ಕುಷ್ಟಗಿ ತಾಲೂಕಿನ ಸಂಗನಾಳ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಕನ್ನಾಳ ಗ್ರಾಮದಲ್ಲಿ ದಲಿತರ ಜಾಗತೀಕರ ಸಭೆ ಸರಳವಾಗಿ ಜರಗಿತ್ತು….
ಜಾಗತೀಕರಣ ಮತ್ತು ಉದಾರೀಕರಣ ತೆರೆದುಕೊಂಡ ಸಂದರ್ಭದಲ್ಲಿ , ಇದರಿಂದ ದಲಿತರಿಗೆ ಹೆಚ್ಚು ಪ್ರಯೋಜನವಾಗುತ್ತದೆ ಎಂದು ಕೆಲವು ದಲಿತ ನಾಯಕರುಗಳೇ ವಾದಿಸಿದ್ದರು ಜಾಗತೀಕರಣದಿಂದ ಸಂಭವಿಸುವ ದುರಂತಗಳಿಗೂ ದಲಿತ ಸಮುದಾಯಕ್ಕೂ ಸಂಬಂಧವಿಲ್ಲ ಎಂಬ ಅರ್ಥದಲ್ಲಿ ಅವರು ಮಾತನಾಡುತ್ತಿದ್ದರು . ಈ ನಿಟ್ಟಿನಲ್ಲಿ ಜಾಗತೀಕರಣ ಹೇಗೆ ದಲಿತರ ಬದುಕಿನ ಮೇಲೆ ತನ್ನ ಪರಿಣಾಮವನ್ನು ಬೀರಿದೆ ಎನ್ನುವುದನ್ನು ಮಲ್ಲಪ್ಪ ವಜ್ರದ Asi ಅವರು ‘ ಜಾಗತೀಕರಣ ಮತ್ತು ದಲಿತರು ‘ ಕೃತಿಯಲ್ಲಿ ಚರ್ಚಿಸಿದ್ದಾರೆ ನವ ಉದಾರವಾದ ನೀತಿಯೂ ಸಹ ತನ್ನ ಆಕ್ರಮಣಕಾರಿ ಪ್ರವೃತ್ತಿಯನ್ನು ಬದಿಗಿಟ್ಟು , ನೊಂದ ಜನಸಮುದಾಯಗಳ ಮನಗೆಲ್ಲಲು ವಿಭಿನ್ನ ತಂತ್ರಗಳನ್ನು ಅನುಸರಿಸುತ್ತಿದೆ . ನವ ಉದಾರವಾದದ ಕರಾಳ ಬಾಹುಗಳನ್ನು ಪ್ರತಿರೋಧಿಸುವ ಜನಪರ ಚಳವಳಿಗಳನ್ನು ದೇಶದ ಭದ್ರತೆಗೆ ಮಾರಕ ಎಂದು ಬಿಂಬಿಸುವುದು ಈ ತಂತ್ರಗಳಲ್ಲಿ ಒಂದಾಗಿದೆ . ವಿಪರ್ಯಾಸವೆಂದರೆ ದೇಶದ ದಲಿತ ಸಮುದಾಯಗಳು , ಸಾಮುದಾಯಿಕ ಪ್ರಜ್ಞೆಯನ್ನೇ ಕಳೆದುಕೊಳ್ಳುತ್ತಿರುವ ಸಂಘಟನೆಗಳು ಆಳ್ವಿಕರ ಈ ತಂತ್ರಕ್ಕೆ ಸುಲಭವಾಗಿ ತುತ್ತಾಗುತ್ತಿವೆ ಎಂದು ಕೃತಿಯ ಮುನ್ನುಡಿಯಲ್ಲಿ ತತ್ಪರಿಣಾಮವಾಗಿ ಜಾಗತೀಕರಣದಿಂದ ದಲಿತರಿಗೆ ಅನುಕೂಲಗಳೇ ಹೆಚ್ಚು ಎಂಬ ವಾದಕ್ಕೆ ಹೆಚ್ಚು ಪುಷ್ಟಿ ದೊರೆಯುತ್ತಿದೆ . ಈ ಗೊಡ್ಡು ವಾದವನ್ನು ನಿರಾಕರಿಸುವುದಷ್ಟೇ ಅಲ್ಲದೆ , ಅಂಕಿ ಅಂಶಗಳ ಸಮೇತ ತಿರಸ್ಕರಿಸಲು ಪ್ರಸ್ತುತ ಕೃತಿ ನೆರವಾಗುತ್ತದೆ . ಈ ಹಿನ್ನೆಲೆ ಯಲ್ಲಿ ಪ್ರಸ್ತುತ ಕೃತಿ ಜಾಗತೀಕರಣದ ಪರಿಣಾಮ ಮತ್ತು ದಲಿತ ಸಮುದಾಯಗಳ ಸ್ಥಿತ್ಯಂತರಗಳ ಬಗ್ಗೆ ಆಮೂಲಾಗ್ರ ಚಿತ್ರಣ ನೀಡುತ್ತದೆ ಕೃತಿಯಲ್ಲಿ ಜಾಗತೀಕರಣವನ್ನು ಶಿಸ್ತು ಬದ್ಧವಾಗಿ ಅಧ್ಯಯನ ಮಾಡಲಾಗಿದೆ . ಆರಂಭದಲ್ಲಿ ಜಾಗತೀಕರಣದ ಚಾರಿತ್ರಿಕ ದೃಷ್ಟಿಕೋನವನ್ನು ಲೇಖಕರು ತೆರೆದಿಟ್ಟಿದ್ದಾರೆ . ಜಾಗತಿಕ ವ್ಯವಸ್ಥೆಗೆ ಭಾರತದ ಪ್ರವೇಶವಾದ ಸಂದರ್ಭ ಮತ್ತು ಭಾರತದಲ್ಲಿ ದಲಿತರ ವಾಸ್ತವ ಸ್ಥಿತಿಯನ್ನು ಈ ಅಧ್ಯಾಯದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ . ಎರಡನೆ ಅಧ್ಯಾಯದಲ್ಲಿ ಬಡಜನತೆಯ ಮೇಲೆ ಸುಧಾರಣ ಮಾಡಿರುವ ಪ್ರಭಾವ ಯಾವ ರೀತಿಯದು ಎನ್ನುವುದು ಕೃತಿಯಲ್ಲಿ ಜಾಗತೀಕರಣವನ್ನು ಶಿಸ್ತು ಬದ್ಧವಾಗಿ ಅಧ್ಯಯನ ಮಾಡಲಾಗಿದೆ . ಆರಂಭದಲ್ಲಿ ಜಾಗತೀಕರಣದ ಚಾರಿತ್ರಿಕ ದೃಷ್ಟಿಕೋನವನ್ನು ಲೇಖಕರು ತೆರೆದಿಟ್ಟಿದ್ದಾರೆ . ಜಾಗತಿಕ ವ್ಯವಸ್ಥೆಗೆ ಭಾರತದ ಪ್ರವೇಶವಾದ ಸಂದರ್ಭ ಮತ್ತು ಭಾರತದಲ್ಲಿ ದಲಿತರ ವಾಸ್ತವ ಸ್ಥಿತಿಯನ್ನು ಈ ಅಧ್ಯಾಯದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ . ಎರಡನೆ ಅಧ್ಯಾಯದಲ್ಲಿ ಬಡಜನತೆಯ ಮೇಲೆ ಸುಧಾರಣೆ ಮಾಡಿರುವ ಪ್ರಭಾವ ಯಾವ ರೀತಿಯದ್ದು ಎನ್ನುವುದು ಬಿಡಿ ಬಿಡಿಯಾಗಿ ನೋಡಲಾಗಿದೆ . ಹಾಗೆಯೇ ಅವಕಾಶ ವಂಚಿತ ಸಾಮಾಜಿಕ ಸಮುದಾಯಗಳಾಗಿ ದಲಿತರ ಮೇಲೆ ಸುಧಾರಣೆಯ ಪ್ರಭಾವವನ್ನು , ಶಿಕ್ಷಣ , ಉದ್ಯೋಗ , ದೌರ್ಜನ್ಯಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ವಿವರಿಸಲಾಗಿದೆ . ಗುಂಡಪ್ಪ ಸರ್..ಮಹೇಶ ಪಾಟೀಲ್ ಬೆಟ್ಟಪ್ಪ ಮೇತಿನಾಳ ಬಸರಾಜ ತಳವಾರ.ಮುದುಕಪ್ಪ ಶಿವು.ಮುದುಕಣ್ಣ.ಶರಣಪ್ಪ. ಹನುಮಂತ.ಕನಕಪ್ಪ ತಳವಾರ ಹಾಗೂ ಊರಿನ ಹಿರಿಯರು ಈ ಕಾರ್ಯಕ್ರಮದಲ್ಲಿ ಪಾಲುಗೊಂಡಿದ್ದರು.
ವರದಿ – ಸೋಮನಾಥ ಹೆಚ್ ಎಮ್