‘ಸಾವಿರ ದಾರಿ, ಕಿರುಚಿತ್ರ ಬಿಡುಗಡೆ..

Spread the love

ಸಾವಿರ ದಾರಿ, ಕಿರುಚಿತ್ರ ಬಿಡುಗಡೆ..

ಗದಗ : ಚಿನ್ಮಯಿ ಗಾಯತ್ರಿ ಕ್ರಿಯೇಷನ್ ಅರ್ಪಿಸುವ ಗದಗ ನಗರದ ಕಲಾವಿದರೆ ಅಭಿನಯಿಸಿರುವ ‘ಸಾವಿರ ದಾರಿ’ ಕಿರುಚಿತ್ರ ಬಿಡುಗಡೆಯನ್ನು ನಿವೃತ್ತ ಪ್ರಾಧ್ಯಾಪಕರಾದ ಡಾ.ಎ.ಕೆ.ನಾಶಿ ಅವರು ಲ್ಯಾಪಿಯಲ್ಲಿ ಬಟನ್ ಒತ್ತುವ ಮೂಲಕ ಬಿಡುಗಡೆ ಮಾಡಿದರು. ಅವರು ನಗರದ ಶ್ರೀ ಚಿನ್ಮಯಿ ಸಾಂಸ್ಕೃತಿಕ ಅಕಾಡೆಮಿ  ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಗದಗ ಇವರ ಪ್ರಾಯೋಜಕತ್ವದಲ್ಲಿ ಮರಾಠಾ ವಾಙ್ಮಯ ಪ್ರೇಮಿ ಮಂಡಳಿಯಲ್ಲಿ  ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ನಡೆದ ರಂಗಸೌರಭ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ ಮಾತನಾಡಿ ಗದಗ ಕಲಾವಿದರ ತವರು .ಸಂಗೀತ, ನಾಟಕಗಳಿಗೆ, ಬರಹಗಾರರಿಗೆ, ಕಲಾವಿದರಿಗೆ ಇಲ್ಲಿ ಎಲ್ಲ ಕಾಲದಲ್ಲಿಯೂ ಪ್ರೋತ್ಸಾಹ ಇದೆ. ಇಲ್ಲಿನ ಕಲಾವಿದರೆ ಅಭಿನಯ, ತಾಂತ್ರಿಕವರ್ಗ ಎಲ್ಲ ನಿರ್ವಹಿಸಿ ಕಿರುಚಿತ್ರ ಹೊರತಂದಿರುವದು ಶ್ಲಾಘನೀಯ. ಎಲ್ಲರೂ ನೋಡಿ ಪ್ರೋತ್ಸಾಹ ನೀಡಬೇಕು.ಯೂಟೂಬ್ ಲಿಂಕ್ ಶೇರ್ ಮಾಡುವ ಮೂಲಕ ಉತ್ಸಾಹ ತುಂಬಬೇಕು ಎಂದರು. ‘ಸಾವಿರ ದಾರಿ’ ಆತ್ಮ ವಿಶ್ವಾಸ ಒಂದೇ ಸಾಕು- ಮಾತಿಲ್ಲದ ಕಿರುಚಿತ್ರ. ಆದರೆ ಮೌನದಲ್ಲೇ ಸಹಸ್ರ ಸಹಸ್ರ ಹೃದಯಗಳನ್ನು ತಟ್ಟಬಲ್ಲ  ಶಕ್ತಿ ಇದರಲ್ಲಿದೆ. ಇಂದು ಎಲ್ಲರಿಗೂ ಉದ್ಯೋಗ ಕನಸೇ ಸರಿ. ಎಷ್ಟೇ ಓದಿದರೂ ಅರ್ಹತೆಗೆ ತಕ್ಕ ಸರಕಾರಿ ಉದ್ಯೋಗವಾಗಲಿ,  ಖಾಸಗಿ ಉದ್ಯೋಗವಾಗಲಿ ಸಿಗುವದು ಕಷ್ಟ. ಇನ್ನೊಬ್ಬರ ಕೈಯಲ್ಲಿ ಸಿಕ್ಕು ಆಳಾಗಿ ದುಡಿಯುವದಕ್ಕಿಂತ ಸ್ವಂತ ಉದ್ಯೋಗವನ್ನು ಮಾಡುವ ಮೂಲಕ ತನಗೆ ತಾನೇ ರಾಜನಾಗಿ ಮೆರೆಯಬಹುದು. ಉದ್ಯೋಗ ಸಿಕ್ಕಿಲ್ಲ ಎಂಬ ನಿರಾಸೆ ಭಾವವನ್ನು ಬಿಟ್ಟು , ಖಿನ್ನನಾಗಿ, ತನ್ನ ಭವಿಷ್ಯವನ್ನು ಮಾನಸಿಕವಾಗಿ ಕುಗ್ಗಿ ಹಾಳು ಮಾಡಿಕೊಳ್ಳದೆ, ಬದುಕಲು ಸಾವಿರ ದಾರಿಗಳಿವೆ. ಅವುಗಳಲ್ಲಿ ನಮಗೆ ತಕ್ಕುದಾದದ್ದನ್ನು ಆರಿಸಿಕೊಂಡು ಬದುಕನ್ನು ರೂಪಿಸಿಕೊಳ್ಳಬೇಕೆನ್ನುವ ಸಮಕಾಲೀನ ಸಮಸ್ಯೆಯ ಪರಿಹಾರದ ಸಂದೇಶ ಈ ಕಿರುಚಿತ್ರದಲ್ಲಿದೆ. ಯುವಜನರಿಗೆ ಇದೊಂದು ಆಶಾಭಾವನೆ ಮೂಡಿಸುವಲ್ಲಿ ಯಶಸ್ವಿಯಾಗುತ್ತದೆ. ಪರಾವಲಂಬಿಯಾಗದೆ ಸ್ವಾವಲಂಬಿಯಾಗಿ ಬದುಕಬೇಕೆಂಬುದನ್ನು ಬಿಂಬಿಸುವ   ಪಾತ್ರವರ್ಗದಲ್ಲಿ ಹಿರಿತೆರೆಮತ್ತು ಕಿರುಚಿತ್ರಗಳಲ್ಲಿ ಅಭಿನಯಿಸಿ ಇದೀಗ ಗುರುತಿಸಿಕೊಳ್ಳುತ್ತಿರುವ ಯುವ ಕಲಾವಿದ ಅವಿನಾಶ ಗಂಜಿಹಾಳ, ಹಿರಿಯ ರಂಗ-ಚಿತ್ರ ಕಲಾವಿದರಾದ ಆರ್.ಎನ್.ಕುಲಕರ್ಣಿ,ಪ್ರೊ.ಎಂ.ಎಸ್.ಕುಲಕರ್ಣಿ, ವಿಶ್ವನಾಥ ಬೇಂದ್ರೆ, ಡಾ.ಪ್ರಭು ಗಂಜಿಹಾಳ, ಶಂಕರಶಿಂಗ್ ಮಳ್ಳದ, ರಾಚಯ್ಯ ಹೊಸಮಠ, ವೀರಯ್ಯ ಹೊಸಮಠ, ದುರ್ಗೇಶ ಭೈರಮ್ಮನವರ್,ಬುಡ್ಡಾ ಆಲೂರ್, ಶ್ರೀಮತಿ ಸುಲೋಚನಾ ಐಹೊಳ್ಳಿ, ಶ್ರೀಮತಿ ವಿದ್ಯಾ ಗಂಜಿಹಾಳ ಆಭಿನಯಿಸಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಬಸವರಾಜ ಪಲ್ಲೇದ,ಸಹ ಛಾಯಾಗ್ರಹಣ ಖಾಜೇಸಾಬ ಬೂದಿಹಾಳ್, ಸಂಗೀತ ಸಂಯೋಜನೆ ಮಿಕ್ಕಿ ಹಬೀಬ, ಪ್ರಣಮ್ ಕಣಾದ, ಸಂಕಲನ ಅವಿನಾಶ ಗಂಜಿಹಾಳ, ಪತ್ರಿಕಾಸಂಪರ್ಕ ಡಾ.ವೀರೇಶ ಹಂಡಗಿ, ಪ್ರಚಾರ ಕಲೆ ವಿಶ್ವಪ್ರಕಾಶ ಮಲಗೊಂಡ, ಸಹನಿರ್ದೇಶನ ಡಾ.ಪ್ರಭು ಗಂಜಿಹಾಳ್, ಪರಿಕಲ್ಪನೆ-ನಿರ್ದೇಶನ ಈಗಾಗಲೇ ನಾ ಅದೀನಿ, ಕಾಲ್ ಮೀ ಕಿರುಚಿತ್ರಗಳನ್ನು ನಿರ್ದೇಶಿಸಿದ ಬಿ.ಮೌನೇಶ್ ನಿರ್ದೇಶನ ಮಾಡಿದ್ದಾರೆ. ಬಿ.ವಿಷ್ಣು ಆಚಾರ್ಯ ನಿರ್ಮಿಸಿದ್ದಾರೆ. ಈ ಕಿರುಚಿತ್ರ ಚಿನ್ಮಯ ಸ್ಟುಡಿಯೋಸ್ ಯೂಟೂಬ್ ಚಾನೆಲ್ ದಲ್ಲಿ ನೋಡಬಹುದಾಗಿದೆ.

ವರದಿಡಾ.ಪ್ರಭು.ಗಂಜಿಹಾಳ ಮೊ:೯೪೪೮೭೭೫೩೪೬

Leave a Reply

Your email address will not be published. Required fields are marked *