“ಶಿರಬೂರ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಪ್ರಾಥಮಿಕ ಪ್ರೌಢಶಾಲೆ ವಾರ್ಷಿಕ ಸ್ನೇಹ ಸಮ್ಮೇಳನ ಮಾಡಲಾಯಿತು“
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಶಿರಬೂರ ಮಹಾಲಕ್ಷ್ಮಿ ದೇವಸ್ಥಾನ ರಂಗಮಂದಿರದಲ್ಲಿ ಪ್ರಾಥಮಿಕ ಪ್ರೌಢಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಗುಣದಾಳ. ಶ್ರೀ ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆ ಶಿರಬೂರ ಶಿಕ್ಷಣ ಸಂಸ್ಥೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡ ಶ್ರೀ ಮ.ನಿ. ಪ್ರ.ಸ್ವ.ಶಿವಲಿಂಗ ಮಹಾಸ್ವಾಮಿಗಳು ಬಿದರಿ ಕಲ್ಮಠ ಸವದತ್ತಿ ಮಾತನಾಡಿ ಹೇಳಿದರು, ಈ ಶಿಕ್ಷಣ ಸಂಸ್ಥೆ ಇನ್ನು ಉತ್ತರೋತ್ತರವಾಗಿ ಬೆಳೆಯಲಿ ಉನ್ನತ ಮಟ್ಟದ ಶಿಕ್ಷಣ ನೀಡುತ್ತಿದ್ದಾರೆ ಶಿಕ್ಷಣಕ್ಕೆ ಪ್ರಾಮುಖ್ಯತೆ ಎಲ್ಲಾ ಕಡೆಯ ಕೊಡುತ್ತಿದ್ದಾರೆ ಈ ಸಂಸ್ಥೆ ಉತ್ತಮವಾಗಿ ಸಾಗಲಿ ಎಂದು ಹಾರೈಸಿದರು. ಮನೆಯ ಮೊದಲ ಪಾಠಶಾಲೆ ಪಾಲಕರು ಶಿಕ್ಷಕರು ಮಕ್ಕಳಿಗೆ ಒಳ್ಳೆಯ ವಿಚಾರಗಳನ್ನು ಒಳ್ಳೆಯ ಸಂಸ್ಕೃತಿಯನ್ನು ಕಲಿಸಿಕೊಡಬೇಕು ಆದಷ್ಟು ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವುದು ಕಡಿಮೆ ಮಾಡಿ ಓದಲು ಹೇಳಬೇಕು ತಿಂಗಳಿಗೆ ಒಂದು ಸಾರಿ ಮಕ್ಕಳು ಹೇಗೆ ವಿದ್ಯಾಭ್ಯಾಸ ಮಾಡುತ್ತಾರೆ ಅಂತ ಅವರ ಶಾಲೆಗೆ ಹೋಗಿ ಅವರ ಗುರುಗಳಿಗೆ ಭೇಟಿ ನೀಡಬೇಕು ಅಂದಾಗೆ ನಮ್ಮ ಮಕ್ಕಳ ಬಗ್ಗೆ ನೀವು ಕಾಳಜಿ ತೆಗೆದುಕೊಂಡ ಹಾಗೆ ಎಂದು ಪ್ರಸ್ತುತವಾಗಿ ಮಾತನಾಡಿದ ಶ್ರೀಮತಿ ಹೇಮಾ ಪಾಟೀಲ್. 25 ವರ್ಷಗಳಿಂದ ಈ ಸಂಸ್ಥೆ ನಡೆಸಿಕೊಂಡು ಬಂದಿದ್ದೇವೆ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಬೇಕು ಎಂದು ಈ ಸಂಸ್ಥೆಯ ಉದ್ದೇಶವಾಗಿದೆ ಶ್ರೀ ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆ ಶಿರಬೂರ ನಲ್ಲಿ 215 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ, ಶ್ರೀ ಸ್ವಾಮಿ ವಿವೇಕಾನಂದ ಗುಣದ ಪ್ರೌಢಶಾಲೆ ನಲ್ಲಿ 750 ಜನ ವಿದ್ಯಾರ್ಥಿಗಳು ಓದುತ್ತಿದ್ದಾರೆ, ಆದರೆ ಅದೇ ರೀತಿ ಶ್ರೀ ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆ ಬಿದರಿಯಲ್ಲಿ 275 ಜನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ, ಮಕ್ಕಳನ್ನು ಬಿಡದೆ ಶಾಲೆಗೆ ನೀವು ಕಳಿಸಿ ಮಕ್ಕಳ ಭವಿಷ್ಯವನ್ನು ನಾವು ನೀಡುತ್ತೇವೆ ಎಂದು ಕಾರ್ಯಾಧ್ಯಕ್ಷರಾದ ಶ್ರೀ ಬಿಆರ್ ಮಠಪತಿ ಅವರು ಹೇಳಿದರು. ಶ್ರೀ ಸಂಗಯ್ಯ ಮ ಪೂಜಾರಿ, ಶ್ರೀ ಚಿಕ್ಕಯ್ಯ ಸ್ವಾಮಿಗಳು ಸಿ ಹಿರೇಮಠ್ , ಶ್ರೀ ರಾಮನಗೌಡ ಎಸ್ ಪಾಟೀಲ್ ಉದ್ಘಾಟನೆ ಮಾಡಿದರು. ಮಲ್ಲನಗೌಡ ಪಾಟೀಲ್ ಜ್ಯೋತಿ ಬೆಳಗಿಸಿದರು, ವಿಶೇಷ ಉಪನ್ಯಾಸಕರು ಶ್ರೀಮತಿ ಹೇಮಾ ಆರ್ ಪಾಟೀಲ್ ಆಗಮಿಸಿದ್ದರು. ಶ್ರೀ ಜಿ ವಿ ಮಠಪತಿ ಅಧ್ಯಕ್ಷರು ಸ್ವಾಮಿ ವಿವೇಕಾನಂದ ಸಂಸ್ಥೆ ಗುಣದಾಳ ಇವರು ಅಧ್ಯಕ್ಷರು ವಹಿಸಿಕೊಂಡಿದ್ದರು.
ಮುಖ್ಯ ಅತಿಥಿಗಳು ಶ್ರೀ ಟಿ ಬಿ ಪಚ್ಚನ್ನವರ, ಶ್ರೀ ಬಿ ಕೆ ನಿಂಗನೂರ, ಶ್ರೀ ಬಸನಗೌಡ ಪಾಟೀಲ್, ಶ್ರೀ ಸುಭಾಷ್ ಗೌಡ ಪೊತರೆಡ್ಡಿ, ಶ್ರೀ ಉದಯ್ ಗೌಡ ಪಾಟೀಲ್, ಶ್ರೀ ಅಣ್ಣಪ್ಪ ಗೌಡ ಪಾಟೀಲ್, ಶ್ರೀ ಆನಂದ್ ಕೋನರೆಡ್ಡಿ, ಶ್ರೀ ನಾರಾಯಣ ಗೌಡ ಪಾಟೀಲ್, ಶ್ರೀ ರಮೇಶ್ ಸಂಗಮೇಶ್. ಅದೇ ರೀತಿಯಾಗಿ ಶ್ರೀ ಎಸ್ ಆರ್ ಮಠಪತಿ, ಶ್ರೀ ವಿ ಆರ್ ಸಿಂಧೂರ್, ಶ್ರೀಮತಿ ಜಯಶ್ರೀ ಮಠಪತಿ, ಶ್ರೀ ಹನುಮಂತ ಹಂಚಿನಾಳ, ಶ್ರೀ ಸುಭಾಸ್ ಮೂಲಿಮನಿ, ಶ್ರೀ ಮಂಜುನಾಥ ಬಡಿಗೇರ , ಶ್ರೀ ಶಿವಪ್ಪ ಕುಂಬಾರ, ಶ್ರೀ ರಮೇಶ್ ಪಟ್ಟದ, ಶ್ರೀ ಚನ್ನಬಸಯ್ಯ ಸಾಲಿಮಠ್, ಪತ್ರಕರ್ತರಾದ ಶ್ರೀ ಮಲ್ಲಿಕಾರ್ಜುನ್ ಬುರ್ಲಿ, ಶ್ರೀ ಚೇತನ್ ಗುರಡ್ಡಿ, ಶ್ರೀ ಅಣ್ಣಪ್ಪ ಗುಳೇದಗುಡ್ಡ, ಶ್ರೀ ಸುರೇಶ ಹಟ್ಟಿ ಹಾಗೂ ಇನ್ನಷ್ಟು ಜನ ಅತಿಥಿಗಳ ಅಲಂಕರಿಸಿದರು. ಆದರ್ಶ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಈ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು, ಮಕ್ಕಳ ಸಂಸ್ಕೃತಿ ಕಾರ್ಯಕ್ರಮ ಡ್ಯಾನ್ಸ್ ಹಾಸ್ಯಬರಿತ ಕಿರುನಾಟಕ ನೋಡಿದರೆ ಮೈ ಜುಮ್ ಎನ್ನುವ ರೀತಿ ಮಕ್ಕಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸ್ವಾಗತ ಭಾಷಣ ಶ್ರೀ ಗಣೇಶ ನಾಯಕ್ ಮುಖ್ಯಗುರುಗಳು ಶಿರಬೂರ ನಿರ್ವಹಿಸಿದರು, ಈ ಕಾರ್ಯಕ್ರಮವನ್ನು ದಿನೇಶ್ ಚಿತ್ರಪೂರ್ ಮುಖ್ಯೋಪಾಧ್ಯಾಯರು ಗುಣದಾಳ ನಡೆಸಿಕೊಟ್ಟರು, ಶಿಕ್ಷಕ ವೃಂದ ಸಿಬ್ಬಂದಿವರ್ಗ ವಿದ್ಯಾರ್ಥಿಗಳು ಹಾಗೂ ಪಾಲಕರು ಹಾಜರಿದ್ದರು.
ವರದಿ: ಮಲ್ಲಿಕಾರ್ಜುನ ಬುರ್ಲಿ