ಶಿಂಗಟಲೂರು ಶ್ರೀವೀರಭದ್ರೇಶ್ವರ ಜಾತ್ರೆ,,,,,

Spread the love

ಶಿಂಗಟಲೂರು ಶ್ರೀವೀರಭದ್ರೇಶ್ವರ ಜಾತ್ರೆ,,,,,

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸುಕ್ಷೇತ್ರ  ಶಿಂಗಟಾಲೂರು ಶ್ರೀ ವೀರಭದ್ರೇಶ್ವರ  ಸ್ವಾಮಿಯ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಗುರುವಾರ ಬೆಳಗ್ಗೆ 9:00 ಗಂಟೆ ಯಿಂದಲೇ  ಅಗ್ನಿ ಹಾಯುವ ಕಾರ್ಯಕ್ರಮ ನಡೆಯಿತು ಅಗ್ನಿ ಉತ್ಸವದಲ್ಲಿ ಸಾವಿರಾರು ಭಕ್ತರ ಅಗ್ನಿ ಹಾಯ್ದರು  ಅಗ್ನಿ ವಾಯುವ ಸಂದರ್ಭದಲ್ಲಿ ಭಕ್ತರಿಗೆ ಯಾವುದೇ ತೊಂದರೆ ಯಾಗ ಬಾರದೆಂದು ಕಮಿಟಿವತಿಯಂದ   ಅಚ್ಚುಕಟ್ಟಿನಿಂದ ವ್ಯವಸ್ಥೆ ಮಾಡಿಕೊಂಡಿದ್ದರು ಹಾಗೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು  ನಂದಿಕೋಲು ಕುಣಿತ ವೀರಭದ್ರೇಶ್ವರನ ಅವತಾರ ಧರಿಸಿದ ಪುರುವಂತರು ವೀರಭದ್ರೇಶ್ವರನ ಉಡುಪುಗಳನ್ನು ಹೇಳುತ್ತಿದ್ದರು  ಸಮ್ಮೇಳನ ಬಾರಿಸುತ್ತಾ ವೀರಭದ್ರೇಶ್ವರ ಒಡಪುಗಳನ್ನು ಹೇಳುತ್ತಾ ಜೈಕಾರ ಹಾಕುತ್ತಾ ಹರಹರ ಮಹಾದೇವ  ಶ್ರೀ ವೀರಭದ್ರೇಶ್ವರ ಮಹಾರಾದಕೆ ಜೈ ಎಂಬ ಘೋಷಣೆಯೊಂದಿಗೆ ಲಕ್ಷಾಂತರ ಭಕ್ತಾದಿಗಳು ಆಗಮಿಸಿದ್ದರು ಈ ಸಾರಿ ಅಗ್ನಿ ಉತ್ಸವದಲ್ಲಿ ಎಂದೆಂದು ಕಂಡರಿಯದ ಜನಸ್ತೋಮ ಕಂಡು ಬಂದಿತು  ಕಳೆದ 2 ವರ್ಷ ಕೋರೋಣ ಬಿತೀಯಿಂದ ಜಾತ್ರೆಯ ನಡೆದಿರಲಿಲ್ಲ  ಇದರಿಂದ ಜನರು ಎರಡು ವರ್ಷ ಜಾತ್ರೆಗೆ ಬಂದಿರಲಿಲ್ಲ ಆದರೆ ಈ ಸಾರಿ ಕೋರೋಣ ರೋಗವು ಸಂಪೂರ್ಣವಾಗಿ ಹೋಗಿರುವುದರಿಂದ ಭಕ್ತಾದಿಗಳು ಯಾವುದೇ ಭಯ ಭೀತಿಯಿಲ್ಲದೇ ಜಾತ್ರೆಯಲ್ಲಿ ಭಾಗವಹಿಸಿದ್ದರು   ದೇವಸ್ಥಾನದ ಕಮಿಟಿಯ ಅಧ್ಯಕ್ಷರಾದ ಕರಬಸಪ್ಪ ಹಂಚಿನಾಳ ಕಮಿಟಿಯಿಂದ  ಬಂದಂತಹ ಭಕ್ತರಿಗೆ ಪ್ರಸಾದ ವ್ಯವಸ್ಥೆ  ಮಾಡಲಾಗಿತ್ತು.

ವರದಿ – ✍ ವಂದೇ ಮಾತರಂ ವಿ.ಜಿ.ವೃಷಭೇಂದ್ರ  ಕೂಡ್ಲಿಗಿ-9008937428

Leave a Reply

Your email address will not be published. Required fields are marked *