ಕೂಡ್ಲಿಗಿ ತಾಲೂಕು ಆಲೂರು ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ ಕೃಷ್ಣಪ್ಪ) ವತಿಯಿಂದ ಡಾ ಬಿ ಆರ್ ಅಂಬೇಡ್ಕರ್ ಅವರ 131ನೇ ಜಯಂತಿಯನ್ನು ಆಚರಿಸಲಾಯಿತು.

Spread the love

ಕೂಡ್ಲಿಗಿ ತಾಲೂಕು ಆಲೂರು ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ ಕೃಷ್ಣಪ್ಪ) ವತಿಯಿಂದ ಡಾ ಬಿ ಆರ್ ಅಂಬೇಡ್ಕರ್ ಅವರ 131ನೇ ಜಯಂತಿಯನ್ನು ಆಚರಿಸಲಾಯಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ್ ಭಾವಚಿತ್ರವನ್ನು ವಾದ್ಯ ಮೇಳಗಳಿಂದ ವಿಜೃಂಭಣೆಯಿಂದ ಜಯಘೋಷ ಹಾಕುತ್ತಾ ಮೆರವಣಿಗೆ ಮೂಲಕ ವೇದಿಕೆ ಹತ್ತಿರ ತರಲಾಯಿತು. ನಂತರ ವೇದಿಕೆ  ಕಾರ್ಯಕ್ರಮವನ್ನು ಮಾಡಲಾಯಿತು ಕಾರ್ಯಕ್ರಮದ ಅಧ್ಯಕ್ಷತೆ, ದಲಿತ ಮುಖಂಡ ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ತಾಲ್ಲೂಕು ಗೌರವ ಅಧ್ಯಕ್ಷರಾದ ಡಿಎಂ ಈಶ್ವರಪ್ಪ ಸಿದ್ದಾಪುರ ವಹಿಸಿಕೊಂಡಿದ್ದರು. ಕಾರ್ಯಕ್ರಮದ ಪ್ರಾಸ್ತಾವಿಕ..ಡಿ ಮಹಾಂತೇಶ್ ಶಿಕ್ಷಕರು ಮಾತನಾಡಿ ಕಾನೂನು ಸುವ್ಯವಸ್ಥೆ ಅಸ್ಪೃಶ್ಯತಾ ನಿವಾರಣೆ. ಮೂಲಭೂತ ಕರ್ತವ್ಯ, ಸಮಾನತೆ ಶಿಕ್ಷಣ ಕ್ಷೇತ್ರದಲ್ಲಿ. ಇನ್ನೂ ಹಲವಾರು ಕ್ಷೇತ್ರಗಳಲ್ಲಿ  ಅವರು ನೀಡಿದ ಕೊಡುಗೆಗಳ ಬಗ್ಗೆ ಸವಿಸ್ತಾರವಾಗಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಮಾತನಾಡಿದರು. ವಿಶೇಷ ಭಾಷಣಕಾರರಾಗಿ ಆಗಮಿಸಿದ ಪ್ರಾಂಶುಪಾಲರಾದ ಶ್ರೀ ನಾಗಲಿಂಗಪ್ಪ ನವರು ಅಂಬೇಡ್ಕರ್ ಅವರು ನಡೆದು ಬಂದದಾರಿ ಅವರ ಜೀವನ ಕುರಿತು. ಸಂವಿಧಾನ ರಚನೆಗಾಗಿ ಅವರು ಪಟ್ಟ ಶ್ರಮ. ಶಿಕ್ಷಣ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆ ಇನ್ನೂ ಅನೇಕ ವಿಚಾರವಾಗಿ ಸಂವಿಧಾನದ ಬಗ್ಗೆ. ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಪಕ್ಷದ ಸದಸ್ಯರಾದ ಲೋಕೇಶವಿ,ನಾಯಕ ರವರು ಅಂಬೇಡ್ಕರ್ ಜಯಂತಿ ಕುರಿತು ಮಾತನಾಡಿದ ಅವರು ಮಕ್ಕಳಿಗೆ ಶಿಕ್ಷಣದಿಂದ ವಂಚಿತರಾಗಿಸಬೇಡಿ ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಶಿಕ್ಷಣವನ್ನು ನೀಡಿ. ಕೂಲಿ ಕೆಲಸಕ್ಕೆ ಕಳಿಸಬೇಡಿ ಶಿಕ್ಷಣ ದಿಂದ  ವಂಚಿತರನ್ನಾಗಿ ಮಾಡಬೇಡಿ, ಪ್ರತಿಯೊಬ್ಬರೂ  ಶಿಕ್ಷಣಕ್ಕೆ ಮಹತ್ವನೀಡಿ ಎಂದು ಮಾತನಾಡಿದರು. ನಂತರ ಮತ್ತೊಬ್ಬ ಮುಖ್ಯ ಅತಿಥಿ ಡಿಒ ಮುರಾರ್ಜಿ ಕಲಾವಿದರು ಹಾಗೂ ಸಾಹಿತಿ ಕಲಾವಿದರ ಮಾಸಾಶನ ಮುಂಜುರಾತಿ  ಸಮಿತಿ ಸದಸ್ಯರಾದ ಇವರು ಸಂವಿಧಾನ ಶಿಲ್ಪಿ. ಕರಡು ಸಮಿತಿ ಅಧ್ಯಕ್ಷ. ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಜೀವನಾಧಾರಿತ ಕುರಿತು ಕೆಲವು ವಿಚಾರಗಳನ್ನು ಈ ಸಂದರ್ಭದಲ್ಲಿ ಮಾತನಾಡಿದರು.  ತಾಲೂಕು ಡಿಎಸ್ಎಸ್ ಸಂಘಟನಾ ಸಂಚಾಲಕ ಬಡಲಡಕು ದುರುಗೇಶ ಮಾತನಾಡಿ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಮಾನ ಸ್ಥಾನಮಾನ ಕಲ್ಪಿಸಿಕೊಟ್ಟವರು ಡಾ. ಬಿಆರ್ ಅಂಬೇಡ್ಕರ್ ರವರು. ಸಂವಿಧಾನವನ್ನು ರಚಿಸುವ ಮೂಲಕ ಕೋಟ್ಯಾಂತರ ಜನರ ಹಣೆಬರಹವನ್ನೇ ಅವರು ಬದಲಾಯಿಸಿದ್ದಾರೆ. ದೀನದಲಿತರ ಶೋಷಿತ ಸಮುದಾಯಕ್ಕೆ ಅಷ್ಟೇ ಅಲ್ಲದೆ  ಪ್ರತಿಯೊಂದು ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸಹ ಸಂವಿಧಾನದ ಚೌಕಟ್ಟಿನಲ್ಲಿ ಸಮಾನತೆಯನ್ನು ನೀಡಿದ ಮಹಾಪುರುಷ ರವರು. ಅವರ ತತ್ವ ಸಿದ್ಧಾಂತ ಹಾಗೂ ಸಂವಿಧಾನದ ಆಶಯದಂತೆ ಪ್ರತಿಯೊಬ್ಬರೂ ನಡೆಯ ಬೇಕಾಗಿದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದರು. ಕಾರ್ಯಕ್ರಮದ  ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆ ಸಂಚಾಲಕರು ಹಾಗೂ ತಾಲೂಕು ಕರ್ನಾಟಕ ಪತ್ರಕರ್ತರ ಸಂಘದ ಗೌರವಾಧ್ಯಕ್ಷರಾದ ಡಿ.ಎಂ ಈಶ್ವರಪ್ಪನವರು ಮಾತನಾಡಿ. ಸವಿಂದಾನ ನಮ್ಮ ಜನ್ಮ ಸಿದ್ಧ ಹಕ್ಕು. ಸವಿಂದಾನದ ಕಾನೂನು ಅಡಿಯಲ್ಲಿ ನಾವು ನಡೆಯೋಣ. ಸಂಘರ್ಷ ಸಮಿತಿ ಎಂದರೆ ಕೇವಲ ಒಂದೇ  ಜಾತಿಗೆ ಸೀಮಿತವಲ್ಲ ಪ್ರತಿಯೊಂದು ಜಾತಿಯಲ್ಲಿ ದಲಿತರಿದ್ದಾರೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಶೋಷಣೆಗೆ ಒಳಪಟ್ಟಿರುವ ರೆಲ್ಲರೂ  ಕಲಿತರು. ಡಾ ಬಿಆರ್ ಅಂಬೇಡ್ಕರ್ ಅವರು ಪ್ರತಿಯೊಬ್ಬ ಪ್ರಜೆಗೂ ಯಾವುದೇ ಜಾತಿ ಇಲ್ಲದೆ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ತಂದುಕೊಟ್ಟಂತಹಮಹಾನ್ ವ್ಯಕ್ತಿ ಇವರು. ಸಾಮಾಜಿಕ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಮಾನತೆಯನ್ನು ತಂದುಕೊಟ್ಟವರು ಪ್ರತಿಯೊಬ್ಬರು ಸಂವಿಧಾನವನ್ನು ರಕ್ಷಿಸೋಣ ಸಂವಿಧಾನವನ್ನು ಉಳಿಸುವಣ ಸಂವಿಧಾನದ ನಿಯಮವನ್ನು ಪಾಲಿಸುವಂತೆ ಈ ಸಂದರ್ಭದಲ್ಲಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಆಲೂರ್ ನಟರಾಜ್ ಸ್ವಾಗತಿಸಿದರು. ಕೆ.ಎಂ ಹಳ್ಳಿ ಸುರೇಶ್ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಆಲೂರು ಗ್ರಾಮದ ಪಿಎಚ್ ಡಿ ಪದವಿ ಪಡೆದು ಪ್ರಶಸ್ತಿ ಪಡೆದ  ಪಕೀರಪ್ಪ ನವರಿಗೆ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ, ತಾಲೂಕ್  ಸಂಘ ಟನ ಸಂಚಾಲಕರಾದ  ಕೂಡ್ಲಿಗಿ. ಮಹೇಶ್. ಮೂಗಪ್ಪ. ಕಾನಮಡುಗು ದುರುಗೇಶ. ಫಕೀರಪ್ಪ ಕಾನಾಮಡುಗು. ಓಬಳೇಶ ಕೆಂಚಮಲ್ಲನಹಳ್ಳಿ. ಆಲೂರು ಮಲ್ಲಿಕಾರ್ಜುನ. ನಟರಾಜ್. ಸುರೇಶ್ ಕೆ ಎಂ ಹಳ್ಳಿ. ಶ್ರೀ ಸುರೇಶ್ ಪ್ರಯತ್ನ ಪೌಂಡೇಶನ್ ಹುಲಿಕೆರೆ. ಶ್ರೀ ವೆಂಕಟೇಶ್ ಗ್ರಾ.ಪಂ.ಮಾಜಿ ಉಪಾಧ್ಯಕ್ಷರು ಅಂಬಳ್ಳಿ ವಡ್ಡರಹಟ್ಟಿ. ಶ್ರೀ ಜಿ ಆರ್ ಬಾಲಣ್ಣ. ಮಾಜಿ ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಬಿ ಜೆ ಪಿ ಮುಖಂಡ ಮಲ್ಲಿಕಾರ್ಜುನ, ಆರ್ ಲೋಕೇಶ್, ಬಿಟಿಬುದ್ಧಿ ಚಂದ್ರಪ್ಪ. ಹೂಡೇಮ್ ಮಂಜುನಾಥ, ತಿಪ್ಪೆಹಳ್ಳಿ ಮಾರೇಶ್, ಸೇರಿದಂತೆ ಆಲೂರು ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಎಲ್ಲಾ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಸದಸ್ಯರು. ಗ್ರಾಮಗಳ ಮುಖಂಡರು. ಜನಪ್ರತಿನಿಧಿಗಳು. ಸಂಘ  ಸಂಸ್ಥೆಗಳ ಪದಾಧಿಕಾರಿಗಳು. ಮಹಿಳೆಯರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರು. ಸರ್ವ ಸದಸ್ಯರು. ಸಾರ್ವಜನಿಕರು  ಉಪಸ್ಥಿತರಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *