ಇಂಡಿಯನ್ ಎಂಪಾಯರ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಯುನಿವರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್ ನವರು ನನಗೆ ಗೌರವ ಡಾಕ್ಟರೇಟ್ ನೀಡಿದ್ದಾರೆ.
ಸಿದ್ದಾಪುರ ತಾಲೂಕಿನ ಮುಗದೂರಿನ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮದ ಮುಖ್ಯಸ್ಥನಾಗಿರುವ ನನ್ನ ಮಾನವೀಯ ಕಾರ್ಯಗಳು ಮತ್ತು ಸಮಾಜ ಸೇವೆಯನ್ನು ಗುರುತಿಸಿ ಇಂಡಿಯನ್ ಎಂಪಾಯರ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಯುನಿವರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್ ನವರು ಹ್ಯೂಮೆನಿಟಿ & ಸೋಶಿಯಲ್ ಸರ್ವಿಸ್ (Humanity and Social Service) ವಿಭಾಗದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ ಎಂದು ತಿಳಿಸಲು ಸಂತೋಷ ವಾಗುತ್ತಿದೆ. ಹೋಟೆಲಿನಲ್ಲಿ ಕೆಲಸ ಮಾಡುತ್ತ ಎನಾದರು ಸಾದಿಸಬೇಕೆನ್ನುವ, ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಲೆ ಮತ್ತೇನೊ ಗೂರಿಯ ಕನಸು ಕಾಣುವ, ಕಿಸೆಯಲ್ಲಿ ಹಣವಿಲ್ಲದಿದ್ದರು ಸಮಾಜಕ್ಕೆ ಎನಾದರೂ ಸೇವೆ ಮಾಡಲೇ ಬೇಕೆಂದು ಫಣತೊಡುವ, ಪತ್ರಿಕೋಧ್ಯಮದಲ್ಲಿ ಸಂಬಳ ಸಿಗದಿದ್ದರು ಅನ್ಯಾಯ ಅಕ್ರಮಗಳ ವಿರುದ್ಧದ ಧ್ವನಿಯಾಗುವ, ಸೋಲುಗಳ ಮದ್ಯದಲ್ಲಿ ಹೊಸ ಗೆಲುವಿನತ್ತ ಮುನ್ನುಗ್ಗುವ, ಎಲ್ಲಾ ಪರಿಸ್ಥಿತಿಗಳು ನಮಗೆದುರಾಗಿ ಇದ್ದರು ಛಲಬಿಡದೆ ಎದುರಿಸಿ ನಿಂತಿರುವ, ಸಾವಿನ ಹತ್ತಿರ ಹೋಗಿ ಬದುಕಿ ತೊರಿಸುವ, ಯಾರೇ ಅವಮಾನಿಸಿ, ನಿಂದಿಸಿ, ಅಪಪ್ರಚಾರಮಾಡಿ ಹಿಂಸಿಸಿದರು ತನ್ನ ಒಳ್ಳೆಯತನವನ್ನು ಬಿಡದ ದೇಶಪ್ರೇಮಿ ಎಲ್ಲಾ ನನ್ನ ಸ್ನೇಹಿತರಿಗೆ ಈ ಗೌರವ ಅರ್ಪಣೆ. ಗೊತ್ತು ಗುರಿ ಇಲ್ಲದ, ದಿಕ್ಕಿಲ್ಲದ, ಅನಾಥನಾಗಿದ್ದ ನನಗೆ ಇಲ್ಲಿಯವರೆಗೆ ಸಾಮಾಜಿಕ ಸೇವೆಗಳಲ್ಲಿ ಹಾಗೂ ನನ್ನ ಎಲ್ಲಾ ಕಾರ್ಯಗಳಲ್ಲಿ ಸಹಕರಿಸಿದ, ಪ್ರೋತ್ಸಾಹಿಸಿದ, ಮಾರ್ಗದರ್ಶನ ನೀಡಿದ, ಧೈರ್ಯ ತುಂಬಿದ ತಮ್ಮೆಲ್ಲರಿಗೂ ಹ್ರದಯಂತರಾಳದ ಧನ್ಯವಾದಗಳು. ಮುಂದೆ ಕೂಡ ನಿಮ್ಮೆಲ್ಲರ ಸಹಕಾರ ಬಯಸುತ್ತಾ ಈ ಮೂಲಕ ವಂದನೆಗಳನ್ನು ಸಲ್ಲಿಸುತ್ತೇನೆ. ಡಾ.ನಾಗರಾಜ ನಾಯ್ಕ ಮೊ. 9481389187, 8073197439
ವರದಿ – ಸಂಪಾದಕೀಯ