶಿವಣ್ಣ ಕೆ . ಮಾತನಾಡುತ್ತಾ 03 ಜನ ಯೋಧರು ಇಂದು ತಾಲ್ಲೂಾಡಿಗೆ ಮರಳಿದ್ದಾರೆ . ಅದ್ದೂರಿಯಾಗಿ ಸ್ವಾಗತಿಸುವ ಕಾರ್ಯಕ್ಕೆ ತಾಲೂಕಿನ ವತಿಯಿಂದ ನಾಂದಿ ಹಾಡಿದ್ದೇವೆ . ಯುವಕರು ಸೇನೆಗೆ ಹೆಚ್ಚೆಚ್ಚು ಸೇರಬೇಕು ಎಂಬ ಕಾರಣಕ್ಕೆ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು . ಈ ವೇಳೆ ಸಿ.ಪಿ.ಐ ಶಂಕರಗೌಡ ಬಸನಗೌಡ , ಪಿಎಸ್‌ಐ ಕುಮಾರ ಹಾಡಕರ , ಧರೆಪ್ಪ ಠಕ್ಕಣ್ಣವರ , ಶಿವಮಲ್ಲಪ್ಪ ಕುಳಲಿ , ರವಿ ಕೊಖಳೆ , ಸೋಮನಿಂಗಪ್ಪ ಶರಣ , ಪ್ರಶಾಂತ ಕರೋಲಿ , ಪ್ರಭಾಕರ ಐಗಳಿ , ಡಾ ಮಹಾದೇವ ಬನ್ನಕ್ಕಗೋಳ , ಬಸವರಾಜ ಗುರವ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ – ಮಹೇಶ ಶರ್ಮಾ