ನರಗುಂದದಲ್ಲಿ ವಿವಿಧ ಕಾಮಗಾರಿಗಳಿಗೆ ಲೋಕಾರ್ಪಣೆ ಮಾಡಿದ ಶ್ರೀ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು,,,,,,

Spread the love

ನರಗುಂದದಲ್ಲಿ ವಿವಿಧ ಕಾಮಗಾರಿಗಳಿಗೆ ಲೋಕಾರ್ಪಣೆ ಮಾಡಿದ ಶ್ರೀ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು,,,,,,

ಇಂದು ನರಗುಂದ ಪಟ್ಟಣಕ್ಕೆ ಆಗಮಿಸಿದಂಥ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನರಗುಂದದಲ್ಲಿ ವಿವಿಧ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿದರು ಅದರಲ್ಲಿ ಕೆಲವು ಪ್ರಮುಖ ಕಾಮಗಾರಿಗಳ ವಿವರಗಳು ಕೆಳಗಿನಂತಿವೆ .ನರಗುಂದ ಪಟ್ಟಣದ ಸರ್ಕಾರಿ ತಾಂತ್ರಿಕ  ಮಹಾವಿದ್ಯಾಲಯ ಉದ್ಘಾಟನೆ ನೂತನ ಪ್ರವಾಸಿ ಮಂದಿರ ಹಾಗೂ ವಸತಿ ಗೃಹಗಳ ಉದ್ಘಾಟನೆ ನರಗುಂದ ತಾಲೂಕು ಮೂಗನೂರು  ಗ್ರಾಮದಲ್ಲಿ ಲಿಫ್ಟ್ ಇರಿಗೇಷನ್ ಉದ್ಘಾಟನೆ ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿ ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ಮಠ ಹಾಗೂ ನರಗುಂದ ತಾಲ್ಲೂಕಿನ ವಿರಕ್ತ ಮಠದ ಯಾತ್ರಿ ನಿವಾಸ ಉದ್ಘಾಟನೆ  ನರಗುಂದ ತಾಲ್ಲೂಕಿನ ದಂಡಾಪುರದಲ್ಲಿ ಹಾಗೂ ಜಗಾಪುರ ಗ್ರಾಮದಲ್ಲಿ  ನೂತನ ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟಿಸಿದರು ಸಮಾಜ ಕಲ್ಯಾಣ ಇಲಾಖೆ ವತಿಯಿಂದ 6.89ಲಕ್ಷಗಳ ಅನೇಕ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿದರು ವಸತಿ ಇಲಾಖೆ ವತಿಯಿಂದ ಮೂವತ್ತೆರಡು ಕೋಟಿ ರೂಪಾಯಿಗಳ  ವಸತಿ ಕಟ್ಟಡಗಳ  ನಿರ್ಮಾಣ ಲೋಕೋಪಯೋಗಿ ಇಲಾಖೆ ವತಿಯಿಂದ 78.01 ಕೋಟಿಗಳ ಕಾಮಗಾರಿಗಳನ್ನು ನೆರವೇರಿಸಿದರು ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸನ್ಮಾನ್ಯ ಶ್ರೀ ಲೋಕೋಪಯೋಗಿ ಸಚಿವ ಸನ್ಮಾನ್ಯ  ಸಿ ಸಿ ಪಾಟೀಲ್  ಅವರಿಗೆ ಜನಪ್ರಿಯ ಅಲ್ಲ ಜನೋಪಯೋಗಿ ಸಚಿವರು ಎಂದು ಕೂಡ ಹೇಳಿದರು ಮುಂದೆ ಮಾತನಾಡಿದ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಹಿಂದೆ ಗೋವಾದಲ್ಲಿ ಇದ್ದ ಕಾಂಗ್ರೆಸ್ ಸರ್ಕಾರ ಕರ್ನಾಟಕ ಜನರಿಗೆ ಕಳಸಾ ಬಂಡೂರಿಯನ್ನು ಕೂಡಿಸಿ ಕೊಡುವುದಿಲ್ಲವೆಂದು ಚುನಾವಣಾ ಪ್ರಚಾರದಲ್ಲಿ ಹೇಳಿತು ಆದರೆ ಆಗ ಇಲ್ಲಿದ್ದ ಕಾಂಗ್ರೆಸ್ ಸರ್ಕಾರ ಅವರ ಹೇಳಿಕೆಗೆ ಯಾವುದೇ ವಿರೋಧವನ್ನು ವ್ಯಕ್ತಪಡಿಸದೆ ಅದಕ್ಕೆ ಸಹಕರಿಸಿತು ಆದರೆ ಇಂದು ಕಳಸಾ ಬಂಡೂರಿ ಯೋಜನೆಗೆ ಪಾದಯಾತ್ರೆ ಮಾಡುತ್ತಾ ನಾಟಕ ಮಾಡುತ್ತಿದೆ ಎಂದು ಹೇಳಿದರು ಅಂದು ನಾನು ಮಾಡಿದ ಪಾದಯಾತ್ರೆಯ ಪ್ರತಿಫಲವಾಗಿ ನಾನು ಇಂದು  ಮುಖ್ಯಮಂತ್ರಿಯಾಗಿ ಈ ಕಳಸಾ ಬಂಡೂರಿ ಯೋಜನೆಗೆ 1 ಸಾವಿರ ಕೋಟಿ ರೂ ಮೀಸಲಿಟ್ಟಿದ್ದೇನೆ ಎಂದು ಹೇಳಿದರು ಈಗಾಗಲೇ ನಾನು ಕೇಂದ್ರ ಜಲ ಸಚಿವರಿಗೆ 1 ಸಾವಿರ ಕೋಟಿ ಮೀಸಲಿಟ್ಟಿದ್ದು ಈ ತಿಳಿಸಿದ್ದು ಇದರ ಯೋಜನೆಯನ್ನು  ಕೂಡಲೇ ಸಂಪೂರ್ಣವಾಗಿಸಲು ಸಹಕರಿಸಬೇಕೆಂದು ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವರಾದ ಸನ್ಮಾನ್ಯ  ಸಿ ಸಿ ಪಾಟೀಲರು, ಗದಗ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವರಾದ  ಬಿ ಸಿ ಪಾಟೀಲರು ಹಾಗೂ ನೀರಾವರಿ ಸಚಿವರಾದ ಗೋವಿಂದ ಕಾರಜೋಳ, ಸಂಸದರಾದ ಪಿ ಸಿ ಗದ್ದಿಗೌಡ್ರ, ಶಾಸಕರಾದ  ಕಳಕಪ್ಪ ಬಂಡಿ ಮುಂತಾದವರು ಉಪಸ್ಥಿತರಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *