ವಿಜಯನಗರ ಸಾಮ್ರಾಜ್ಯ ಸಂಸ್ಥಾಪನ ದಿನಾಚರಣೆ : ಹಕ್ಕ–ಬುಕ್ಕ, ಇತರೆ ಮಹಾರಾಜರಗಳ ಬಗ್ಗೆ ಹೆಚ್ಚು ಸಂಶೋಧನೆ ನಡೆಯಲಿ: ಪ್ರಕಾಶ ದೊರೆ,,
ಲಿಂಗಸೂಗೂರು: ವಿಶ್ವವಿಖ್ಯಾತ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕ-ಬುಕ್ಕ ಸೇರಿ ಆ ಕಾಲಘಟಕದ ರಾಜಮನೆತನಗಳ ಹಾಗೂ ಮಹಾರಾಜರ ಕುರಿತು ಸತ್ಯ ಶೋಧನೆಯೊಂದಿಗೆ ಇನ್ನಷ್ಟು ಹೊಸ ಹೊಸ ಆಯಾಮಗಳಲ್ಲಿ ಸಂಶೋಧನೆಗಳು ನಡೆಯಬೇಕಿದೆ ಎಂದು ಕಲಬುರಗಿಯ ಪತ್ರಕರ್ತ ಪ್ರಕಾಶ ದೊರೆ ಅಭಿಪ್ರಾಯಪಟ್ಟರು. ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಸೋಮವಾರ ಕುಮಾರರಾಮ ಇತಿಹಾಸ ಸಂರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ವಿಜಯನಗರ ಸಾಮ್ರಾಜ್ಯ ಸಂಸ್ಥಾಪಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೊಸ ಸಂಶೋಧನೆಗಳ ಮೂಲಕ ಇತಿಹಾಸಕ್ಕೆ ವಿಶಿಷ್ಟ ಕೊಡುಗೆ ನೀಡುವ ನಿಟ್ಟಿನಲ್ಲಿ ಸಂಶೋಧಕರು ಆಲೋಚಿಸಬೇಕಿದೆ ಎಂದರು. ಇಡೀ ಜಗತ್ತೆ ಬೇರಗಾಗುವ ರೀತಿಯಲ್ಲಿ ಸಾಮ್ರಾಜ್ಯ ಕಟ್ಟಿದ ಹಕ್ಕ-ಬುಕ್ಕರನ್ನು ನೆನೆಯುವ ಮತ್ತು ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು. ಗಲಗ ರಾಜಮನೆತನದ ವಂಶಸ್ಥರಾದ ಬಸವರಾಜ ನಾಯಕ ಮಾತನಾಡಿ, ವರ್ಷದಿಂದ ವರ್ಷಕ್ಕೆ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆ ವಿಜೃಂಭಣೆಯಿಂದ ಆಚರಿಸುವಂತಾಗಲಿ ಎಂದು ಶುಭಕೋರಿದರು.
ವರದಿ – ಸಂಪಾದಕೀಯ