ತಾವರಗೇರಾ ಪಟ್ಟಣದ 15ನೇ ವಾರ್ಡಿನಲ್ಲಿ ಸುಡುಗಾಡ ಸಿದ್ದರ ಸಮಾಜದ ಶ್ರೀ ದುರ್ಗಾದೇವಿಯ ಅದ್ದೂರಿ ಜಾತ್ರಾ ಮಹೋತ್ಸವ..
ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ 15ನೇ ವಾರ್ಡಿನಲ್ಲಿ ಬರುವ ಸುಡುಗಾಡ ಸಿದ್ದರ ಸಮಾಜದವತಿಯಿಂದ ಇಂದು ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಜರುಗಿತು. ಈ ಜಾತ್ರಾ ಮಹೋತ್ಸವದಲ್ಲಿ ಊರಿನ ಗಣ್ಯರು ಹಾಗೂ ಸಮಾಜದ ಬಂದು ಮಿತ್ರರು ಪಾಲುಗೊಂಡು ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ಚಾಲನೆ ನೀಡಿದರು. ಶ್ರೀ ದುರ್ಗಾದೇವಿಯ ಜಾತ್ರಾ ಮಹೋತ್ಸವಕ್ಕೆ ಸುಡುಗಾಡ ಸಿದ್ದರ ಸಮಾಜದ ರಾಜ್ಯ ಅಧ್ಯಕ್ಷರಾದ ಸಾಯಿಬಣ್ಣರವರು ಪಾಲುಗೊಂಡಿದ್ದರು. ಈ ಜಾತ್ರಾ ಮಹೋತ್ಸವದ ಕಾರ್ಯಕ್ರಮದ ನಿಮಿತ್ಯ ರಾಜ್ಯಧ್ಯಾಕ್ಷರಿಗೆ ಸುಡುಗಾಡ ಸಿದ್ದ ಸಮಾಜದವತಿಯಿಂದ ಸನ್ಮಾನ ಕಾರ್ಯಕ್ರಮವು ಜರುಗಿತು. ಈ ವೇಳೆಯಲ್ಲಿ ಶ್ರೀ ಲಕ್ಷ್ಮಣ ಮುಖಿಯಾಜಿ ಹಾಗೂ ಸುಡುಗಾಡ ಸಿದ್ದರ ಸಮಾಜದ ಹಿರಿಯ ಮುಖಂಡರು, ಯುವಕರು, ಹಾಗೂ ಮಹಿಳೆಯರು, ಮಕ್ಕಳು ಪಾಲುಗೊಂಡಿದ್ದರು.
ವರದಿ – ಸೋಮನಾಥ ಹೆಚ್.ಎಂ.