ಗುಡದನಾಳ:ಉಚಿತ ಸಮೋಹಿಕ ವಿವಾಹ ಅದ್ದೂರಿಯಾಗಿ ಜರುಗಿತು,,,,,,,

Spread the love

ಗುಡದನಾಳ:ಉಚಿತ ಸಮೋಹಿಕ ವಿವಾಹ ಅದ್ದೂರಿಯಾಗಿ ಜರುಗಿತು,,,,,,,

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನಲ್ಲಿ ನಡೆದ :ಮಠ ಮಾನ್ಯಗಳಿಗೆ ಮಾಡುವ ಸಹಕಾರ ಮಾನವ ಕುಲಕ್ಕೆ ಮಾಡದಂತಹ ಮಹಾಪುಣ್ಯ ಬರುತ್ತದೆ ಎಂದು ಮಾಜಿ ಶಾಸಕರು ಹಾಗೂ ಹಟ್ಟಿ ಚಿನ್ನದ ಗಣಿ ಕಂಪನೀಯ ಅಧ್ಯಕ್ಷರಾದ ಮಾನಪ್ಪ ವಜ್ಜಲ್ ಹೇಳಿದರುಅವರು ತಾಲೂಕಿನ ಗುಡದನಾಳ ಗ್ರಾಮದಲ್ಲಿ ಸದ್ಗುರು ರೇವಣಸಿದ್ದ ಶರಣರ ೪೨ನೇ ಜಾತ್ರಾ ಮಹೋತ್ಸವ ಹಾಗೂ ೫೦ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ವಧು ವರರಿಗೆ ಶುಭಕೋರಿ ಮಾತನಾಡುತ್ತಾ ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎನ್ನುವಂತೆ ತನ್ನ ಶ್ರಮದ ಫಲದಲ್ಲಿ ದಾನ ಮಾಡಬೇಕು ವ್ಮಠ ಮಾನ್ಯಗಳಿಗೆ ಮಾಡುವ ದಾನ ಅದು ಮಾನವರಿಗೆ ಮಾಡಿದಂತಾಗುತ್ತದೆ ಸಾಮೂಹಿಕ ವಿವಾಹ ಮಾಡುವುದರಿಂದ ಹಲವಾರು ಬಡಕುಟುಂಬಗಳಿಗೆ ಹೆಚ್ಚಿನ ನೆರವು ನೀಡಿದಂತಾಗುತ್ತದೆ ಅದರಲ್ಲೂ ೫೦ ಸಾಮೂಹಿಕ ವಿವಾಹಗಳು ಜರುಗಿದ್ದು ಶ್ಲಾಘನೀಯವಾಗಿದೆ ಎಂದರು ಸದ್ಗುರು ರೇವಣಸಿದ್ದ ಶಿವಶರಣರ ೪೨ನೇ ಜಾತಾ ಮಹೋತ್ಸವದ ನಿಮಿತ್ಯವಾಗಿ ಸಾಮೂಹಿಕ ವಿವಾಹಗಳು, ತುಲಾಭಾರ, ಕೈಲಾಸ ಮಂಟಪಪೂಜೆ ಹಾಗೂ ರಥೋತ್ಸವ ಕಾರ್ಯಕ್ರಮಗಳು ವಿಜೃಂಭಣೆಯಿಚಿದ ಜರುಗಿದವು ಈ ಸಂದರ್ಭದಲ್ಲಿ ಭಗಿರಥ ಸಮಾಜದ ತಾಲೂಕಾಧ್ಯಕ್ಷರಾದ ಎಸ್,ಎಚ್,ಅಮ್ಮಾಪುರ, ಎನ್,ಸ್ವಾಮಿ ಹಟ್ಟಿ, ಲಿಂಗಣ್ಣ ದೇವಿಕೇರಿ, ಶರಣಬಸವ ಉಪ್ಪಲದಿನ್ನಿ, ಶರಣಬಸವ, ವೆಂಕನಗೌಡ,ಗುಂಡಪ್ಪ, ಹನಂತ ಅಮರೇಶ ವೆಂಕೋಬಪವಾಡೆ, ರಮೇಶ ಉಳಿಮಹೇಶ್ವರ, ಶಿವರಾಜ ಸೇರಿದಂತೆ ಇದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *