ತಾವರಗೇರಾ ಪ್ರವಾಸಿ ಮಂಧಿರದಲ್ಲಿಂದು ನಡೆದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ ರೈತರ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿದರು..
ರಾಜ್ಯದಲ್ಲಿ ನಡೆಯುತ್ತಿರುವ ರಾಜಕಾರಣದ ದೌರ್ಜನ್ಯ, ಹಿಂದೂ ಮುಸ್ಲೀಂರ ಮಧ್ಯ ನಡೆಯುತ್ತಿರುವ ಜಗಳ, ದ್ವೇಶ, ಬೆಂಕಿ ಹಚ್ಚುತ್ತಿರುವ ಕಾಣದ ಕೈಗಳಂತೆ ಕೆಲಸ ಮಾಡುತ್ತಿರುವ ನೀಚ ರಾಜಕಾರಣಕ್ಕೆ ದುಡಿಯುವ ವರ್ಗದವರಾದ ನಾವುಗಳು ಈ ಕೆಟ್ಟ ರಾಜಕೀಯ ವ್ಯವಸ್ಥೆಗೆ ಸರಿ ಪಡಿಸಲು ನಾವು/ನಿವೇಲ್ಲ ಒಂದಾಗಬೇಕಾಗಿದೆ. ಹಾಗಾಗಿ ದಿನಾಂಕ 21/04/2022 ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನಡೆಯುವ ರೈತರ ಬೃಹತ ಸಮಾವೇಶಕ್ಕೆ ಎಲ್ಲಾರು ಕೈ ಜೊಡಿಸಬೇಕಾಗಿದೆ. ಈ ಬೃಹತ್ ಸಮಾವೇಶದಲ್ಲಿ ದೇಶ ರೈತ ವಿರೋದಿ ಕಾಯ್ದೆ, ಕೃಷಿ ಕಾಯ್ದೆಗಳನ್ನು ವಜಾಗೊಳಿಸಲು ಮುಕ್ತ ಆಡಳಿತ ಪರ್ಯಾಯ ರಾಜಕಾರಣ ಮುಖ್ಯ ಹಕ್ಕೋತ್ತಾಯಗಳನ್ನ ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯಾದ್ಯಾಂತ ರೈತರ ಬೃಹತ್ ಸಮಾವೇಶಕ್ಕೆ ಚಾಲನೆ ನಿಡುತ್ತಿದ್ದೆವೆ. ಇವತ್ತು ಇಡಿ ದೇಶದ ಯಾವುದೇ ರಾಜ್ಯದಲ್ಲಿ ಈ ಕೃಷಿ ವಿರೋದಿ ಕಾನೂನುಗಳನ್ನು ಜಾರಿಗೊಳಿಸಿಲ್ಲ. ಆದರೆ ಕರ್ನಾಟಕದಲ್ಲಿ ನಾವು ರೈತರ ಮಕ್ಕಳು, ನಾವು ಮಣ್ಣಿನ ಮಕ್ಕಳು ಎಂದು ಹೇಳಿಕೊಂಡು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ, ಅದರ ವಿರುದ್ದವಾಗಿ ರೈತರ ಬಾಯಿಗೆ ಮಣ್ಣಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಹನುಮಂತಪ್ಪ ಹೊಳೆಯಾಚಿ ರಾಜ್ಯ ಕಾರ್ಯದರ್ಶಿಗಳು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು. ಇದರ ಜೊತೆ ಜೊತೆಗೆ ಜಾತಿ ವೈಶ್ಯಮ್ಯಗಳನ್ನ ಬೆಳೆಸಿ, ರಾಜ್ಯದಲ್ಲಿಂದು ರಾಜ್ಯ ಸರ್ಕಾರವು ಆಶಾಂತಿಯನ್ನು ಹುಟ್ಟಾಕುವ ಕೆಲಸ ಮಾಡುತ್ತಿದೆ. ಸದ್ಯ ಸ್ವತಂತ್ರ ಬಂದಿರುವುದು ರಾಜಕಾರಣಿಗಳಿಗೆ, ಕಾರ್ಪೇಂಟ್ ಕಂಪನಿ ಮಾಲಿಕರಿಗೆ, ಈ ದೇಶವನ್ನ ಆಳುವಂತ ದೋಡ್ಡ, ದೋಡ್ಡ ತಿಮಿಂಗಲ್ಗಳಿಗೆ, ದುಡಿದು ತಿನ್ನುವ ವರ್ಗಕ್ಕೆ, ಈ ದೇಶಕ್ಕೆ ಅನ್ನ ಹಾಕುವ ರೈತರಿಗೆ ಸ್ವತಂತ್ರ ಸಿಕ್ಕಿಲ್ಲ, ದೇಶ ರಕ್ಷಣೆ ಮಾಡುವಂತ ಜನ ಸಾಮನ್ಯರಿಗೂ ಇಲ್ಲಿಯವರೆಗೂ ಸ್ವತಂತ್ರ ದೊರೇತಿಲ್ಲ, ಜೆ.ಸಿ.ಬಿ.ಗಳು ಮಾಡುತ್ತಿರುವುದು ಒಂದೆ ನಾಣ್ಯದ ಎರಡು ಮುಖಗಳಂತೆ ಕೆಲಸ ಮಾಡುತ್ತಿದ್ದಾರೆ, ಎಲ್ಲಾರು ಕಳ್ಳರೆ ಆದರೆ ಇಲ್ಲಿ ನಾವು ನೀವುಗಳು ಮೋಶ ಹೋಗುತ್ತಿದ್ದೆವೆ ಎಂದು ಬಸವರಾಜ ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ಯವರು ಸರ್ಕಾರದ ವಿರುದ್ದು ಗುಡಿಗಿದರು. ಹಾಗೆ ದೇ ರೈತ ವಿರೀಧಿ ಕಾಯ್ದೆ, ಕೃಷಿ ಕಾಯ್ದೆಗಳನ್ನು ವಜಾಗೊಳಿಸಲು ಮುಕ್ತ ಆಡಳಿತ ಪರ್ಯಾಯ ರಾಜಕಾರಣ ಮುಖ್ಯ ಹಕ್ಕೋತ್ತಾಯಗಳನ್ನ ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯಾದ್ಯಾಂತ ರೈತರ ಬೃಹತ್ ಸಮಾವೇಶಕ್ಕೆ ಚಾಲನೆ ನಿಡುತ್ತಿದ್ದೆವೆ ಎಂದು ನಾಗರಾಜು ಇಟಗಿ ಕುಷ್ಟಗಿ ತಾಲೂಕು ಅಧ್ಯಕ್ಷ, ಶ್ರೀಧರ್ ಗೌಡ ಪೋ.ಪಾಟೀಲ್, ಕೊಪ್ಪಳ ತಾಲೂಕ ಕಾರ್ಯದರ್ಶಿ, ಹೋಬಳಿ ಅಧ್ಯಕ್ಷರಾದ ಉಪಳೇಶ ವಿಠಲಾಪುರ, ಹಾಗೂ W.P.I. ತಾವರಗೇರಾ ಹೋಬಳಿ ಅಧ್ಯಕ್ಷರಾದ ಯಮನೂರಪ್ಪ ಬಿಳೆಗುಡ್ಡ, ಸೋಮನಾಥ ಹೆಚ್.ಎಂ. ಸಂಗನಾಳ ಎಎಪಿ ಮುಖಂಡರು ಈ ರೈತರ ಬೃಹತ್ ಸಮಾವೇಶಕ್ಕೆ ಚಾಲನೆ ನೀಡುವ ಮೂಖಾಂತರ ಜನರಗೆ ಕರೆ ಕೊಟ್ಟರು.
ವರದಿ – ಸಂಪಾದಕೀಯ