ವಿಜಯನಗರ ಹೊಸಪೇಟೆ :ಶೈಕ್ಷಣಿಕ ಪ್ರಗತಿ ಪರಶೀಲನಾ ಸಭೆ..
ಹೊಸಪೇಟೆ :ಶ್ರೀಮತಿ ಗರೀಮಾ ಪಂವಾರ್ ಐಎ ಎಸ್ ಮಾನ್ಯ ಅಪರ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ರವರ ನೇತೃತ್ವದಲ್ಲಿ ಸೋಮವಾರ ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಜಯನಗರ,ಬಳ್ಳಾರಿ,ಕೊಪ್ಪಳ ತ್ರಿವಳಿ ಜಿಲ್ಲೆಗಳ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಾಯಿತು. ಈ ಸಭೆಗೆ ಜಿ ಕೊಟ್ರೇಶ ಮಾನ್ಯ ಉಪನಿರ್ದೇಶಕರು,ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯನಗರ,ಹಾಗೂ ಶ್ರೀಮತಿ ಹನುಮಕ್ಕ ಉಪನಿರ್ದೇಶಕರು,ಸಾರ್ವಜನಿಕ ಶಿಕ್ಷಣ ಇಲಾಖೆ,ಬಳ್ಳಾರಿ,ಹಾಗೂ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ,ಮತ್ತು ಮೈಲೇಶ ಬೇವೂರು ಶಿಕ್ಷಣಾಧಿಕಾರಿಗಳು,ಉಪನಿರ್ದೇಶಕರ ಕಛೇರಿ,ಬಳ್ಳಾರಿ ಹಾಗೂ ಎಸ್ ಎಮ್ ವೀರಭದ್ರಯ್ಯ ಶಿಕ್ಷಣಾಧಿಕಾರಿಗಳು ಉಪನಿರ್ದೇಶಕರ ಕಛೇರಿ,ವಿಜಯನಗರ,ಮತ್ತು ಮೇಟಿ ಶಿಕ್ಷಣಾಧಿರಗಳು ಉಪನಿರ್ದೇಶಕರ ಕಛೇರಿ ಕೊಪ್ಪಳ,ಮತ್ತು ಮುದೋಳ ಮಾನ್ಯ ಅಪರ ಆಯುಕ್ತರ ಆಪ್ತ ಸಹಾಯಕರು, ಡಯಟ್ ಬಳ್ಳಾರಿ, ಹಾಗೂ ಮುನಿರಬಾದ್, ಕೊಪ್ಪಳ.ಉಪನ್ಯಾಸಕರು,ಹಾಗೂ ಗುರುವಪ್ಪ ಶಿಕ್ಷಣಾಧಿಕಾರಿಗಳು ಅಕ್ಷರ ದಾಸೋಹ ಬಳ್ಳಾರಿ ಹಾಗೂ ವಿಜಯನಗರ ಮತ್ತು ಶ್ರೀಮತಿ ಅನಿತಾ ಶಿಕ್ಷಣಾಧಿಕಾರಿಗಳು ಅಕ್ಷರ ದಾಸೋಹ ಕೊಪ್ಪಳ. ಮತ್ತು ಮೂರು ಜಿಲ್ಲೆಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು,ಕ್ಷೇತ್ರ ಸಮನ್ವಯ ಅಧಿಕಾರಿಗಳು ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಇತ್ಯಾದಿ ಅಧಿಕಾರಿಗಳು ಭಾಗವಹಿಸಿದ್ದರು. ಮಾನ್ಯ ಅಪರ ಆಯುಕ್ತರು ಈ ಸಭೆಯಲ್ಲಿ ಶೈಕ್ಷಣಿಕ ಗುಣಮಟ್ಟದ ವೃದ್ದಿಗಾಗಿ ಎಲ್ಲಾ ಅನುಷ್ಠಾನ ಅಧಿಕಾರಿಗಳು ತಮ್ಮ ಕಾರ್ಯದಕ್ಷತೆಯನ್ನು ಹೆಚ್ಚಿಸಿಕೊಳ್ಳಬೇಕು,ತಮ್ಮ ಹಂತದಲ್ಲಿ ಬಾಕಿಯಿರುವ ಕಡತಗಳನ್ನು ಯಾವುದೇ ಕಾರಣಕ್ಕೂ ವಿಳಂಬಮಾಡದೇ ನಿಗದಿತ ಕಾಲಮಿತಿಯಲ್ಲಿ ಬಗೆಹರಿಸಬೇಕು.ಹಾಗೂ ಅನುಕಂಪ ಆಧಾರಿತ ಕಡತಗಳನ್ನು ವಿಶೇಷ ಗಮನ ನೀಡಿ ಬಾಧಿತ ಕುಟುಂಬಗಳಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಬೇಕು. SATS ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಎಲ್ಲಾ ರೀತಿಯ ಶೈಕ್ಷಣಿಕ ಮಾಹಿತಿಗಳನ್ನು ಸಕಾಲದಲ್ಲಿ ಇಂದೀಕರಿಸಬೇಕು.ವಿಶೇಷವಾಗಿ ವಿದ್ಯಾರ್ಥಿಗಳ ಆಧಾರ ಸಂಖ್ಯೆ, ಬ್ಯಾಂಕ್ ಸಂಖ್ಯೆ,ಇತ್ಯಾದಿ, ಹಾಗೆಯೇ ಶಾಲೆಯ ಮೂಲಭೂತ ಸೌಕರ್ಯಗಳ ಮಾಹಿತಿಗಳನ್ನು ತಂತ್ರಾಂಶದಲ್ಲಿ ಇಂದೀಕರಿಸುವುದು.ತಮ್ಮ ವ್ಯಾಪ್ತಿಯ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿಸಲು ಎಲ್ಲಾ ಅನುಷ್ಠಾನ ಅಧಿಕಾರಿಗಳು ವಿಶೇಷ ಕ್ರಮವಹಿಸುವುದು. ಇದಕ್ಕಾಗಿ ಶಾಲೆಗಳ ದತ್ತು ಯೋಜನೆಯನ್ನು ಅನುಪಾಲಿಸುವುದು.ನಿರೀಕ್ಷೆ ಮೀರಿ ಶೈಕ್ಷಣಿಕ ಗುಣಮಟ್ಟಕ್ಕಾಗಿ ಎಲ್ಲಾ ಅನುಷ್ಠಾನ ಅಧಿಕಾರಿಗಳು ಶಾಲೆಗಳಿಗೆ ಸಂದರ್ಶನ ಮಾಡಿ ಮಾರ್ಗದರ್ಶನ ನೀಡುವುದು. ಕೋವಿಡ್ -19 ಸಂದರ್ಭದಲ್ಲಿ ಶೈಕ್ಷಣಿಕ ಗುಣಮಟ್ಟಕ್ಕೆ ಹಿನ್ನಡೆಯಾಗಿರುವ ಹಿನ್ನೆಲೆಯಲ್ಲಿ ಕಲಿಕಾ ಚೇತರಿಕಾ ತರಬೇತಿ ಮೂಲಕ ಕಲಿಕಾ ಸಾಮರ್ಥ್ಯಗಳನ್ನು ದಾಖಲಾದ ಎಲ್ಲಾ ವಿದ್ಯಾರ್ಥಿಗಳಲ್ಲಿ ಸಾಧಿಸಲು ಕ್ರಮವಹಿಸುವುದು. ಹಾಗಯೇ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯದಂತೆ ಸಕಾಲದಲ್ಲಿ ಎಲ್ಲಾ ಅನುಷ್ಠಾನ ಅಧಿಕಾರಿಗಳು ಶ್ರಮಿಸುವುದು ಎಂದರು.
ವರದಿ – ವಂದೆ ಮಾತರಂ ವೃಷಬೇಂದ್ರ ವಿ.ಜೆ