ಮೂಲತಃ ಹಾವೇರಿ ಜಿಲ್ಲೆಯವರಾದ ಡಾ.ಅಂಬಿಕಾ ಹಂಚಾಟೆಯವರು ಜಾಗತಿಕ ಮಟ್ಟದಲ್ಲಿ 2016 ರಿಂದಲೂ ತಮ್ಮ ಅಮೂಲ್ಯ ಸೇವೆಯನ್ನು ಶೈಕ್ಷಣಿಕ ಮತ್ತು ಕ್ರಿಯಾತ್ಮಕ ಹಂತದಲ್ಲಿ ನೀಡುತ್ತಾ ಬಂದಿರುವುದು ವಿಶೇಷ .ವಿಶ್ವ ಮಟ್ಟದ ಅನೇಕ ಅತ್ಯನತ ತೀರ್ಪುಗಾರರ ಸಮಿತಿಯಲ್ಲಿ ತಮ್ಮದೇ ಕೌಶಲ್ಯದ ಛಾಪನ್ನು ಒತ್ತಿರುವುದು ನಾಡಿನ ಹೆಮ್ಮೆಯೂ ಕೂಡ .ಅದರಲ್ಲಿ ಈ ವರ್ಷದ ಸಾಫ್ಟವೆರ್ ಅಂಡ್ ಇಂಫಾರ್ಮೇಷನ್ ವಾಷಿಂಗ್ಟನ್ ಡಿಸಿ ಯಲ್ಲಿ ಅಯೋಜಿತ ಏಕ್ಸ್ ಲ್ ಅವಾರ್ಡ್ ಸಮಿತಿಯಲ್ಲಿ ಉತ್ತಮ ತೀರ್ಪುಗಾರರಾಗಿ ಡಿಜಿಟಲ್ ಮೀಡಿಯಾ ,ಜನರಲ್ ಎಕ್ಸಲೇನ್ಸ್ ,ಜರ್ನಲ್ /ನ್ಯೂಸ್ಪೆಪರ್ ವಿಭಾಗದಲ್ಲಿ ತಮ್ಮ ಉನ್ನತ ಕಾರ್ಯ ನೀಡಿದ್ದು ಸಮಿತಿಯಿಂದ ಪ್ರಶಂಸಾ ಪತ್ರ ಪಡೆದಿರುತ್ತಾರೆ.
ಅದೇ ರೀತಿ ಜೇಸ್ಸೇ .ಎಚ್ 1955ರಲ್ಲಿ ಸ್ಥಾಪಿತಪಾದ ನೀಲ್ ಅವಾರ್ಡ್ ಕಮಿಟಿಯಲ್ಲಿ ಉತ್ತಮ ತೀರ್ಪುಗಾರಾಗಿ ಬೆಸ್ಟ್ ಕೋವಿಡ್19 ಕವರೇಜ್, ಬೆಸ್ಟ್ ಪ್ರೊಫೈಲ್, ಬೆಸ್ಟ್ ಆರ್ಟ್ ಇನ್ನಿತರ ವಿಭಾಗಗಳಲ್ಲಿ ಮೊದಲ ಹಗಸ್ ಎರಡನೆಯ ಸುತ್ತಿನಲ್ಲು ಉತ್ತಮ ಕಾರ್ಯ ಸಾಧನೆಯನ್ನು ತೋರಿ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ .ಇನ್ನು 2021 ರ ಬೆಸ್ಟ್ ಕಾರ್ಪೊರೇಟ್ ಅಂಡ್ ಬಿಸಿನೆಸ್ ಟೆಕ್ನಾಲಜಿ ವಿಭಾಗದಲ್ಲಿ ಉತ್ತಮ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿರುತ್ತಾರೆ ,
ಹೀಗೆಯೇ ಡಾ.ಅಂಬಿಕಾ ಹಂಚಾಟೆ ಯವರ ಎಲ್ಲ ಕಾರ್ಯಗಳು ಯಶಸ್ಸನ್ನು ಪಡೆಯಲಿ ಕರುನಾಡಿನ ಕೀರ್ತಿ ಪತಾಕೆಯನ್ನು ಎಲ್ಲೆಡೆ ಪಸರಿಸುವ ಮಟ್ಟಕ್ಕೆ ಬೆಳೆಯಲಿ ಎಂದು ಪತ್ರಿಕಾ ಬಳಗದಿಂದ ,ಜನ ಮನ ಸಂಸ್ಥೆಯಿಂದ ಹಾರೈಸುವೆವು .