ಸಕ್ಷಮ ಸಂಸ್ಥೆ ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ ಶಿವಮೊಗ್ಗ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಿಗೆ ಧನ್ಯವಾದಗಳು ಸಲ್ಲಿಸಿದ ಕ್ಷಣ..
ಮಾನ್ಯ ಜಿಲ್ಲಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿಗೆ ಹೋಗುವ ದಾರಿಯಲ್ಲಿ ಬ್ಯಾಂಪ್ ಮಾಡಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು . ತಮ್ಮಲ್ಲಿ ಶಿವಮೊಗ್ಗ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ , ಸಾಗರ ರಸ್ತೆ , ಶಿವಮೊಗ್ಗ ಇಲ್ಲಿ ಸ್ಮಾರ್ಟ್ ಸಿಟಿಯಿಂದ ಕಾಮಗಾರಿ ಮಾಡಿದ್ದು , ಇದರಿಂದ ಅಂಗವಿಕಲರು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿಗೆ ಹೋಗಿ ಬರಲು ಅನಾನುಕೂಲವಾದ ಬಗ್ಗೆ ತಮ್ಮಲ್ಲಿ ನಮ್ಮ ಸಂಸ್ಥೆ ಮನವಿ ಸಲ್ಲಿಸಿದ್ದು , ನಮ್ಮ ಮನವಿಯನ್ನು ಪುರಸ್ಕರಿಸಿ ಸದರಿ ಕಛೇರಿಗೆ ಅಂಗವಿಕಲರು ಹೋಗಿ ಬರಲು ಅನುಕೂಲವಾಗುವಂತೆ ಬ್ಯಾಂಪ್ ವ್ಯವಸ್ಥೆ ಮಾಡಿಸಿಕೊಟ್ಟಿದ್ದಕ್ಕಾಗಿ ಸಕ್ಷಮ ಸಂಸ್ಥೆ ಶಿವಮೊಗ್ಗ ಜಿಲ್ಲಾ ಶಾಖೆ ಈ ಮೂಲಕ ತಮಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ . ಅಂಗವಿಕಲರ ಬಗ್ಗೆ ತಮ್ಮ ಕಾಳಜಿಗೆ ನಾವು ಅಭಾರಿಯಾಗಿರುತ್ತೇವೆ .
ವರದಿ – ಸಂಪಾದಕೀಯ