ಕರುನಾಡು ಸಾಧಕರ ಪ್ರಶಸ್ತಿಗೆ ನಾಗರಾಜ ಮದಲಗುಂದಿ ಆಯ್ಕೆ,,,,,,

Spread the love

ಕರುನಾಡು ಸಾಧಕರ ಪ್ರಶಸ್ತಿಗೆ ನಾಗರಾಜ ಮದಲಗುಂದಿ ಆಯ್ಕೆ,,,,,,

ಕರುನಾಡ ಸಾಧಕರು ಪ್ರಶಸ್ತಿಗೆ ಆಯ್ಕೆಯಾದ ನಾಗರಾಜ ಮುದಲಗುಂದಿ, ಇವರು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮುದಲಗುಂದಿ ಗ್ರಾಮದ  ನಾಗರಾಜ ಮುದಲಗುಂದಿ ಇವರ ತಂದೆ,ದೊಡ್ಡಪ್ಪ ತಾಯಿ, ಹೊಳೆಯಮ್ಮನವರ 4ನೇ ಮಗನಾಗಿದ್ದು, ಇವರಿಗೆ ಹೈಬ್ರಿಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿ ಹಾಗೂ ಕಲಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ  ನೀಡುವ ಕರುನಾಡ ಸಾಧಕರು ಪ್ರಶಸ್ತಿಗೆ ಇವರನ್ನ ಆಯ್ಕೆ ಮಾಡಿರುವುದು ವಿಶೇಷವಾಗಿದ್ದು, ವೀರ ಸೈವ್ ಭವನ ಬೆಂಗಳೂರಿನಲ್ಲಿ ನಿನ್ನೆ ನಡೆದ ಈ ಕಾರ್ಯಕ್ರಮವು, ಕನ್ನಡ ಭಾಷೆ,ನೆಲ ,ಜಲ, ಕಲೆ ಹಾಗೂ ಕನ್ನಡ ಪರವಾದ ನಿಮ್ಮ ಸೇವೆ ಗಮನಿಸಿ, ಕರುನಾಡ ಸಾಧಕರು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ . ನಿಮ್ಮ ಸೇವೆ ಹುಲುಸಾಗಿ ಹಬೆಂಬುವುದೇ ನಮ್ಮ ಸಂಸ್ಥೆಯ ಆಶಯ, ನಾಗರಾಜ ಮುದಲಗುಂದಿಯವರ ಬಾಲ್ಯ ಜೀವನ ಮುದಲಗುಂದಿ ಗ್ರಾಮದ ಸ.ಹಿ.ಪ್ರಾ. ಶಾಲೆಯಲ್ಲಿ 01ನೇ ತರಗತಿಯಿಂದ 05ನೇ ತರಗತಿಯವರೆಗೂ ವಿದ್ಯಾಬ್ಯಾಸ ಮುಗಿಸಿ, ಮುದೇನೂರಿನ ಸ.ಪ್ರೌ.ಶಾಲೆಯಲ್ಲಿ ಪ್ರೌಡ ಶಿಕ್ಷಣ ಇಲಕಲನ ಮಾರ್ಗದರ್ಶನ ಇನಸ್ಟಟ್ಯೂಟ್ ಟೆಕ್ನಾಲಜಿಕಲ್  ಸಿವಿಲ್ ಓದಿದ್ದು, ಚಿಕ್ಕಂದಿನಿಂದಲೇ ಚಿತ್ರಗಳನ್ನು ಬಿಡಿಸುವ ಹವ್ಯಾಸ ರೂಡಿಸಿಕೊಂಡಿದ್ದು, ನಾನಾ ಕಲೆ :- ವಾಟರ್ ಪೇಂಟಿಂಗ್, ಆರ್ಕಲಿಕ್ ಪೇಂಟಿಂಗ್ , ಪೆನ್ಸಿಲ್, ವಾಲ್ ಪೇಂಟಿಂಗ್, ಗೋಡೆ ಬರಹ ಮತ್ತು ಮೊಬೈಲ್ ಪೊಟೋಗ್ರಾಫಿ, ಇದರ ಜೊತೆ ಜೊತೆಗೆ ಕಲಾ ಕುಂಚದಲ್ಲಿ :- ಸ್ವಾತಂತ್ರ್ಯ ಹೋರಾಟಗಾರರು, ಚಲನಚಿತ್ರ ನಟ,ನಟಿಯರ, ನಿಸರ್ಗ, ಸಾಧು ಸಂತರ, ಚಿತ್ರಗಳನ್ನು ಬಿಡಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರಶಸ್ತಿಗಳು :- 2017/18 ರಲ್ಲಿ ಶೇರ್ ಚಾಟ್ ಚಾಂಪಿಯನ್ 2021 ರಲ್ಲಿ ಹೆಮ್ಮೆಯ ಕನ್ನಡಿಗ, 2022 ರಲ್ಲಿ ನ್ಯಾಸನಲ್ ಐಕಾನಿಕ್ ಅವಾರ್ಡ, ಸದ್ಯ ಇದೇ  2022 ರಂದು ಕರುನಾಡ ಸಾಧಕರು ಪ್ರಶಸ್ತಿ, ಲಭಿಸಿರುವುದು ವಿಶೇಷವಾಗಿದೆ. ಊರಿನ ಗುರು ಹಿರಿಯರು, ಶಿಕ್ಷಕ ವೃಂದದವರು ಹಾಗೂ ಸ್ನೇಹಿತರು ಬಂಧು ಬಳಗದವರು ಶುಭ ಹಾರೈಸಿದ್ದಾರೆ. ಸಾಮಾಜಿಕ ಕಳಕಳಿಯ ವರದಿಯನ್ನು ನೀಡುತ್ತಾ ಸಮಾಜಕ್ಕೆ ತಮ್ಮದೇ ಆದ ಸೇವೆಯನ್ನು ನೀಡುತ್ತ ಸದಾ ಒಂದು ಹೆಜ್ಜೆ ಮುಂದಾಗಲಿ ಎಂದು ತಾವರಗೇರಾ ನ್ಯೂಸ್ ಪತ್ರಿಕಾ ಬಳಗ ಹಾಗೂ ತಾವರಗೇರಾ ವೆಬ್ ನ್ಯೂಸ್ ಬಳಗದವತಿಯಿಂದ ಶುಭ ಆರೈಸುತ್ತಿದ್ದೆವೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *