*‘ವಿಜಯ ಪತಾಕೆ,ಚಲನಚಿತ್ರದ ಮುಹೂರ್ತ ಸಮಾರಂಭ,
ಸಿದ್ಧನಕೊಳ್ಳ: ಬೊಮ್ಮಸಾಗರ ದುರ್ಗಾದೇವಿ ಪ್ರೊಡಕ್ಷನ್‌ರವರು ನಿರ್ಮಿಸುತ್ತಿರುವ ‘ವಿಜಯ ಪತಾಕೆ’ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ಬಾಗಲಕೋಟ ಜಿಲ್ಲೆಯ ಇಲಕಲ್ ತಾಲೂಕಿನ ಸಿದ್ಧನಕೊಳ್ಳದ ಕಲಾಪೋಷಕರ ಮಠ ಸಿದ್ದೇಶ್ವರ ಮಠದಲ್ಲಿ ಜರುಗಿತು. ಡಾ. ಶಿವಕುಮಾರ ಮಹಾಸ್ವಾಮಿಗಳು ತಮ್ಮ ಅಮೃತ ಹಸ್ತದಿಂದ ಕ್ಯಾಮೆರಾದ ಗುಂಡಿ ಒತ್ತುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿ ಚಿತ್ರತಂಡಕ್ಕೆ ಶುಭ ಕೋರಿದರು. ಬಸಯ್ಯ ಹಿರೇಮಠ ಕ್ಲಾಪ್ ಮಾಡುವ ಮೂಲಕ ಮೊದಲ ದೃಶ್ಯಕ್ಕೆ ಚಾಲನೆ ಕೊಟ್ಟರು.ಈ ಸಂದರ್ಭದಲ್ಲಿ ಲಡ್ಡುಮುತ್ಯಾ ಖ್ಯಾತಿಯ ನಟ ಉಮೇಶ ಪುರಾಣಿಕ, ಚಿತ್ರದ ನಟ, ನಿರ್ಮಾಪಕ, ನಿರ್ದೇಶಕ ಆರ್.ಶೈನ್ , ನಾಯಕಿ ನಟಿ ಪೂಜಾ ಕೊಟ್ಟೂರ, ಸುರೇಶ ಕರ್ಜಗಿ,ನಾಗರಾಜ ಬೀದರ,ಹರೀಶ ಪತ್ತಾರ, ಸಂಗನಗೌಡ ಕುರುಡಗಿ,ಆರ್. ರವಿವರ್ಮ, ಕಿರಣ ಭೂತಾನವರ,ಡಾ.ಪ್ರಭು ಗಂಜಿಹಾಳ,ರಾಜಕುಮಾರ ಪಾಟೀಲ , ರಂಗಸ್ವಾಮಿ ಜಿ,ಗಾಯತ್ರಿ ಹವಳೆ, ಕಲಾವಿದರು, ತಂತ್ರಜ್ಞರು ಹಾಜರಿದ್ದರು. ಗ್ರಾಮೀಣ ಕಥಾ ಸಾರದ ಹಿನ್ನಲೆ ಹೊಂದಿರುವ ಈ ಚಿತ್ರದ ಕಥೆ ವಿಭಿನ್ನವಾಗಿದ್ದು ಪ್ರೇಕ್ಷಕರು ಚಿತ್ರಮಂದಿರದಲ್ಲೇ ನೋಡಿ ಹರಸಲಿ. ಕುಟುಂಬದ ಎಲ್ಲರೂ ಕುಳಿತು ನೋಡಬಹುದಾದ ಚಿತ್ರ ಇದಾಗಿದೆ ಎಂದು ನಿರ್ದೇಶಕ ಆರ್.ಶೈನ್ ಹೇಳಿದರು. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದ ಕಲಾವಿದರು, ತಂತ್ರಜ್ಞರೇ ಇದ್ದಾರೆ, ಗಜೇಂದ್ರಗಡ, ಬಾದಾಮಿ,ಸಿದ್ ನಕೊಳ್ಳ, ಕೊಪ್ಪಳ ಸುತ್ತಮುತ್ತ ಹಾಗೂ ಮಲೆನಾಡು ಭಾಗದಲ್ಲಿ ಚಿತ್ರೀಕರಣವಾಗಲಿದೆ. ಛಾಯಾಗ್ರಹಣ ರಂಗಸ್ವಾಮಿ ಜಿ, ವರ್ಣಾಲಂಕಾರ ದೇವರಾಜ್, ಸಾಹಸ ಗಣೇಶ ಬಿ, ಸಾಹಿತ್ಯ ಸುಭಾಷ ಬೆಟಗೇರಿ, ಸಂಗೀತ ರಾಘವ ಸುಭಾಸ, ಸಂಕಲನ ಸಿದ್ದಾರ್ಥ ಜಾಲಿಹಾಳ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ಪ್ರೊಡಕ್ಷನ್ ಮ್ಯಾನೇಜರ್ ರವಿವರ್ಮ ಆನೆಹೊಸೂರ, ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನವನ್ನು ಆರ್.ಶೈನ್ ಮಾಡುತ್ತಿದ್ದಾರೆ. ಷಣ್ಮುಖಪ್ಪ ಆರ್.ಎಲ್.ಚಿತ್ರ ನಿರ್ಮಿಸುತ್ತಿದ್ದಾರೆ.
ವರದಿ :- ಡಾ.ಪ್ರಭು.ಗಂಜಿಹಾಳ ಮೊ:೯೪೪೮೭೭೫೩೪೬