ಎಮ್.ಎಮ್.ಹಳ್ಳಿ ಷಾರ್ಟ್ ಸರ್ಕ್ಯೂಟ್.!?ಅಗ್ನಿ ದುರಂತಕ್ಕೆ ನಾಲ್ವರುಬಲಿ,,,,
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು, ಮರಿಯಮ್ಮನಹಳ್ಳಿ ಪಟ್ಟಣದಲ್ಲಿ.ಎ8ರ ಬೆಳಗಿನ ಜಾವ 2 ಗಂಟೆ ಸಮಯದಲ್ಲಿ, ಸಂಭವಿಸಿರುವ ಅಗ್ನಿ ಆಕಸ್ಮಿಕದಲ್ಲಿ ನಾಲ್ವರು ಮೃತಪಟ್ಟಿರುವ ಧಾರುಣ ಘಟನೆ ಜರುಗಿದೆ. ಇನ್ವೇಟರ್ ನಿಂದಾದ ದೋಷದಿಂದಾಗಿ ಷಾರ್ಟ್ ಸರ್ಕ್ಯೂಟ್ ಸಂಬಿಸಿದ್ದು, ಪರಿಣಾಮ ಬೆಂಕಿ ಹೊತ್ತಿಕೊಂಡಿರಬಹುದೆಂದು ತಿಳಿಯಲಾಗಿದೆ. ಪಟ್ಟಣದ ಬಿಜೆಪಿ ಮುಖಂಡ ಹಾಗೂ ಕಿರಾಣಿ ಅಂಗಡಿ ವ್ಯಾಪಾರಿ,ಆರ್ಯವೈಷ್ಯ ಸಮಾಜದ ಮುಖಂಡರಾದ ವೆಂಕಟ ಪ್ರಶಾಂತ್ ಮನೆಯಲ್ಲಿ ದುರ್ಘಟನೆ ಜರುಗಿದೆ. ಮೆನೆಯಲ್ಲಿ ಒಟ್ಟು ಆರು ಜನ ಸದಸ್ಯರಿದ್ದರು,ಅದೃಷ್ಠವಶಾತ್ ಮನೆಯ ಯಜಮಾನರಾಗಿದ್ದ ವೃದ್ಧರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಾಣಾಪಾಯದಿಂದ ಪಾರಾದ ಪಾಲಕರು-ಮನೆಯ ಪತ್ಯೇಕ ಬೇರೊಂದು ರೂಂನಲ್ಲಿ ಮಲಗಿದ್ದ, ಮೃತ ವೆಂಕಟ ಪ್ರಶಾಂತ ರವರ ತಂದೆ ರಾಘವೇಂದ್ರಶೆಟ್ರು ಹಾಗೂ ತಾಯಿ ರಾಜಶ್ರೀರವರು. ತಡರಾತ್ರಿ ಕರೆಂಟ್ ಹೋದ ಕಾರಣ ಷೆಕೆಯಂದು ಮನೆಯಿಂದ ಹೊರ ಬಂದು ಹೊರಗೆ ಮಲಗಿದ್ದು,ಅವರು ಪತ್ಯೆಕ ಹೊರ ಮಲಗಿದ್ದೇ ಅವರ ಜೀವ ಕಾಪಾಡಿದೆ ಎನ್ನಲಾಗಿದೆ. ಬೆಳಗಿನ ಜಾವ 2ಗಂಟೆ ಸುಮಾರಲ್ಲಿ ಮನೆಯೊಳಗೆ ದಿಢೀರ್ ಬೆಂಕಿ ಹೊತ್ತು ಕೊಂಡು ಉರಿದಿದೆ. ಬೆಂಕಿ ಹೊತ್ತಿಕೊಂಡ ಪರಿಣಾಮ ಎಸಿಯಲ್ಲಿನ ಅನಿಲ ಸೋರಿಕೆಯಾಗಿದ್ದು, ಭಾರೀ ಬೆಂಕಿ ಹಾಗೂ ಹೊಗೆ ಯಿಂದ ಉಂಟಾಗಿ ಹುಸಿರು ಕಟ್ಟಿದೆ. ಮನೆಯಲ್ಲಿ ಭಾರೀ ಹೊಗೆ ತುಂಬಿ ಕೊಂಡಿರುವ ಹಿನ್ನಲೆಯಲ್ಲಿ, ಹುಸಿರು ಕಟ್ಟಿದ್ದರಿಂದಾಗಿ ಮನೆಯಲ್ಲಿರುವ ನಾಲ್ವರು ಮೃತ ಪಟ್ಟಿದ್ದಾರೆ ಎನ್ನಲಾಗಿದೆ. ನಾಲ್ವರು ಮೃತ- ಘಟನೆಯಲ್ಲಿ ವೆಂಕಟ್ ಪ್ರಶಾಂತ್ ಶೆಟ್ರು (42) ಪತ್ನಿ ಚಂದ್ರಕಲಾ (36) ಮಕ್ಕಳಾದ ಅದ್ವಿತ್ (16)ಪ್ರೇರಣ(8) ಮೃತಪಟ್ಟಿದ್ದಾರೆ. ಅಗ್ನಿ ಆಕಸ್ಮಿಕ ಘಟನೆ ಜರುಗಿದ ಕೂಡಲೇ, ನೆರೆ ಹೊರೆಯವರು ಅಗ್ನಿ ಬಂದಿಸುವ ಹರಸಾಹಸ ಮಾಡಿದ್ದಾರೆ. ದೌಡಾಯಿಸಿದ ಕೂಡ್ಲಿಗಿ ಡಿವೈಎಸ್ಪಿ ಜಿ.ಹರೀಶ್- ಘಟನೆ ಮಾಹಿತಿ ತಿಳಿದ ಕೂಡಲೇ ಕೂಡ್ಲಿಗಿ ಡಿವೈಎಸ್ಪಿ, ಜಿ.ಹರೀಶ್ ರವರು ಸ್ಥಳಕ್ಕಾಗಮಿಸಿದರು,ಅವರು ತಮ್ಮ ಸಿಬ್ಬಂದಿಯೊಂದಿಗೆ ನಿರಂತರ ನೆರವು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. ಹೊಸಪೇಟೆ ವಿಭಾದ ಅಗ್ನಿ ಶಾಮಕ ಹಾಗೂ ಕಾಖಾರ್ನೆಗಳಲ್ಲಿನ ಅಗ್ನಿ ಶಾಮಕ ವಾಹನಗಳು ಸ್ಥಳಕ್ಕಾಗಮಿಸಿವೆ, ನಿರಂತರ ಕಾರ್ಯಚರಣೆ ನಡೆಸಿ ಅಗ್ನಿ ನಂದಿಸುವಲ್ಲಿ ಯತ್ನಿಸಿದ್ದಾರೆ ಮತ್ತು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಸ್ಥಳಕ್ಕೆ ಹಗರಿಬೊಮ್ಮನಹಳ್ಳಿ ಸಿಪಿಐ ಮಂಜಣ್ಣ, ಎಮ್.ಎಮ್.ಹಳ್ಳಿ ಪಿಎಸ್ಐ ಹನುಮಂತಪ್ಪ ಸ್ಥಳದಲ್ಲಿದ್ದು,ಡಿವೈಎಸ್ಪಿ ಹರೀಶರವರ ನೇತೃತ್ವದಲ್ಲಿ ನೆರವು ಕಾರ್ಯಚರಣೆಯಲ್ಲಿ ತೊಡಗಿದ್ದರು.
ವರದಿ – ✍ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428