ಕರೋನದ ಎರಡನೇಯ ಅಲೇಯ ವಿರುದ್ದ ದಿಟ್ಟ ನಿರ್ಧಾರ ತಗೆದುಕೊಂಡ ರಾಯಚೂರು ಜಿಲ್ಲಾಡಳಿತ..
ಕರೋನದ ಎರಡನೇ ಅಲೇಗೆ ಜನರು ತ್ತತ್ತರಿಸುತ್ತಿರುವುದನ್ನು ಕರ್ನಾಟಕ ಸರ್ಕಾವು ಹಲವು ರೀತಿಯಲ್ಲಿ ಜನರ ಮೇಲೆ ಕ್ರಮ ತೆಗೆದುಕೊಂಡರು ಜನರು ಎಚ್ಚೆತ್ತುಕೊಳ್ಳದೆ ಅನಾವಶ್ಯಕವಾಗಿ ವಾಹನದ ಮೂಲಕ ಬಿದಿಗೆ ಇಳಿಯುವ ಪುಂಡ ಪೋಕರಿ ಯುವಕರಿಗೆ ಈಗಾಗಲೇ ಪೊಲೀಸ್ ಇಲಾಖೆಯು ನಾನಾ ರೀತಿಯಲ್ಲಿ ಕ್ರಮ ತೆಗೆದುಕೊಂಡಿದ್ದರೂ ಜನರು ಎಚ್ಚರ ವಹಿಉತ್ತಿಲ್ಲ. ಿದರ ನಿಮೀತ್ಯವಾಗಿ ರಾಯಚೂರು ಜಿಲ್ಲೆಯ ಕವೀತಾಳ ಪಟ್ಟಣದ ಸಂಬಂದಪಟ್ಟ ಅಧಿಕಾರಿಗಳು ದಿಟ್ಟ ನಿರ್ಧಾರ ತೆಗೆದುಕೊಂದು ಇಂದು ಸಾರ್ವಜನೀಕರು ಆಸ್ಪತ್ರೆ, ಔಷಧ, ಪೆಟ್ರೋಲ್ ಹೊರತು ಪಡಿಸಿ ಇಂದಿನಿಂದ ಬೆಳಿಗ್ಗೆ 10ರ ನಂತರ ಇತರೆ ಅನಾವಶ್ಯಕವಾಗಿ ಬಿದಿಗೆ ಇಳಿದರೆ ಜನರಿಗೆ ಕಾದಿದೆ ಶಾಕ್. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ, ಜಿಲ್ಲೆಯಲ್ಲಿ ಈಗಾಗಲೇ ಜನತಾ ಕಫ್ರ್ಯೂ ಜಾರಿಯಲ್ಲಿದೆ. ಆದರೂ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳು ಸೇರಿದಂತೆ ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ತರುವ ಕುರಿತು ಗಹನವಾದ ಚರ್ಚೆ ನಡೆಯುತ್ತಿದೆ. ಆ ರೀತಿ ಆದ ಪಕ್ಷದಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಸಾರ್ವಜನಿಕರಿಗೆ ಒಂದು ದಿನದ ಕಾಲಾವಕಾಶ ನೀಡಲಾಗುವುದು. ಅದಕ್ಕೂ ಮುಖ್ಯವಾಗಿ ಇಂದಿನಿಂದ ಮೇ.6ರ ಗುರುವಾರ ದಿಂದ ಆಸ್ಪತ್ರೆಗಳು, ಔಷಧಿ, ಪೆಟ್ರೋಲ್ ಹೊರತು ಪಡಿಸಿದಂತೆ ಇತರೆ ಅಗತ್ಯ ಸೇವೆಗಳಿಗೆ ಬೆಳಿಗ್ಗೆ 10ರ ನಂತರ ಯಾವುದೇ ರೀತಿಯ ಅವಕಾಶವಿರುವುದಿಲ್ಲ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ. ವರದಿ – ಆನಂದ ಸಿಂಗ್ ಕವಿತಾಳ