ಜೈ ಭೀಮ್, ಜೈ ಜೈ ಭೀಮ್, ಜೈ ಭೀಮ್,,,,,

Spread the love

ಜೈ ಭೀಮ್, ಜೈ ಜೈ ಭೀಮ್, ಜೈ ಭೀಮ್,,,,,

ಮಹಾಭಾರತದ ಭೀಮನು ತೋಳ್ಬಲದಿಂದ ಪುರಾಣ ಪ್ರಸಿದ್ಧ, ಆದರೆ ನಮ್ಮೀ ಭೀಮ್(ಅಂಬೇಡ್ಕರ್) ರವರು ಅಸೀಮ ಜ್ಞಾನ ಬಲದಿಂದ ಸಾರ್ವಕಲಿಕ ಪ್ರಸಿದ್ಧ.. ಸರ್ವರಿಗೂ ಡಾ|| ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ  ಜಯಂತಿಯ ಶುಭಾಶಯಗಳು

ಅಂಬೇಡ್ಕರ್ ಜಯಂತಿಯ ಪ್ರಯುಕ್ತ ನನ್ನ ಈ ಕಿರು ಲೇಖನವನ್ನು ನಿಮ್ಮ ಹೃದಯಕ್ಕೆ ಅರ್ಪಿಸುತ್ತಿದ್ದೇನೆ.

ಅಂಬೇಡ್ಕರ್ ಅದೊಂದು ವ್ಯಕ್ತಿಯಲ್ಲ, ಅದು ಅಗಾಧ ಶಕ್ತಿ, ಅಪರಿಮಿತ ಯುಕ್ತಿ,ಧಮನಿತರಿಗೆ ಮುಕ್ತಿ.. ಅವರ ಅತ್ಯಂತ ಪರಮೋಚ್ಛ ಸಿಡಿಲಧ್ವನಿ “ಶಿಕ್ಷಣ,ಸಂಘಟನೆ,ಹೋರಾಟ ಇವು ಮೂರು ಮನುಕುಲದ ಉದ್ಧಾರಕ ಮಂತ್ರಗಳಾದಬೇಕು”.

“ಶಿಕ್ಷಣ” ಅಂಬೇಡ್ಕರ್ ಅವರ ಪ್ರಕಾರ “ಶಿಕ್ಷಣ” ಅಂದರೆ ಕೇವಲ ಅಕ್ಷರ ಜ್ಞಾನ ಮಾತ್ರವಲ್ಲ.ಗಳಿಸಿದ ಅಂಕಗಳಲ್ಲ, A+,A,B+….ಗಳಲ್ಲ. ಶಿಕ್ಷಣ ಪಡೆಯುವ ಎಲ್ಲರೂ ಮಾನವೀಯ ಮೌಲ್ಯಗಳನ್ನು ಹೊಂದುವುದು, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವುದು, ಸಮಾನ ಸಮಾಜದಲ್ಲಿ ಸಮಾನತೆಯ ಜೀವನ ನಡೆಸುವಂತಾಗುವುದೇ ಶಿಕ್ಷಣ. ಆ ನಿಟ್ಟಿನಲ್ಲಿ ನಾವು ಶಿಕ್ಷಣ ವ್ಯವಸ್ಥೆ ರೂಪಿಸಿ ಅಂಬೇಡ್ಕರ್ ಕನಸು ನನಸಾಗಿಸುವುದು.

“ಸಂಘಟನೆ” “ಸಂಘಟಿತರಾಗದ ಹೊರತು ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ” , ಎಂಬುದು ಅಂಬೇಡ್ಕರ್ ಬಲವಾದ ನಂಬಿಕೆ. ಇಂದು ಜನ ಸಂಘಟಿತರಾಗುತ್ತಿರುವುದು ಸರಿಯಷ್ಟೇ!  ಅದರೆ ಕುಲಕ್ಕೊಂದು ಸಂಘ, ಜಾತಿಗೊಂದು ಸಂಘ, ಧರ್ಮಕ್ಕೊಂದು ಸಂಘ, ವಠಾರಕ್ಕೊಂದು, ಓಣಿಗೊಂದು, ಊರಿಗೊಂದರಂತೆ ಸಂಘಗಳು, ಭಾಷೆಗೊಂದು ಸಂಘ,…. ಹೀಗೆ ಜನ ಸಂಘ ಹುಟ್ಟು ಹಾಕಿ ಸಂಘಟನೆಯ ಅರ್ಥವನ್ನೇ ಹಾಳು ಮಾಡುತ್ತಿದ್ದಾರೆ. ಇಂತಹ ಬೆಳವಣಿಗೆ ಇಂದ ಸಮಾಜ ಸಂಘಟನೆ ಆಗುವ ಬದಲು ವಿಘಟನೆ ಆಗುತ್ತಿರುವುದು ಕಳವಳವನ್ನು ಉಂಟು ಮಾಡುತ್ತದೆ. ಅಂಬೇಡ್ಕರ್ ಅವರ ಅಭಿಪ್ರಾಯದಲ್ಲಿ ನಾವು ಸಂಘಟಿತರಾಗಬೇಕಿರುವುದು ಜಾತಿ, ಕುಲ, ಧರ್ಮ, ಬಣ್ಣ, ಭಾಷೆ, ಸ್ಥಳ…ಗಳ ಆಧಾರದ ಮೇಲಲ್ಲ. ಆದರೆ ಭಾರತೀಯತೆ/ಭಾರತೀಯರು ಎಂಬುದರ ಮೇಲೆ ಸಂಘಟಿತರಾಗಬೇಕಿದೆ. ಅಗಾದಗ ಮಾತ್ರ ಅವರ ಕನಸಿಗೆ ನೀರೆರೆದಂತಾಗುತ್ತದೆ.

“ಹೋರಾಟ”

“ನಮಗೆ ಸಿಗಬೇಕಾದ ಸ್ಥಾನ- ಮಾನಗಳು ಸಿಗದೆ ಹೋದರೆ ಅವನ್ನು ಪಡೆಯಲು ಹೋರಾಟಕ್ಕಿಳಿಯಬೇಕು”.

– ಅಂಬೇಡ್ಕರ್ ಇಂದು ಕೂಡಾ ಲಕ್ಷಾಂತರ ಹೋರಾಟಗಳು ನಮ್ಮ ಸುತ್ತ ನಡೆಯತ್ತಲೇ ಇವೆ. ಅವುಗಳಲ್ಲಿ ಬಹುತೇಕ ಸ್ವಹಿತಾಸಕ್ತಿಯನ್ನು ಪ್ರಚುರಪಡಿಸುತ್ತವೆ. ಸ್ವಾರ್ಥ, ಸ್ವಜನ ಪಕ್ಷಪಾತ, ರಾಜಕೀಯ ಪ್ರೇರಿತ ಹೋರಾಟಗಳದ್ದೇ ಸಿಂಹಪಾಲು. ಅಂಬೇಡ್ಕರ್ ಆಶಯದಂತೆ ನಾವು ಹೋರಾಟ ಮಾಡಬೇಕಿರುವವುದು ನಮ್ಮ “ಸಾಮಾಜಿಕ ಸ್ಥಾನಮಾನಗಳಿಗಾಗಿ, ನಮ್ಮ ಮೂಲಭೂತ ಹಕ್ಕುಗಳಿಗಾಗಿ,ಸಮತಾಭಾವಕ್ಕಾಗಿಯೇ ಹೊರತು, ಸರ್ಕಾರದಿಂದ ದೊರೆಯುವ ಸಬ್ಸಿಡಿಗೋ, ಯಾವನೋ ಒಬ್ಬ ಸ್ವಾರ್ಥ ರಾಜಕಾರಣಿಯ ಹಿತಾಸಕ್ತಿಗೋ ಅಲ್ಲ.

ಬಂಧುಗಳೇ,  ಅಂಬೇಡ್ಕರ್ ರ ಕೊನೆಯ ದಿನಗಳಲ್ಲಿ ಹೇಳುತ್ತಿದ್ದ ಮಾತನ್ನು ಪ್ರಸ್ತಾಪಿಸುತ್ತ  ಲೇಖನವನ್ನು ಮುಗಿಸುತ್ತೇನೆ.

” ಪ್ರೀತಿಯ ಭಾರತೀಯರೇ, ನೀವು ಪ್ರೀತಿಸಬೇಕಿರುವುದು ನನ್ನನ್ನಲ್ಲ, ಬದಲಾಗಿ ನನ್ನ ವಿಚಾರಗಳನ್ನು ಪ್ರೀತಿಸಿ. ನಿಮ್ಮನ್ನು ಪ್ರೀತಿಸಿ, ದೇಶವನ್ನು ಪ್ರೀತಿಸಿ, ಕಾನೂನನ್ನು ಪ್ರೀತಿಸಿ.” ಬನ್ನಿ ಭಾರತೀಯ ಬಂಧುಗಳೇ ಅಂಬೇಡ್ಕರ್ ಅವರ ಕನಸಿನ “ಸಮಾನ ಭಾರತ, ಸಶಕ್ತ ಭಾರತ ” ವನ್ನು ರೂಪಿಸಿ ಅಂಬೇಡ್ಕರ್ ರವರಿಗೆ ಭಕ್ತಿ ಸಮಪರ್ಪಿಸೋಣ…. ನಿಮ್ಮ ಶಿವಾನಂದ ಬಿಬಿ ತೂಲಹಳ್ಳಿ, ಕೂಡ್ಲಿಗಿ  95917 49094

ವರದಿ – ️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *