ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಆರ್.ಗುರುನಾಥ ಆಯ್ಕೆಯಾಗಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಚುನಾವಣೆ ಅಧಿಕಾರಿಗಳು ಘೋಷಣೆ ಮಾಡಿದರು. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಸ್ಪರ್ಧೆ ಮಾಡಿದ್ದು, ಅತಿಹೆಚ್ಚು ಮತಗಳನ್ನು ಪಡೆದ ಆರ್.ಗುರುನಾಥರವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧೆ ಮೂವರು ಅಭ್ಯರ್ಥಿಗಳಲ್ಲಿ ಎಂ.ಪಾಷಾ ಹಟ್ಟಿ ಒಂದು ಮತದ ಅಂತರದಿಂದ ಆಯ್ಕೆಯಾಗಿದ್ದಾರೆ. ಕಾರ್ಯಕಾರಿಣಿ ಸಮಿತಿ ಸದಸ್ಯತ್ವ 15 ಸ್ಥಾನಕ್ಕೆ ಸ್ಪರ್ಧೆ ಮಾಡಿದ 21 ಅಭ್ಯರ್ಥಿಗಳ ಪೈಕಿ ಸಿದ್ದಯ್ಯ ಸ್ವಾಮಿ, ಬಲಭೀಮರಾವ್, ಮಲ್ಲಿಕಾರ್ಜುನಯ್ಯ, ಅಮ್ಜದ್ ಕಂದಗಲ್, ದೇವಣ್ಣ ಕೊಡಿಹಾಳ, ಬಸವರಾಜ ಬೋಗಾವತಿ, ಸಂತೋಷ ಸಾಗರ, ಶಿವರಾಜ್ ಕೆಂಭಾವಿ, ಅಮರೇಶ ಕಲ್ಲೂರು, ಸಣ್ಣ ಈರಣ್ಣ.ಕೆ., ಅಲಿಬಾಬಾ ಪಾಟೇಲ್, ಶರಣಯ್ಯ ಒಡೆಯರ್, ವಿಶ್ವನಾಥ ಸಾಹುಕಾರ್, ರವಿಕುಮಾರ್ ಆಯ್ಕೆಯಾಗಿದ್ದಾರೆ. ಅವಿರೋಧ ಆಯ್ಕೆ: ರಾಜ್ಯ ಸಮಿತಿ ಸದಸ್ಯ ಸ್ಥಾನಕ್ಕೆ ಶಿವಮೂರ್ತಿ ಹಿರೇಮಠ, ಉಪಾಧ್ಯಕ್ಷರಾಗಿ ಶಿವಪ್ಪ ಮಡಿವಾಳರ, ಎಂ.ವೀರಭದ್ರಪ್ಪ, ಪಿ.ಪರಮೇಶ, ಕಾರ್ಯದರ್ಶಿಯಾಗಿ ಶರಣಬಸವ ನೀರಮಾನವಿ, ಸೂಗುರೇಶ್ವರ ಗುಡಿ, ಅಬ್ದುಲ್ ಅಜೀಜ್, ಖಜಾಂಚಿಯಾಗಿ ವೆಂಕಟೇಶ್ ಹೂಗಾರ ಆಯ್ಕೆಯಾಗಿದ್ದಾರೆ. 2022 ಫೆ.27ರಂದು ಜಿಲ್ಲಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕಾರ್ಯಕಾರಣಿ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಆದರೆ ಚುನಾವಣೆ ತಾಕರಾರು ಅರ್ಜಿ ಸಲ್ಲಿಕೆ ಹಿನ್ನೆಲೆಯಲ್ಲಿ ಫಲಿತಾಂಶ ಘೋಷಣೆ ಮಾಡದಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಸೋಮವಾರ ಅರ್ಜಿ ವಜಾಗೊಳಿಸುವ ಮೂಲಕ ಫಲಿತಾಂಶ ಪ್ರಕಟ ಸೂಚನೆ ಮೇರೆಗೆ ಇಂದು ಜಿಲ್ಲಾ ಚುನಾವಣೆ ಅಧಿಕಾರ ಮಲ್ಲಪ್ಪ ಹಾಗೂ ಸಹಾಯಕ ಚುನಾವಣೆ ಅಧಿಕಾರಿ ಸುರೇಶ ರೆಡ್ಡಿ ಫಲಿತಾಂಶ ಪ್ರಕಟಣೆ ಮಾಡಿ, ಚುನಾವಣೆಯಲ್ಲಿ ಜಯಶಾಲಿಯಾದ ಹಾಗೂ ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಿದರು. ಸಂಭ್ರಮ: ಚುನಾವಣೆ ಫಲಿತಾಂಶ ಘೋಷಣೆ ಬಳಿಕ ಪತ್ರಿಕಾ ಭವನದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿಕೊಂಡು, ಶುಭಾಶಯ ಕೋರಿ ಸಂಭ್ರಮ ಆಚರಿಸಲಾಯಿತು. ಈ ವೇಳೆ ಹಿರಿಯ ವರದಿಗಾರರಾದ ಬಸವರಾಜ ನಾಗಡದಿನ್ನಿ, ಬಿ.ವೆಂಕಟ್‌ಸಿಂಗ್, ಅರವಿಂದ ಕುಲಕರ್ಣಿ ಹಾಗೂ ಇತರರಿದ್ದರು.
ವರದಿ – ಸಂಪಾದಕೀಯ