ಬಡವರ ಪಾಲಿಗೆ ಆಶಾಕಿರಣ ಸಿ.ಆರ್ ಶಿವಕುಮಾರ್ ಸಕ್ಷಮ ಜಿಲ್ಲಾ ಸಂಚಾಲಕರು ಶಿವಮೊಗ್,,,,
ಸಿದ್ದಯ್ಯ ರೋಡ್ , ಶಿವಮೊಗ್ಗ ನಗರದ ಅನಂತಯ್ಯ ಬಿನ್ ಲೇಟ್ ಚಲುವಯ್ಯ ಎಂಬ ವಿಶೇಷಚೇತನರ ಪತ್ನಿ ವಿಜಯಲಕ್ಷ್ಮಿ ಎಂಬುವವರು ನಮ್ಮ ಯಜಮಾನು 757 ಉಳ್ಳ ಅಂಗವಿಕಲರು ಆಗಿದ್ದು , ನಡೆಯಲು ಆಗದ ಪರಿಸ್ಥಿತಿಯಲ್ಲಿ ಇದ್ದಾರೆ . ಎಲ್ಲಿಗಾದರೂ ಹೋಗಬೇಕು ಅಂದರೆ ಅಥವಾ ಬಾತ್ ರೂಮಿಗೆ ಹೋಗಬೇಕು ಅಂದರೆ ನಾನು ನನ್ನ ಮಗಳು ಎತ್ತುಕೊಂಡು ಹೋಗಬೇಕು . ಮನೆಯಲ್ಲಿ ನಾನು , ನಮ್ಮ ಯಜಮಾನು ಮತ್ತು ಒಬ್ಬಳು ಮಗಳು ಇದ್ದಾಳೆ ಅವರು 2nd ಪಿ.ಯು.ಸಿ ಓದುತ್ತಾ ಇದ್ದಾಳೆ . ಒಂದು ಕಡೆ ನಮ್ಮ ಯಜಮಾನು ಇನ್ನೊಂದು ಕಡೆ ನನ್ನ ಮಗಳನ್ನು ಓದಿಸಬೇಕು ನನಗಂತೂ ಏನು ಮಾಡಬೇಕು ಅಂತ ಗೋತ್ತಾಗುತ್ತಿಲ್ಲ ಸರ್ . ಒಂದೊಂದು ಸಲ ಒಂದು ಹೊತ್ತು ಊಟಕ್ಕೂ ಸಹ ಪರದಾಡುವಂತಾಗಿದೆ ಸರ್.ನಮ್ಮ ಯಜಮಾನ್ರಿಗೆ ಪ್ರತಿ ತಿಂಗಳು ಬರುವ ಪಿಂಚಣಿ ಯನ್ನು ನಂಬಿಕೊಂಡು ಜೀವನವನ್ನು ಮಾಡ್ತಾ ಇದ್ದೇವೆ . ಆ ಪಿಂಚಣಿ ಯನ್ನು ಬಿಡಿಸಿಕೊಂಡು ಬರಬೇಕು ಅಂದರೆ ಬ್ಯಾಂಕ್ ಗೆ ಎತ್ತುಕೊಂಡು ಹೋಗಬೇಕು ಇಲ್ಲ ಅಂದರೆ ಆಟೋ ಮಾಡಬೇಕು ಸರ್.ನಮ್ಮ ಯಜಮಾನು ಗೆ ಒಂದು ವೀಲ್ವೇರ್ ಇದ್ರೆ ಹೇಗೋ ತಳ್ಳಕೊಂಡು ಎಲ್ಲಿಗಾದರೂ ಹೋಗಬೇಕು ಅಂದರೆ ಇದರ ಸಹಾಯ ದಿಂದ ಹೋಗಿ ಬರಬಹುದು ಸರ್ . ಸರ್ ದಯವಿಟ್ಟು ಸಂಬಂಧಪಟ್ಟ ಇಲಾಖೆಯಿಂದ ನಮ್ಮ ಯಜಮಾನ್ರಿಗೆ ವೀಲ್ವೇರ್ ವ್ಯವಸ್ಥೆ ಯನ್ನು ಮಾಡಿಕೊಡಿ ಎಂದು ಸಕ್ಷಮ ಸಂಸ್ಥೆ ಜಿಲ್ಲಾ ಘಟಕ . ಶಿವಮೊಗ್ಗ ಕ್ಕೆ ಮನವಿಯನ್ನು ಸಲ್ಲಿಸಿದರು.ಈ ಮನವಿಯನ್ನು ಸ್ವೀಕರಿಸಿ ಸಂಬಂಧಿಸಿದಂತ ಇಲಾಖೆಯ ಜೊತೆಯಲ್ಲಿ ಮಾತಾಡಿ ತಮಗೆ ವೀಲ್ವೇರ್ ವ್ಯವಸ್ಥೆಯನ್ನು ಮಾಡಿಸಿಕೊಡುವುದಾಗಿ ತಿಳಿಸಿ ಜೊತೆಯಲ್ಲಿ ಅವರಿಗೆ ಸಕ್ಷಮ ಸಂಸ್ಥೆ ಶಿವಮೊಗ್ಗ ದ ವತಿಯಿಂದ ಆಹಾರ ಪದಾರ್ಥಗಳ ಕಿಟ್ಟುನ್ನೂ ಒದಗಿಸಿಕೊಡಲಾಯಿತು. ಸಿ.ಆರ್ ಶಿವಕುಮಾರ್ ಸಕ್ಷಮ ಜಿಲ್ಲಾ ಸಂಚಾಲಕರು. ಶಿವಮೊಗ್. ಒಟ್ಟಿನಲ್ಲಿ ಇಂತಹ ದಿನಮಾನಗಳಲ್ಲಿ ನಾನು ಬದುಕಿದರೆ ಸಾಕು ಎನ್ನುವ ಕಾಲದಲ್ಲಿ, ನಾನು ಬದದುಕಿ ನನ್ನವರು ಬದುಕಿ, ಕಷ್ಟ ಅಂತ ಬದವರಿಗೆ ಆಶಾಕಿರಣವಾಗಿ ನಿಂತ ಸಕ್ಷಮ ಸಂಸ್ಥೆಗೆ ತಾವರಗೇರಾ ನ್ಯೂಸ್ ಪತ್ರಿಕ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಆರೈಸುತ್ತಿದ್ದೆವೆ.
ವರದಿ – ಸಂಪಾದಕೀಯ