ಮುದಗಲ್ಲ:ತ್ರಿವಿಧ ದಾಸೋಹ ಮೂರ್ತಿ ಶ್ರೀ ಶರಣ ಬಸವೇಶ್ವರ 44 ನೇ ಪುರಾಣ ಹಾಗೂ ರಥೋತ್ಸವ..
ಮುದಗಲ್ಲ ಸಮೀಪದ ಜನತಾಪೂರ ನಲ್ಲಿ ತ್ರಿವಿಧ ದಾಸೋಹ ಮೂರ್ತಿ ಶ್ರೀ ಶರಣ ಬಸವೇಶ್ವರ 44 ನೇ ಪುರಾಣ ಹಾಗೂ ರಥೋತ್ಸವ ನಡೆಯಿತು. ದೇವಸ್ಥನದಲ್ಲಿ ಉಡಿ ತುಂಬುವ ಕಾರ್ಯಕ್ರಮ ಜರುಗುವದು. ರವಿವಾರ ಬೆಳಗ್ಗೆ 5 ಗಂಟೆಗೆ ರುದ್ರಾಭಿಷೇಕ ನಂತರ 7 ಗಂಟೆಗೆ ಕುಂಭಮೇಳ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಂತರ ಪೂಜ್ಯರ ಸಮ್ಮುಖದಲ್ಲಿ ಸಾಮೂಹಿಕ ವಿವಾಹ ಹಾಗೂ . ಮಹಾಪ್ರಸಾದ ಸಂಜೆ 04-50 ಗಂಟೆಗೆ ಗೋಧೂಳಿ ಸಮಯ ರಥೋತ್ಸವ ಜರುಗುವದು. ಸಂಜೆ 7 ಗಂಟೆಗೆ ಧರ್ಮಸಭೆ ಹಾಗೂ ವಂದನಾರ್ಪಣೆ ನಡೆಯಿತು.ಪ್ರವಚನ ಕಾಯ೯ಕ್ರಮ ನಡೆಯಿತುಗಾನಯೋಗಿ, ಪದ್ಮಭೂಷಣ ಪಂ.ಡಾ|| ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ಪುಟ್ಟರಾಜು ಹಿರೇಮಠ ಶ್ರೀ ಶರಣ ಸದನ ಚುಚ೯ಹಾಳ ಹಾಗೂ ಶಿವಕುಮಾರ ನೀಲೂರು ಹಾಗೂ ಶಿವಕುಮಾರ್ ಕಟ್ಟಿ ಸಂಗಾಮಿ ಯವರು ಸಮಿತಿ ಯು ವಿಷೇಶ ಪ್ರವಚನ ಕಾಯ೯ಕ್ರಮ ನಡೆಯಿತು. ಬೆಳಿಗ್ಗೆ ಪಲ್ಲಕ್ಕಿ ಉತ್ಸವ ಹಾಗೂ ಕುಂಬಾ ಮೆರವಣಿಗೆ ನಡೆಯಿತು ರಥೋತ್ಸವದ ಮುನ್ನ ವಿವಿಧ ವಿಶೇಷ ಪೂಜೆಗಳು ದೇವಸ್ಥಾನ ನದ ಮುಖ್ಯವಾದ ಪೂಜೆ ಸಲ್ಲಿಸಿ ನಡೆಸಿ ಪೂರ್ವ ಸಿದ್ಧತಾ ಕಾರ್ಯಕ್ರಮಗಳು ಜರುಗಿ ಅಂತಿಮ ಗೊಂಡಿದ್ದವು. ಅತ್ಯಾಕರ್ಷಕವಾಗಿರುವ ರಥದಲ್ಲಿ ಪ್ರತಿಷ್ಠಾಪಿಸಿ ಸಾಂಪ್ರದಾಯಿಕ ದೈವಿ ಕಾರ್ಯಗಳ ನಂತರ ಸಾಯಂಕಾಲ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಭಕ್ತರು ರಥದಲ್ಲಿ ಭಕ್ತರು ಹಣ್ಣು ಉತ್ತತ್ತಿ ಮತ್ತು ರಥಕ್ಕೆ ಕಾಯಿ ಕರ್ಪುರಗಳನ್ನು ಅರ್ಪಿಸಿ ತಮ್ಮ ಹರಕೆಗಳನ್ನು ತೀರಿಸಿಕೊಂಡರು ರಥೋತ್ಸವಕ್ಕಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿತ್ತು ಮುದಗಲ್ಲ ಪೋಲಿಸ್ ಠಾಣೆಯ ಪೋಲಿಸ್ ಸಿಬ್ಬಂದಿ ಸೂಕ್ತ ಬಂದೋಬಸ್ತು ನೀಡಿದ್ದರು. ಈ ಸಂದರ್ಭದಲ್ಲಿ ಶರಣ ಬಸವೇಶ್ವರ ದೇವಸ್ಥಾನ ದ ಸಮಿತಿ ಹಾಗೂ ಜನತಾಪೂರ ಹಾಗೂ ಮುದಗಲ್ಲ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ವರದಿ – ಸಂಪಾದಕೀಯ