ಕನ್ನಡ ಸೇನೆ ತಾವರಗೇರಾ ಇವರ ವತಿಯಿಂದ ಪ.ಪಂ.ಯ ಮುಖ್ಯಾಧಿಕಾರಿಗಳಿಗೆ ಸಿ.ಸಿ. ಕ್ಯಾಮರಾ ದುರಸ್ಥಿಯನ್ನು ಸರಿಪಡಿಸಲು ಮನವಿ…
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿಯ ತಾವರಗೇರಾ ಪಟ್ಟಣವು ದಿನದಿಂದ ದಿನಕ್ಕೆ ಅಭಿವೃದ್ದಿದತ್ತ ಸಾಗುತ್ತಿರುವುದು ತಾವರಗೇರಾ ಪಟ್ಟಣದ ನಾಗರಿಕರಿಗೆ ಹೆಮ್ಮೆಯ ವಿಷೇಯ, ಇನ್ನೊಂದು ಕಡೆ ತಾವರಗೇರಾ ಪಟ್ಟಣಕ್ಕೆ ಕಾವಲು ಆದ ಸಿ.ಸಿ. ಕ್ಯಾಮರಗಳನ್ನೆ ದುರಸ್ಥಿಯಾಗಿ, ಜನರಲ್ಲಿ ಅಂತಕ ಸೃಷ್ಠಿಯಾಗುತ್ತಿದೆ. ಈ ಹಿಂದೆ ತಾವರಗೇರಾ ಪಟ್ಟಣದಲ್ಲಿ ಹಲವು ವರ್ಷಗಳ ಹಿಂದೆ ತಾವರಗೇರಾ ಪಟ್ಟಣದ ಮುಖ್ಯ ವೃತ್ತದಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಿದ್ದರು, ಆದರೆ ಕೆಲವೆ ತಿಂಗಳಗಳ ಹಿಂದೆಯೆ ಈ ಸಿ.ಸಿ. ಕ್ಯಾಮರಾಗಳು ದುರಸ್ಥಿಯಾಗಿ ಮೂಲೆ ಸೇರಿದವು, ಅಂದಿನಿಂದ ಇಲ್ಲಿಯವರೆಗೂ ಯಾವುದೇ ಬೆಳವಣಿಗೆಗಳು ಕಂಡು ಬಂದಿಲ್ಲ, ಇದಕ್ಕೆ ಕಾರಣ ಹಲವು ಅಕ್ರಮ ದಂಧೆ ಕ್ರೋರರಿಗೆ ಸಿ.ಸಿ.ಕ್ಯಾಮರೆಗಳು ಇಲ್ಲದಿರುವುದರಿಂದ ಕೆಲವೊಬ್ಬರಿಗೆ ಹಬ್ಬವಾಗಿ ಬಿಟ್ಟಿದೆ, ಹಲವು ವರ್ಷಗಳಿಂದ ದುರಸ್ತಿಯಾಗಿದ್ದ ಸಿ.ಸಿ. ಕ್ಯಾಮರಾಗಳನ್ನು ಕೂಡಲೆ ಹೊಸ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲು ಕನ್ನಡ ಸೇನೆ ವತಿಯಿಂದ ತಾವರಗೇರಾ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ತಾವರಗೇರಾ ಪಟ್ಟಣದಲ್ಲಿ ಸುಮಾರು ದಿನಗಳಿಂದ 10-15 ದ್ವಿ ಚಕ್ರ ವಾಹನಗಳು ಕಳವು ಆಗುತ್ತಿದ್ದು ಕಾರಣ ತಾವರಗೇರಾ ಮುಖ್ಯ ವೃತ್ತದಲ್ಲಿ ಇರುವ ಸಿ.ಸಿ. ಕ್ಯಾಮರಾ ಗಳು ದುರಸ್ತಿಯಾಗಿದ್ದು ಹಾಗೂ ಶ್ಯಾಮೀದಲಿ ವೃತ್ತದಲ್ಲಿ ಹೊಸ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಬೇಕು ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಹಾಗೂ ಕಳ್ಳತನವಾಗುವುದು ಕಡಿಮೆಯಾಗುತ್ತದೆ ತಾವರಗೇರಾ ಹೋಬಳಿಯಾದ ಕಾರಣ ಸುತ್ತ ಮುತ್ತಲ್ಲಿನ ಹಳ್ಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ತಾವರಗೇರಾ ಪಟ್ಟಣಕ್ಕೆ ದಿನ ನಿತ್ಯ ಬರುತ್ತಾರೆ, ಪ್ರತಿಯೊಂದ ಸಾಮಾನುಗಳನ್ನು ಖರೀದಿ ಮಾಡಲು ತಾವರಗೇರಾ ಪಟ್ಟಣವನ್ನು ಅವಲಂಬಿಸಿರುತ್ತಾರೆ, ಸಾಮಾನ್ಯ ಜನರು ತಾವರಗೇರಾ ಪಟ್ಟಣಕ್ಕೆ ಬರಲು ದ್ವಿ ಚಕ್ರ ವಾಹನನ್ನು ಬಳಸುತ್ತಾರೆ ಪಟ್ಟಣದ ಆಯಾಕಟ್ಟಿನ ಸ್ಥಳದಲ್ಲಿ ತಮ್ಮ ವಾಹನಗಳನ್ನು ಬಿಟ್ಟು ತಮ್ಮ ಅವಶ್ಯಕ ವಸ್ತುಗಳನ್ನು ಖರೀದಿಸಲು ಹೋಗಿರುತ್ತಾರೆ, ಆ ಸಮಯದಲ್ಲಿ ಬೈಕ್ ಕಳ್ಳತನವಾಗುತಿದ್ದು ಆದ ಕಾರಣ ತಾವುಗಳು ಆದಷ್ಟು ಬೇಗನೆ ಅಂದರೆ 2-3 ದಿನಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕಾಗಿ ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಂಡರು, ಕನ್ನಡ ಸೇನೆ ಕರ್ನಾಟಕ ತಾವರಗೇರಾ ಅಮರೇಶ್ ಕುಂಬಾರ ಜಿಲ್ಲಾ ಯುವ ಘಟಕ ಅಧ್ಯಕ್ಷರು, ಪ್ರದೀಪ ಐಲ್ಲಿ ಜಿಲ್ಲಾ ಯುವ ಘಟಕದ ಗೌರವ ಅಧ್ಯಕ್ಷರು, ತಾವರಗೇರಾ ಹೋಬಳಿ ಅಧ್ಯಕ್ಷರು ಕಲ್ಲಿಂ ಮುಜಾವರ್ ಜಿಲ್ಲಾ ಯುವ ಘಟಕ ಉಪಾಧ್ಯಕ್ಷರು, ಶಾಮೂರ್ತಿ ಅಂಚಿ, ಸೋಮೇಶೇಖರ್ ಉಪಾಧ್ಯಕ್ಷರು, ಕನ್ನಡ ಸೇನೆ ತಾವರಗೇರಾ ಪವನ್ ಕುಂಬಾರ, ಉಪಾಧ್ಯಕ್ಷರು ಕನ್ನಡ ಸೇನೆ ತಾವರಗೇರಾ ಮತ್ತು ಕಾರ್ ಚಾಲಕ ಸಂಘದ ಅಧ್ಯಕ್ಷರು ರವಿ ತಳಗೇರಿ, ಸುಮೇಶ ಹಾಲಿನ ಡೈರಿ ಮತ್ತು ಸಂಘದ ಸದಸ್ಯರು ಇತರರು ಪಾಲುಗೊಂಡಿದ್ದರು.
ವರದಿ – ಸಂಪಾದಕೀಯ