ಲಕ್ಷ್ಮೇಶ್ವರ:ರೈತ ಸಂಕಷ್ಟದಲ್ಲಿದ್ದಾನೆ-ಸಚಿವ ಬಿ.ಸಿ.ಪಟೇಲ್,,

Spread the love

ಲಕ್ಷ್ಮೇಶ್ವರ:ರೈತ ಸಂಕಷ್ಟದಲ್ಲಿದ್ದಾನೆ-ಸಚಿವ ಬಿ.ಸಿ.ಪಟೇಲ್,,

ಗದಗ ಜಿಲ್ಲೆ ಲಕ್ಷ್ಮೇಶ್ವರ , ಸರಿಯಾಗಿ ಮಳೆ ಆಗುವುದಿಲ್ಲ ಇದರಿಂದ ಉತ್ತಮ ಬೆಳೆ ಬರುವುದಿಲ್ಲ ಸರಿಯಾಗಿ ಬೆಳೆ ಬಂದರೆ ಮಾರುಕಟ್ಟೆಯಲ್ಲಿ ಬೆಲೆ ಸಿಗುವುದಿಲ್ಲ ಇದರಿಂದ ರೈತರು ಬಹಳ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅದಕ್ಕೆ ರೈತರ ಸೇವೆ ಮಾಡುವುದಕ್ಕಾಗಿ ನಾನು ಕೃಷಿ ಖಾತೆಯನ್ನು ಪಡೆದುಕೊಂಡಿದ್ದೇನೆ, ಎಂದು ಕರ್ನಾಟಕ ಸರ್ಕಾರದ ಕೃಷಿ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ .ಪಾಟೀಲ್ ಅವರು ಹೇಳಿದರು. ಅವರು ಮಂಗಳವಾರ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶಾಸಕ ರಾಮಣ್ಣ ಲಮಾಣಿಯವರ  ಮಾತೋಶ್ರೀ ದಿ. ಹಾಂಕ್ಲವ್ವ ಕೋಂ ಸೋಬೆಪ್ಪ ಲಮಾಣಿ ಅವರ ಸ್ಮರಣಾರ್ಥ  ನಿರ್ಮಾಣವಾದ ಶ್ರೀ ಸೋಮೇಶ್ವರ ದೇವಸ್ಥಾನದ ಮಹಾದ್ವಾರ ಲೋಕಾರ್ಪಣೆಯ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಉಣಿಸುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದರು  ಶಾಸಕ ರಾಮಣ್ಣ ಲಮಾಣಿ ಅವರು ತಮ್ಮ ಸ್ವಂತ ಖರ್ಚಿನಿಂದ ಮಹಾದ್ವಾರ ನಿರ್ಮಾಣ ಮಾಡಿ ನಿಮ್ಮೆಲ್ಲರ ಆಶೀರ್ವಾದಕ್ಕೆ ಪಾತ್ರರಾಗಿದ್ದಾರೆ ಎಂದರು ಇಂಥ ಶಾಸಕರನ್ನು ಮತ್ತೊಮ್ಮೆ ನೀವು ಆಶೀರ್ವದಿಸಬೇಕು ಎಂದರು , ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು   ಆಶೀರ್ವಚನ ನೀಡಿದ ಪೂಜ್ಯರು ಲಕ್ಷ್ಮೇಶ್ವರ ಪಟ್ಟಣದ ಇತಿಹಾಸಿಕ ಪ್ರಸಿದ್ಧವಾದ   ಶ್ರೀ ಸೋಮೇಶ್ವರ ದೇವಸ್ಥಾನದ ಪೂರ್ವ ಮಹಾದ್ವಾರ ನಿರ್ಮಾಣ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಅಧಿಕಾರ ಇದ್ದಾಗ ಇಂಥ ಮಹತ್ಕಾರ್ಯಗಳನ್ನು ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ವಿಮಲರೇಣುಕ ವೀರ ಮುಕ್ತಿ ಮುನಿ ಶಿವಾಚಾರ್ಯ ಮಹಾಸ್ವಾಮಿಗಳು   ಆಶೀರ್ವಚನ ನೀಡಿದರು ಕಾರ್ಯಕ್ರಮದಲ್ಲಿ  ಶಾಸಕ ರಾಮಣ್ಣ ಲಮಾಣಿಯವರು  , ಮಾಜಿ ಶಾಸಕರಾದ ಗಂಗಣ್ಣ ಮಹಾಂತಶೆಟ್ಟರ, ಜಿಲ್ಲಾ ಉಪ ವಿಭಾಗಾಧಿಕಾರಿ ರಾಯಪ್ಪ ಹುನಸಿಗಿ, ತಹಸಿಲ್ದಾರ್ ಪರಶುರಾಮ್ ಸತ್ತಿಗೇರಿ, ಪುರಸಭೆ ಅಧ್ಯಕ್ಷ ಅಶ್ವಿನಿ ಅಂಕಲಕೋಟಿ ಉಪಾಧ್ಯಕ್ಷೆ ಮಂಜವ್ವ ನೆಂದಣ್ಣನವರ, ಮುಂಡರಗಿ ಪುರಸಭೆ ಅಧ್ಯಕ್ಷೆಣಿಯಾದ ಕವಿತಾ ಉಳ್ಳಾಗಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್ ಹೊಗೆಸೊಪ್ಪಿನ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಊರಿನ ಹಿರಿಯರು ಭಾಗವಹಿಸಿದ್ದರು.

ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ -9008937428

Leave a Reply

Your email address will not be published. Required fields are marked *