ಕ್ಷಯ ರೋಗ ನಿರ್ಮೂಲನೆಗೆ ಕೈಜೋಡಿಸಿ,,
ಟಿಬಿ ಸೋಲಿಸಿ ಕರ್ನಾಟಕವನ್ನು ಗೆಲ್ಲಿಸಿ ಕ್ಷಯ ರೋಗ ಮುಕ್ತ ಭಾರತ ಪ್ರತಿಜ್ಞೆ ಅಭಿಯಾನದ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಮುಧೋಳ ಹಾಗೂ ಉಪ ಕೇಂದ್ರ ಹಿರೇಮ್ಯಾಗೇರಿ ಗ್ರಾಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಮ್ಮುಖದಲ್ಲಿ ಕ್ಷಯರೋಗದ ಬಗ್ಗೆ ಸ್ವಚ್ಛತಾ ಜಾತಾ ಕಾರ್ಯಕ್ರಮ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ, ಹಿರಿಯ ಆರೋಗ್ಯ ನಿರೀಕ್ಷಣ ಅಧಿಕಾರಿಗಳಾದ ಶಂಕ್ರಣ್ಣ ಅಂಗಡಿ ಯವರು ಮಾತನಾಡಿ ಕ್ಷಯರೋಗ ಕುರಿತು ಈಗಾಗಲೇ ಆರೋಗ್ಯ ಇಲಾಖೆಯಿಂದ ಜಾಗೃತಿ ಮೂಡಿಸಲಾಗಿದೆ. ಕ್ಷಯರೋಗ ಕಂಡುಬಂದಲ್ಲಿ ರೋಗಿಗಳು ಯಾವುದೇ ಕಾರಣಕ್ಕೆ ಭಯ ಪಡದೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಹೇಳಿದರು. ಇಂತಹ ರೋಗಗಳ ಲಕ್ಷಣಗಳು ಕಂಡು ಬಂದ ವೇಳೆ ಬಹುತೇಕ ರೋಗಿಗಳು ಭಯ ಪಡುತ್ತಾರೆ. ಆರು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಉತ್ತಮ ಜೀವನ ನಡೆಸಲು ಸೂಕ್ತ ವ್ಯವಸ್ಥೆ ಸರಕಾರ ಕಲ್ಪಿಸಿದೆ. ಕ್ಷಯ ರೋಗಿಗಳನ್ನು ಕಡೆಗಣಿಸದೆ ಗೌರವ ಭಾವನೆಯಿಂದ ನೋಡಬೇಕು. ಕ್ಷಯರೋಗ ನಿರ್ಮೂಲನೆ ಮಾಡಲು ಪ್ರತಿಯೊಬ್ಬರು ಕೈ ಜೋಡಿಸಬೇಕು. ಇಂತಹ ಕಾರ್ಯಕ್ಕೆ ಕೈ ಜೋಡಿಸಿದಾಗ ಮಾತ್ರ ಕ್ಷಯರೋಗ ಮುಕ್ತ ಕರ್ನಾಟಕ ಮಾಡಲು ಸಾಧ್ಯ ಎಂದು ಹೇಳಿದರು, ಇದೇ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿಗಳಾದ ಡಾ, ಪವನ್ ಕುಮಾರ್, ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಮುಧೋಳ ಪ್ರಾಚಾರ್ಯರಾದ ರಾಘವೇಂದ್ರ, ಮಹಾಂತೇಶ, ಕಳಕಪ್ಪ, ಮತ್ತು ಸ, ಪ, ಪೂ, ಕಾಲೇಜ್ ಹಿರೇಮ ಗಿರಿ ಪ್ರಾಚಾರ್ಯರು ಅಧ್ಯಕ್ಷತೆ ವಹಿಸಿದ್ದ ಸಂಗಮೇಶ್ ನೆರೆಗಲ್, ಮಂಗಳೇಶಪ್ಪ, ಶಿವಲೀಲಾ ಹಿರೇಮಠ, ಶ್ರೀ ದೇವಿ ಮಾಕಿಹಾಳ, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಗುರು ಸಿದ್ದನಗೌಡ್ರ, ಶಾರದಾ ಬಿಳೇಕಲ್ಲ, ಅಂಜುಮಾ ಬೇಗಂ, ನಿನ್ನ ಹಲವಾರು ಉಪಸ್ಥಿತರು ಭಾಗವಹಿಸಿದ್ದರುa ವರದಿ – ಹುಸೇನಬಾಷಾ ಮೊತೇಖಾನ್