ಅಂಧ ಸಹೋದರರು ಬೆರಳು ಸ್ಪರ್ಶದಿಂದ 29 ಅಡಿ ರಥ ನಿರ್ಮಿಸಿ ತಂದೆಯ ಮಾತು ಪೋರೈಸಿ ಸೈ ಎನಿಸಿಕೊಂಡಿದ್ದಾರೆ.!!

Spread the love

ಅಂಧ ಸಹೋದರರು ಬೆರಳು ಸ್ಪರ್ಶದಿಂದ 29 ಅಡಿ ರಥ ನಿರ್ಮಿಸಿ ತಂದೆಯ ಮಾತು ಪೋರೈಸಿ ಸೈ ಎನಿಸಿಕೊಂಡಿದ್ದಾರೆ.!!

ಕುಷ್ಟಗಿ: ಅಪ್ಪನ ಅಕಾಲಿಕ ಸಾವಿನಿಂದಾಗಿ ಅಪ್ಪ ಒಪ್ಪಿಕೊಂಡಿದ್ದ ರಥ ನಿರ್ಮಾಣ ಅರ್ಧಕ್ಕೆ ನಿಂತಿರುವುದನು 29 ಅಡಿ ಎತ್ತರದ ರಥವನ್ನು ಕಣ್ಣು ಕಾಣದಿದ್ದರು ಕೇವಲ ಸ್ಪರ್ಶ ಜ್ಞಾನದಿಂದಲೆ ನಿರ್ಮಾಣಮಾಡಿ ತಂದೆಯ ಮಾತು ಪೋರೈಸಿ ಸೈ ಎನಿಸಿಕೊಂಡಿದ್ದಾರೆ. ಎರಡು ಕಣ್ಣು ಕಾಣದೆ ಅಂಧರಾಗಿರುವ ಶ್ರೀ ಮಹೇಶ ಮತ್ತು ಶ್ರೀ ಸುರೇಶ ಬಡಿಗೇರ,  ಇವರು ಅತ್ಯುನ್ನತ ರಾಜ್ಯ ಪ್ರಶಸ್ತಿ ವಿಜೇತರಾದ ಶ್ರೀ ಮಲ್ಲಪ್ಪ ಮಳೆಯಪ್ಪ ಬಡಿಗೇರ‌ರವರ ಸುಪುತ್ರರು. ತಂದೆಯ ಗರಡಿಯಲ್ಲಿ ಶ್ರೀಶೈಲ, ಯಡಿಯೂರ, ಬೆಲೂರು ಹೀಗೆ 35 ಕ್ಕೂ ಹೆಚ್ಚು ಸುಪ್ರಸಿದ್ಧ ಕ್ಷೇತ್ರಗಳಲ್ಲಿ ರಥ ತಯಾರಿಸುವಲ್ಲಿ ಅನುಭವ ಪಡೆದ ಈ ಇರ್ವ ರು  ಪ್ರಥಮವಾಗಿ ಕುಷ್ಠಗಿ ತಾಲ್ಲೂಕಿನ ಪಟ್ಟಲಚಿಂತಿಯಲ್ಲಿ ಸ್ವತ: ಇವರೆ ತಯಾರಿಸಿದ ರಥವು ಇದೇ ತಿಂಗಳು 16ರಂದು ಲೋಕಾರ್ಪಣೆಯಾಗಿದೆ ಸಂಪೂರ್ಣವಾಗಿ ಎರಡು ಕಣ್ಣು ಕಾಣದಿರುವ ಇವರು ಯಾವುದೇ ತಂತ್ರೋಪಕರಣವಿಲ್ಲದೆ ಕೇವಲ ಬೆರಳು ಸ್ಪರ್ಶದಿಂದ ಅದ್ಭುತ ಮೂರ್ತಿಗಳನ್ನು ತೆಗೆದಿದ್ದಾರೆ. ಇಂದು ಅವರು ಮಾಡಿರುವ ರಥವನ್ನು ಪ್ರತ್ಯಕ್ಷ ಕಂಡು ಒಂದು ಕ್ಷಣ ದಿಗಭ್ರಮೆಗೊಂಡವರು ಹಲವರು, ಎಲ್ಲಾ ಆರೋಗ್ಯವಂತ ಇರುವ ಕೆಲ ಯುವಜನರು  ಕೆಲಸವಿಲ್ಲವೆಂದು ಸೊಂಬೇರಿಗಳಾಗಿ ತೀರಗುವ ಜನರ ಮಧ್ಯ ಇಂತಹ ಅಪರೂಪದ ಮಾಣಿಕ್ಯ ಇರುವುದು ಬಹಳ ವಿರಳ.‌ ಕಣ್ಣು ಕಾಣದ ಇವರು ತಂದೆ ಕಲಿಸಿಕೊಟ್ಟ ವಿದ್ಯವನ್ನು ಛಲ ಬಿಡದೇ ಸದುಪಯೋಗ ಮಾಡಿಕೊಂಡು  ದೊಡ್ಡ ಸಂಸಾರದ ಬಂಡಿಯನ್ನು ಸಾಗಿಸುತ್ತಿರುವ ಇವರಿಗೆ ಎಷ್ಟು ಶೆಲ್ಯೂಟ್ ಹೊಡೆದರು ಕಡಿಮಿಯೆ ಇವರೆ ನಿಜವಾದ ವಿಶ್ವಕರ್ಮರು.  ದಯಮಾಡಿ ಇವರ ಕೌಶಲ್ಯಕ್ಕೆ ನೀವು ಗೌರವ ಕೊಡುವುದಾರೆ ನಿಮ್ಮ ಸುತ್ತ-ಮುತ್ತಲಿನ ಗ್ರಾಮದಲ್ಲಿ ರಥ ಮಾಡಿಸುದಿದ್ದರೆ ಇವರಿಗೆ ಅವಕಾಶ ಕೊಡಿಸಿ. ಸುರೇಶ ಬಡಿಗೇರ ಮೊ.ನಂ (81479 01809) ಮಹೇಶ ಬಡಿಗೆರ (96113 74828

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *