ಇದೇ ವರ್ಷದಲ್ಲಿ ಅಥಣಿಯಲ್ಲಿ ಕೃಷಿ ಕಾಲೇಜು ಆರಂಭಿಸುವೆ:- ಲಕ್ಷ್ಮಣ ಸವದಿ

Spread the love

ಇದೇ ವರ್ಷದಲ್ಲಿ ಅಥಣಿಯಲ್ಲಿ ಕೃಷಿ ಕಾಲೇಜು ಆರಂಭಿಸುವೆ:- ಲಕ್ಷ್ಮಣ ಸವದಿ

ಅಥಣಿ: ಇದೇ ವರ್ಷಕ್ಕೆ ಕೃಷಿ ಮಹಾವಿದ್ಯಾಲಯ ಪ್ರಾರಂಭ ಮಾಡುವ ಗುರಿಯಲ್ಲಿದ್ದೇವೆ ಜೂನ್ ಅಥವಾ ಜುಲೈ ತಿಂಗಳಲ್ಲಿ ಕೇಂದ್ರದ ಸಚಿವರನ್ನು ಕರೆಸಿ ಕೃಷಿ ಕಾಲೇಜು ಉದ್ಘಾಟನೆ ಮಾಡುವ ಸಂಕಲ್ಪ ತೊಟ್ಟಿರುವುದಾಗಿ ಮಾಜಿ ಡಿಸಿಎಂ ಹಾಗೂ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ ಹೇಳಿದರು. ನಿನ್ನೆ ಅವರು ತಾಲೂಕಿನಲ್ಲಿ ನದಿ ಇಂಗಳಗಾವ ದಿಂದ ಅರವಟಗಿ ವರೆಗಿನ ರಸ್ತೆ, ಕರ್ಲಟ್ಟಿ ಇಂದ ಹಳೆ ಸಾವಳಗಿ ರಸ್ತೆ, ಅಥಣಿಯಿಂದ ಹಳೆತಂಗಡಿ ರಸ್ತೆ, ಹೊಸಟ್ಟಿ ಇಂದ ಮದಬಾವಿವರೆಗಿನ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ. ಹೊಸಟ್ಟಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೋರ್ ಕಮಿಟಿ ಸಭೆಯಲ್ಲಿ ಸಲಹೆ ಸೂಚನೆಗಳನ್ನು ಪಡೆದು 12ನೇ ತಾರೀಖಿನಿಂದ ಇಡೀ ರಾಜ್ಯಾದ್ಯಂತ ಪಕ್ಷ ಸಂಘಟನೆ ಕಾರ್ಯಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಸಿಎಂ ಬಸವರಾಜ ಬೊಮ್ಮಾಯಿ,ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇವೆ ಎಂದು ಹೇಳಿದರು. ಅಲ್ಲದೆ ಬಸವೇಶ್ವರ ಏತ ನೀರಾವರಿ ಯೋಜನೆ ಕುರಿತು ಮಾಹಿತಿ ನೀಡಿದ ಅವರು ಈ ಯೋಜನೆ ಪೂರ್ಣಗೊಳಿಸುವಲ್ಲಿ ಸರ್ಕಾರ ಹಾಗೂ ಗುತ್ತಿಗೆದಾರರ ನಡುವೆ ತೊಂದರೆ ಉಂಟಾಗಿ ಯೋಜನೆ ಅಪೂರ್ಣವಾಗಿದೆ ಶೀಘ್ರದಲ್ಲೇ ನೀರಾವರಿ ಸಚಿವರ ನೇತೃತ್ವದಲ್ಲಿ ಯೋಜನೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ಈ ವೇಳೆ ವಿವಿಧ ಮುಖಂಡರು, ಅಭಿಮಾನಿಗಳು, ಗ್ರಾಮಸ್ಥರು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *