2023ರ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸಂಪೂರ್ಣ ಬೆಂಬಲ; ಕೋಡಿಹಳ್ಳಿ ಚಂದ್ರಶೇಖರ್ ಘೋಷಣೆ…..
ಮೂರು ರಾಜಕೀಯ ಪಕ್ಷಗಳಿಗೆ ಪರ್ಯಾಯವಾಗಿ ಆಮ್ ಆದ್ಮಿ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು. ಕೇಂದ್ರ ಸರ್ಕಾರ ದೇಶದ ಜನರ ಬಾಯಿ ಮುಚ್ಚಿಸಿ ಕೃಷಿ ಕಾಯ್ದೆ ಜಾರಿಗೆ ತಂದಿತ್ತು. ವಿರೋಧದ ಕೇಳಿಬಂದ 13 ತಿಂಗಳ ಬಳಿಕ ವಾಪಸ್ ಪಡೆದುಕೊಂಡಿತು. ಆದರೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೃಷಿ ಕಾಯ್ದೆ ಜಾರಿಗೆ ತರಲು ಸುಗ್ರೀವಾಜ್ಞೆ ಮೂಲಕ ಪ್ರಯತ್ನ ಪಟ್ಟಿದ್ದರು. ಇವಾಗ ಬಸವರಾಜ ಬೊಮ್ಮಾಯಿ ಸರ್ಕಾರ ಕುಂಟು ನೆಪ ಹೇಳಿ ಕಾಯ್ದೆ ವಾಪಸ್ ಪಡೆಯುತ್ತಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು. 2023ರ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಘೋಷಣೆ ಬೆಂಗಳೂರು: 2023 ರ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಘೋಷಣೆ ಮಾಡಿದರು.
ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ರೈತ ಸಮಾವೇಶದಲ್ಲಿ ಅಧಿಕೃತವಾಗಿ ಕೋಡಿಹಳ್ಳಿ ಬೆಂಬಲ ಘೋಷಣೆ ಮಾಡಿದರು. ನಮ್ಮ ರಾಜಕೀಯ ಮುಖವಾಣಿ ಆಮ್ ಆದ್ಮಿ ಪಕ್ಷವಾಗಲಿದೆ. ನಮ್ಮ ಚುನಾವಣಾ ಅಸ್ತ್ರ ಪೊರಕೆಯಾಗಿದೆ. ರೈತ ಸಂಘ ಸ್ವತಂತ್ರವಾಗಿ ಇದ್ದು, ಆಮ್ ಆದ್ಮಿ ಸರ್ಕಾರ ಕರ್ನಾಟಕದಲ್ಲಿ ಸ್ಥಾಪನೆ ಮಾಡಲು 24/7 ರೈತ ಸಂಘದ ಕಾರ್ಯಕರ್ತರು ದುಡಿಯಬೇಕು ಎಂದು ಮನವಿ ಮಾಡಿದರು. ಮೂರು ರಾಜಕೀಯ ಪಕ್ಷಗಳಿಗೆ ಪರ್ಯಾಯವಾಗಿ ಆಮ್ ಆದ್ಮಿ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು. ಕೇಂದ್ರ ಸರ್ಕಾರ ದೇಶದ ಜನರ ಬಾಯಿ ಮುಚ್ಚಿಸಿ ಕೃಷಿ ಕಾಯ್ದೆ ಜಾರಿಗೆ ತಂದಿತ್ತು. ವಿರೋಧದ ಕೇಳಿಬಂದ 13 ತಿಂಗಳ ಬಳಿಕ ವಾಪಸ್ ಪಡೆದುಕೊಂಡಿತು. ಆದರೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೃಷಿ ಕಾಯ್ದೆ ಜಾರಿಗೆ ತರಲು ಸುಗ್ರೀವಾಜ್ಞೆ ಮೂಲಕ ಪ್ರಯತ್ನ ಪಟ್ಟಿದ್ದರು. ಇವಾಗ ಬಸವರಾಜ ಬೊಮ್ಮಾಯಿ ಸರ್ಕಾರ ಕುಂಟು ನೆಪ ಹೇಳಿ ಕಾಯ್ದೆ ವಾಪಸ್ ಪಡೆಯುತ್ತಿಲ್ಲ ಎಂದರು. ಇಂದು ಬಹಳ ವೇಗವಾಗಿ ಕೃಷಿ ಭೂಮಿ ರೈತರ ಕೈತಪ್ಪಿ ಹೋಗುತ್ತಿದೆ. ರೈತರನ್ನು ಕೃಷಿಯಿಂದ ಹೊರಗೆ ಕಳುಹಿಸುವ ಕೆಲಸ ಕಾಯ್ದೆಯ ಹಿಂದಿದೆ ಎಂದು ಆರೋಪಿಸಿದ ಕೋಡಿಹಳ್ಳಿ ಚಂದ್ರಶೇಖರ್, ರೈತರನ್ನು ಬದುಕಲು ಬಿಡಿ,ಇಲ್ಲದಿದ್ದರೆ ನೀವು ಏಕೆ ಅಧಿಕಾರದಲ್ಲಿ ಇರಬೇಕು? ಗುಂಡು ಹಾಕದೆ ಕೊಲ್ಲುತ್ತಿರುವ ಬಿಜೆಪಿ, ಅಂದು ಗುಂಡು ಹಾಕಿ ಕೊಂದ ಕಾಂಗ್ರೆಸ್ ಎರಡನ್ನೂ ತಿರಸ್ಕಾರ ಮಾಡಬೇಕು ಎಂದು ಕರೆಕೊಟ್ಟರು. ರೈತರನ್ನು ದರೋಡೆ ಮಾಡುವುದೇ ಸರ್ಕಾರದ ಉದ್ದೇಶವಾಗಿದೆ ಎಂದು ಆರೋಪಿಸಿದ ಅವರು, ರೈತರಿಗೆ ಕಿಮ್ಮತ್ತು ಕೊಡಲ್ಲ ಎಂದಾದರೆ ನಾವು ಏಕೆ ಸರ್ಕಾರಕ್ಕೆ ಕಿಮ್ಮತ್ತು ಕೊಡಬೇಕು? ರೈತರನ್ನು ಉಸಿರು ಕಟ್ಟಿಸಿ ಹಿಂದಡಿಯಿಂದ ನಿಂತು ಸಾವಿನಡೆಗೆ ತಳ್ಳುತ್ತಿದೆ. ಇದನ್ನು ಆತ್ಮಹತ್ಯೆ ಎಂದು ಹೇಳುತ್ತಿದೆ. ಆದರೆ ಸರ್ಕಾರ ರೈತರನ್ನು ಹತ್ಯೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.‘ಇಂತಹ ಕಾರಣಕ್ಕಾಗಿ ರೈತರ ಮಕ್ಕಳು ಟೆವೆಲ್ ಹೆಗಲ ಮೇಲೆ ಹಾಕಿ ವಿಧಾನಸೌಧದ ಪ್ರವೇಶ ಮಾಡಬೇಕು. 40 ವರ್ಷಗಳ ಬಳಿಕ ಈ ತೀರ್ಮಾನ ಕೈಗೊಳ್ಳುತ್ತಿದ್ದೇವೆ ಎಂದ ಕೋಡಿಹಳ್ಳಿ, ವ್ಯಭಿಚಾರ ಮುಚ್ಚಿಹಾಕಲು 17 ಜನ ಸ್ಟೇ ಪಡೆದುಕೊಂಡಿದ್ದಾರೆ, ಹೀಗಿರುವ ಬೊಮ್ಮಾಯಿ ಸರ್ಕಾರಕ್ಕೆ ಮುಂದುವರಿಯಲು ಏನು ನೈತಿಕತೆ ಇದೆ? ಎಂದು ಪ್ರಶ್ನಿಸಿದರು. ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ದೇಶದಲ್ಲಿ ಒಬ್ಬ ಅರವಿಂದ ಕೇಜ್ರಿವಾಲ್‌ಗೆ ಸಾಧ್ಯ ಆಗುವುದಾದರೆ ನಾವೇಕೆ ಯೋಚನೆ ಮಾಡಬಾರದು? ಎಂದ ಕೋಡಿಹಳ್ಳಿ, 40% ಪಡೆದುಕೊಳ್ಳುವವರು ದೇಶ ಹೇಗೆ ಕಟ್ಟಲು ಸಾಧ್ಯ? ನಿಮ್ಮ ಹಿಂದುತ್ವ ಭಾರತ್ ಮಾತಾಕೀ ಎಲ್ಲವೂ 40% ಗಾ? ಬಿಜೆಪಿ ಹಾಗೂ ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಸಾಧ್ಯವಾಗಿಲ್ಲ. ಇಂತಹ ಸಂದರ್ಭಗಳಲ್ಲಿ ಅರವಿಂದ್ ಕೇಜ್ರಿವಾಲ್ ದೇಶಕ್ಕೆ ಮಾಡೆಲ್ ಆಗಿದ್ದಾರೆ. ಅರವಿಂದ ಕೇಜ್ರಿವಾಲ್ ಸಿಎಂ ಆಗುವ ಮೊದಲು ದೆಹಲಿಯಲ್ಲೂ ಭ್ರಷ್ಟಾಚಾರ ನಡೆಯುತ್ತಿತ್ತು. ಆದರೆ ಇವತ್ತು ಭ್ರಷ್ಟಾಚಾರ ಇಲ್ಲದೆ ಅಧಿಕಾರ ಬದಲಾವಣೆ ಕೊಡಲು ಸಾಧ್ಯವಾಯಿತು. ಹಾಗಾದರೆ ಕರ್ನಾಟಕದಲ್ಲಿ ನಾವು ಏಕೆ ಮಾಡಬಾರದು? ಎಂದು ಪ್ರಶ್ನಿಸಿದರು.
ವರದಿ – ಸಂಪಾದಕೀಯ