ವಿಶೇಷ ಲೇಖನ – ಅನಾಥರ ಬಂಧು ಕೊಡೇಕಲ್ ಪರಮ ಪೂಜ್ಯ ಶ್ರೀ ದಾವಲ್ ಮಲಿಕ್ ಅಜ್ಜ.

Spread the love

ವಿಶೇಷ ಲೇಖನಅನಾಥರ ಬಂಧು ಕೊಡೇಕಲ್ ಪರಮ ಪೂಜ್ಯ ಶ್ರೀ ದಾವಲ್ ಮಲಿಕ್ ಅಜ್ಜ.

ಕಲ್ಯಾಣ ಕರ್ನಾಟಕ ಸರ್ವ ಜನಾಂಗದ ಶಾಂತಿ ತೋಟ, ಸರ್ವ ಧರ್ಮಗಳ ಭಾವೈಕ್ಯತೆಯ ಬಿಡು. ದಾಸರು ಸೂಫಿ – ಸಂತರು ಶರಣರು ಜನಿಸಿದ ಪುಣ್ಯ ಭೂಮಿ, ಜಾಗತಿಕ ಪ್ರಪಂಚಕ್ಕೆ ಸಮಾನತೆಯನ್ನು ಬೋಧಿಸಿ, ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ಕರುನಾಡಿನ ಹೆಮ್ಮೆಯ ನಾಡು ಕಲ್ಯಾಣ ನಾಡು.  ಇಂತಹ ನಾಡಿನಲ್ಲಿ ಅದೆಷ್ಟೋ ಮಹನೀಯರು ಜನ್ಮವಿತ್ತು ತಮ್ಮದೇ ಆದಂತಹ ಸಾಮಾಜಿಕ ಕೊಡುಗೆಗಳು ನೀಡಿ  ಲಿಂಗೈಕ್ಯರಾಗಿದ್ದಾರೆ. ಇವರ ಆದರ್ಶ ವಿಚಾರಗಳ ಸ್ಮರಣೆಯನ್ನು ನಾವು ಸದಾ ಮಾಡಿಕೊಂಡು ಬರುತ್ತಿದ್ದೇವೆ. ಸಾವಿರಾರು ವರ್ಷಗಳ ಪೂರ್ವದಿಂದ ಇಲ್ಲಿಯವರೆಗೂ ಇಲ್ಲಿ ಜನಿಸಿದ ಪ್ರತಿಯೊಬ್ಬ ದಾರ್ಶನಿಕರು ತಮ್ಮ ಇಡೀ ಬದುಕನ್ನು ಈ ನಾಡಿನ ಉನ್ನತಿಗಾಗಿ ಮೀಸಲಿಟ್ಟು ಹೋರಾಟ ಮಾಡಿದಾರೆ. ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗದೆ ನಿಸ್ವಾರ್ಥ ಸೇವಾ ಮನೋಭಾವದಿಂದ ಕಾಯಕ ಮಾಡಿ ಅಭಿವೃದ್ಧಿಪಥದಲ್ಲಿ ಮುನ್ನಡೆಸಿಕೊಂಡು ಹೋಗಿದಾರೆ. ಸಾಹಿತ್ಯ, ಸಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಈ ಪ್ರದೇಶವನ್ನು ಬೆಳೆಸುವ ಕಾರ್ಯ ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಪ್ರತಿಫಲವಾಗಿ ಈ ನಾಡು ಸರ್ವ ರೀತಿಯಿಂದಲೂ ಮಹತ್ವ ಪಡೆದಿದೆಕೊಂಡು ಮುನ್ನಡೆ ಸಾಗುತ್ತಿದೆ.

ಇಂತಹ ಸಾಧಕರ ಪಟ್ಟಿಯಲ್ಲಿ ಈದಿಗ ಹೊಸ ಹೆಸರು ಸೇರ್ಪಡೆ ಎಂದರೆ ಅದು ಅನಾಥ ಮಕ್ಕಳ ಪಾಲಕ – ಪೋಷಕರು, ವಯೋವೃದ್ಧರ ನಿಸ್ವಾರ್ಥ ಸೇವಕರು, ಸದಾ ಅಭಿವೃದ್ಧಿಗಾಗಿ ಹಂಬಲಿಸುವ ಮನಸ್ಸಿನವರು,  ಜಾತಿ ಮತ ಭೇದ ಎನ್ನದೆ ಎಲ್ಲರೂ ನನ್ನವರು ಎನ್ನುವ ಆಶಾವಾದದ ಮೌಲ್ಯಯುತ ಸಿದ್ಧಾಂತಕರಾದ ಕೊಡೇಕಲ್ ದಾವಲ್ ಮಲಿಕ್ ಅಜ್ಜನವರು. ಇವರ ಸೇವಾ ಚಟುವಟಿಕೆಗಳು ಜನಮೆಚ್ಚುಗೆ ಪಾತ್ರವಾಗಿ ಜನಮನಗಳಲ್ಲಿ ಬೆಳಗುತ್ತಿವೆ. ಈ ನಿಟ್ಟಿನಲ್ಲಿ ಅಜ್ಜನವರ ಸಾಧನಾ ಸೇವೆಯನ್ನು ತಮ್ಮೆಲ್ಲರ ಮುಂದೆ ಪ್ರಚುರಪಡಿಸುವ ಒಂದು ಸುವರ್ಣ ಅವಕಾಶ ನನಗೆ ದೊರೆತಿದೆ. ಇದನ್ನು ಸದ್ಬಳಕೆಯನ್ನು ಮಾಡಿಕೊಳ್ಳುವ ಸಣ್ಣ ಪ್ರಯತ್ನ ಮಾಡಿದ್ದು,ತಮ್ಮ ಎದುರಿಗೆ ನನ್ನ ಲೇಖನದ ಮೂಲಕ ಇವರ ಸೇವೆಗಳನ್ನು ಹಂಚಿಕೊಳ್ಳುತ್ತಿರುವೆ. ಕೊಡೇಕಲ್ ಪರಮ ಪೂಜ್ಯ ಶ್ರೀ ದಾವಲ್ ಮಲಿಕ್ ಅಜ್ಜನವರು ಎಂದರೆ ಮುಪ್ಪಾದ ವಯೋವೃದ್ಧರಲ್ಲ, ಸೌಮ್ಯ ಸ್ವಭಾವದ, ನಿಷ್ಕಲ್ಮಶ – ನಿಷ್ಕಳಂಕ ಹೃದಯ ವೈಶಾಲ್ಯ, ನಗುಮೊಗದ ಕಾಯಕಯೋಗಿ, ಸಾಮಾಜಿಕ ಜವಾಬ್ದಾರಿ ಹೊತ್ತು ಜೋಳಿಗೆ ಹಿಡಿದ 26 ವರ್ಷದ ಹರಿಹರೆಯದ ಯುವಕರು. ಆಧ್ಯಾತ್ಮಿಕ ಸೆಳೆತನ, ನಿರ್ಗತಿಕರ ಸೇವೆ ಮಾಡಬೇಕೆಂಬ ಹಂಬಲ, ಅನ್ಯಾಯಕ್ಕೊಳಗಾದ ಅನೇಕ ಜನರಿಗೆ ಬದುಕಿನ ಭರವಸೆ ನೀಡುವ ನಿಟ್ಟಿನಲ್ಲಿ ಎಲ್ಲಾ ಸುಖ ಭೋಗವನ್ನು ತ್ಯಾಗ ಮಾಡಿ, ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನಸೇವೆಯೇ ಜನಾರ್ದನ ಸೇವೆ ಎಂಬ ವಾಣಿಯಂತೆ ಮುನ್ನಡೆಯುತ್ತಿದ್ದಾರೆ. ಬಿಜಾಪುರ ಜಿಲ್ಲೆಯ ಮುದ್ದೇಬಿಹಾರ ತಾಲೂಕಿನ ಕಾರಕೂರ ಗ್ರಾಮದ ರಾಜೇಸಾಬ್ ಮತ್ತು ಲಾಲಬಿ ದಂಪತಿಗಳ ಮಗನಾಗಿ ಜನಿಸಿದ ಇವರು. ಇವರ ಮೂಲ ಹೆಸರು ಲಾಲಸ ಹಿರೇಮನಿ ಯಾಗಿತ್ತು. ಆದರೆ ಹೆಚ್ಚು ಕಾಲ

ಮನೆಯವರ ಜೊತೆ ಇರದೇ, ಆಧ್ಯಾತ್ಮಿಕ ಹಂಬಲ ಇದ್ದ ಕಾರಣದಿಂದ ಎಂಟನೆಯ ವರ್ಷದವರಿದಾಗಲೇ ಮನೆ ಬಿಟ್ಟರು, ಊರೂರು, ಕೇರಿ ಕೇರಿ, ಗಲ್ಲಿ ಗಲ್ಲಿ ಅಲೆದಾಡಿದರು.ಅನಂತರ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬರದೇವನಾಳ ಗ್ರಾಮದ ಶರಣ ದಂಪತಿಗಳಾದ ನಂದನಗೌಡ ಮತ್ತು ಸೀತಾದೇವಿ ತಾಯಿಯವರ ಸಂಪರ್ಕಕ್ಕೆ ಬಂದರು. ತರುವಾಯ ಈ ದಂಪತಿಗಳು ಇವರನ್ನು ಅತ್ಯಂತ ಪ್ರೀತಿಯಿಂದ ಸಾಕಿ ಸಲಹಿ, ದೊಡ್ಡವರಾಗಿ ಮಾಡಿದರು.ಆದರೂ ಸಹ ಆಧ್ಯಾತ್ಮಿಕ ಜ್ಞಾನದ ಹಸಿವು ಇವರನ್ನು ಸುಮ್ಮನೆ ಬಿಡಬೇಕಲ್ಲ. ಬಿಡಲಿಲ್ಲ ಎಂದಾಗಲೇ ಪುನಃ ಹೊರಟು ನಿಂತವರಿಗೆ ಕೊಡೇಕಲ್ ಕೈ ಮಾಡಿ ಕರಿದು ಬಾ ಎಂದಿತ್ತು. ಎಂದಿದೇ ತಡ, ತಡಮಾಡದೆ ಹೋರಟೆ ಬಿಟ್ಟರು

ಕೊಡೇಕಲ್ ಗ್ರಾಮಕ್ಕೆ. ಹೀಗೆ ಕೊಡೇಕಲ್ ಗ್ರಾಮಕ್ಕೆ ಆಗಮಿಸಿದ ಮಲಿಕ್ ರವರ ಜೀವನ ಕವಲುದಾರಿಂದ ಕೊಡಿತ್ತು. ಎಂಟನೇ ತರಗತಿಯವೆರೆಗೆ ಮಾತ್ರ ವಿಧ್ಯಾಭ್ಯಾಸ ಮುಗಿಸಿದ ಇವರು. ಇವರ ಆಧ್ಯಾತ್ಮಿಕ ಚಿಂತನ ಜ್ಞಾನಕ್ಕೆ ಕೊರತೆ ಇರಲಿಲ್ಲ. ಇಂತಹ ಕಷ್ಟದ ಸಮಯದಲ್ಲಿ 41 ದಿನಗಳ ಕಾಲ ಮೌನವ್ರತದ ಅನುಷ್ಠಾನವನ್ನು ಗೈದು, ತಾಳ್ಮೆ, ಕರುಣೆ, ಪ್ರೀತಿ,ತ್ಯಾಗ, ಹೃದಯವಂತಿಕೆಯನ್ನು ಸಂಪಾದಿಸಿಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ದರ್ಗಾ ಸಹ ಆರಂಭಿಸಿ ಧಾರ್ಮಿಕ ಪ್ರವಚನದ ಜೊತೆ ಅನಾಥ ಮಕ್ಕಳಿಗೆ ಆಶ್ರಯದಾತರಾಗಿ ಜೀವನದ ಕೊನೆಯವರೆಗೂ ದುಡಿಯಬೇಕೆಂದು ನಿಶ್ಚಯಿಸುತ್ತಾರೆ.

ತರುವಾಯ ಸೇವಾ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಇವರು, ಇವರ ನಿಸ್ವಾರ್ಥ ಸೇವೆ ಕಂಡು ಅದೇ ಗ್ರಾಮದ ರಂಗನಾಥ ಕಣಕಪ್ಪಾ ದೊರೆಯವರು ಅವರ ಸ್ವಂತ ಹದಿನಾಲ್ಕು ಗುಂಟೆ ಜಮೀನನ್ನು ದಾನ ಮಾಡಿದ ಫಲವಾಗಿ ಇವತ್ತು ನೂರಾರು ಮಕ್ಕಳಿಗೆ ಹಾಗೂ ವಯೋವೃದ್ಧರಿಗೆ ಆಶ್ರಯ ತಾಣವಾಗಿದೆ. ಹೀಗಾಗಿಯೇ ಮಲಿಕ್ ರವರು 26ನೇ ವಯಸ್ಸಿಗೆ ಜೋಳಿಗೆ ಹಾಕಿಕೊಂಡು ಹಸಿದ ಅದೆಷ್ಟೋ ಹೊಟ್ಟೆಗಳಿಗೆ ಅನ್ನವಷ್ಟೇ ಅಲ್ಲದೆ ಶಿಕ್ಷಣ ಕೊಡಿಸಿ,ಬದುಕು ಕಟ್ಟಿಕೊಡುವ ಭರವಸೆ ಕೊಡಿಸುತ್ತಾ,ತಬ್ಬಲಿ ಮಕ್ಕಳ ಲಾಲನೆ – ಪೋಷಣೆ ಮಾಡುವ ದೊಡ್ಡ ಜವಾಬ್ದಾರಿ ಹೊತ್ತುಕೊಂಡು ಹಸಿದ ಹೊಟ್ಟೆಗಳಿಗೆ ಹಸಿವು ಇಂಗಿಸುವ ಮಹತ್ವದ ಕಾರ್ಯದಲ್ಲಿ ತಲ್ಲಿನರಾಗಿದ್ದಾರೆ. ಸಂದಿಗ್ಧ ಪರಿಸ್ಥಿತಿಯ ಇಂದಿನ ದಿನಮಾನಗಳ ದ್ವೇಷ ಮತ್ಸರ,ಅಸೂಯೆ – ಅಪನಂಬಿಕೆಯ ಜೊತೆ ಜಾತಿ-ಧರ್ಮ ಸಂಕೋಲೆಗಳ ಹೊಡೆದಾಟದಲ್ಲಿ ತೊಡಗಿಸಿಕೊಂಡ ಜನರ ಮಧ್ಯೆ, ಬಿನ್ನರಾಗಿ ನಿಲ್ಲುವ ಇವರು ಇದೆಲ್ಲವನ್ನು ಬಿಟ್ಟು ನಾವೆಲ್ಲರೂ ಒಂದು, ಒಂದೇ ಕುಟುಂಬದವರು, ಸರ್ವರೂ ಸಮಾನರು ಎನ್ನುವ ಭಾವನೆಯ ಅಡಿಯಲ್ಲಿ ಚಿಂತನ ಮಂಥನ ಮಾಡುತ್ತಾ ದಾಸೋಹ ಭಾವದ ಕರುಣಾಮೂರ್ತಿಯಾಗಿ ಮಿನುಗುತ್ತಿದ್ದಾರೆ. ಜೋಳಿಗೆ ಹಿಡಿದು ತರುವ ಆಹಾರವನ್ನು ಎಲ್ಲರಿಗೂ ಸಮಾನವಾಗಿ ಹಂಚಿ ಸರ್ವರ ನಗುಮೊಗದಲ್ಲಿ ಸಂತೋಷವನ್ನು ಕಾಣುವುದು ಇವರ ಮುಖ್ಯ ಗುರಿಯಾಗಿದೆ. ಆಶ್ರಮಕ್ಕೆ ಆಗಮಿಸಿದ ಯಾವೊಬ್ಬ ವ್ಯಕ್ತಿಯೊ ಅನ್ನ, ನೀರು, ಆಶ್ರಯ ಸಿಗದೆ ನೋವುಂಟು ಪಡಬಾರದು ಎಂಬುವುದೇ ಇವರ ಪ್ರಮುಖ ಧ್ಯೇಯ ಮಂತ್ರವಾಗಿದೆ. ಹಾಗಾಗಿಯೇ ಕೊರೋನಾ ಸಮಯದಲ್ಲಿಯೊ ಸಹ ಯಾವುದೇ ರೀತಿಯ ಮಕ್ಕಳು, ವಯೋವೃದ್ಧವರಿಗೂ ನೋವುಂಟು ಆಗದಂತೆ ಅವರೆಲ್ಲರ ಆರೋಗ್ಯ

ಕಾಪಾಡಿಕೊಂಡು ಬಂದಿದ್ದಾರೆ. ಸದ್ಯ ಇದೀಗ 120 ಮಕ್ಕಳು ಸೇರಿದಂತೆ 60 ಕ್ಕೂ ಹೆಚ್ಚು ವಯೋವೃದ್ಧರು ಇಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ದಿನನಿತ್ಯಕ್ಕೆ ಬೇಕಾದ ಅವಶ್ಯವಿರುವ ಎಲ್ಲಾ ವಸ್ತುಗಳು ಪೂರೈಸುವುದು ಸೇರಿದಂತೆ ಬಟ್ಟೆ, ಶಿಕ್ಷಣದ ಖರ್ಚು,  ಸರಿಯಾದ ಸಮಯಕ್ಕೆ ಊಟದ ವ್ಯವಸ್ಥೆ, ವೈದ್ಯಕೀಯ ಸೇವೆ, ವೈಚಾರಿಕ ವಿಚಾರಗಳು ಸರ್ವರಿಗೂ ಉಣಬಡಿಸುವ ಕಾಯಕದಲ್ಲಿ ಅಜ್ಜನವರು ತೊಡಗಿಸಿಕೊಂಡಿದ್ದಾರೆ. ಕಾರಣ ಹೆತ್ತವರ ಹೊರೆಯಾಗಿ ನರಕಮಯ ಸ್ಥಿತಿಯಲ್ಲಿ ಇದ್ದು ಜೀವನದ ಕೊನೆಯ ದಿನಗಳು ಎಣಿಸುವ  ಅದೆಷ್ಟು ಅನಾಥರ ನೆರವಿಗೆ ಧಾವಿಸಿ ಅವರನ್ನು ಆಶ್ರಮಕ್ಕೆ ಕರೆತಂದು ಅವರ ಆರೈಕೆ ಮಾಡಿ ಅವರನ್ನು ನಾಡಿನ ಉತ್ತಮ ಪ್ರಜೆಗಳನ್ನಾಗಿ ಮಾಡುವ ಮಹೋನ್ನತ ಕಾರ್ಯಕ್ಕೆ ಕೈಹಾಕಿ ಶ್ರಮಿಸುತ್ತಿರುವುದು ನೋಡುತ್ತಿದ್ದೇವೆ. ಆಶ್ರಮದಲ್ಲಿ ಇರುವವರಿಗೂ ಹಾಗೂ ವಿವಿಧ ಜಿಲ್ಲೆಯ ಬಡವರ ಮಕ್ಕಳಿಗೆ ಉಚಿತ ವಿವಾಹ ಮಂಗಲ ಕಾರ್ಯ,  ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ ಉಚಿತ  ಉನ್ನತ ಶಿಕ್ಷಣ ವ್ಯವಸ್ಥೆ ಜೊತೆಗೆ ಉದ್ಯೋಗ ಕೊಡಿಸುವ ಪ್ರಾಮಾಣಿಕ ಯತ್ನ. ಅದೇ ರೀತಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಷ್ಟದಲ್ಲಿರುವ ಜನರಿಗೆ ಜೋಳಿಗೆ ಕಾಯಕದ ಮೂಲಕ ಸಹಾಯ ಹಸ್ತ ನೀಡಿ ಅವರ ಸಂಕಷ್ಟವನ್ನು ದೂರು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗೆ ಸಮಾಜಿಕ ಕಳಕಳಿ ಹೊಂದುವ ಮೂಲಕ ಸರಕಾರ ಸಂಘ ಸಂಸ್ಥೆಗಳು ಮಾಡದೇ ಇರುವಂತಹ ಅನೇಕ ಜನಪರ ಕಾರ್ಯಗಳು ಮಾಡಿ, ಸೈ ಎನಿಸಿಕೊಂಡಿದ್ದಾರೆ. ಈ ತನ್ಮೂಲಕ ಸರ್ವಜನಾಂಗದ ಪ್ರೀತಿಯ ಅಜ್ಜರಾಗಿ ಈ ಭಾಗದಲ್ಲಿ ಬೆಳಗುತ್ತಿದ್ದಾರೆ. ಇನ್ನು ವಿಶೇಷವಾಗಿ ಹೇಳಬೇಕೆಂದರೆ ದೊಡ್ಡದೊಂದು ಅನಾಥಾಲಯ, ವಯೋವೃದ್ಧರಿಗೆ ಉತ್ತಮ ಕಟ್ಟಡ  ಸೇರಿದಂತೆ ಸಾವಿರ ಮಕ್ಕಳಿಗೆ ಉತ್ತಮ ಶಿಕ್ಷಣದ ವ್ಯವಸ್ಥೆ ಮಾಡಬೇಕೆಂಬ ಹಂಬಲ ಇವರ ಮನಸ್ಸಿನಲ್ಲಿನ್ನೂ ಸದಾ ಕೊರಗುತ್ತಿದೆ. ಈ ದಿಸಯಲ್ಲಿ ಅಜ್ಜನವರು ದಾನಿಗಳಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. ವಿಶಾಲ ಮನಸ್ಸುಳ್ಳ ಮಹನೀಯರು ಆಶ್ರಮಕ್ಕೆ ದಾನ ಮಾಡಲು ಮುಂದಾಗಬೇಕು. ಈ ಮೂಲಕ ಅನಾಥರಿಗೆ ಬೆಳಕಾಗಬೇಕು, ಉಳ್ಳವರು ನೆರಳು ಅನಾಥರ ಮೇಲೆ ಬೀಳಲಿ ಎನ್ನುವುದು ಇವರ ಜೀವನದ ದೊಡ್ಡ ಮಹದಾಸೆ. ಅದಕ್ಕಾಗಿ ನೊಂದ ಜೀವಗಳಿಗೆ ಬೆಳಕಾಗಿ ದಾಸೋಹ, ಶಿಕ್ಷಣ ಮತ್ತು ಆಶ್ರಯದ ಜೊತೆಗೆ ಸಮಾಜಿಕ ಕಳಕಳಿಯ ನೀತಿ ಪಾಠಗಳು ಈ ಆಶ್ರಯದಲ್ಲಿ ದಿನನಿತ್ಯ ನಡೆಯುತ್ತಿವೆ. ಇದು ಅಜ್ಜನವರ ಅನಾಥಾಶ್ರಮವಲ್ಲ ಬದಲಿಗೆ ಬದುಕಿನ ಭಾವೈಕ್ಯದ ಬಂಡಿ. ದಾರಿಹೋಕರಿಂದ ಹಿಡಿದು ಅನಾಥರಿಗೆಲ್ಲ ಅನ್ನ,ಆಶ್ರಯ, ಶಿಕ್ಷಣ ನೀಡುತ್ತಿರುವ ಇಂತಹ ಮಾನವೀಯ ಮೌಲ್ಯಾಧಾರಿತ ಅಂತಃಕರಣದ ಹೃದಯವಂತಿಕೆಯ ಸೇವೆ ನಿಜಕ್ಕೂ ಇಂದಿನ ಸಮಾಜಕ್ಕೆ ಮಾದರಿ ಮತ್ತು ಪ್ರೇರಣೆ. ಕೊನೆಯ ಮಾತು :  ಪರಮ ಪೂಜ್ಯ ಶ್ರೀ ಅಜ್ಜನವರು ಅನುಭವಿಸಿದ ಬಡತನ ಬೇರೆ ಇನ್ನೊಬ್ಬರು ಅನುಭವಿಸಬಾರದು. ಶಿಕ್ಷಣ ವಂಚಿತರಾಗಬಾರದು. ಅನಾಥರು ತುತ್ತು ಅನ್ನಕ್ಕೂ ಪರದಾಡಬಾರದು ಎನ್ನುವದೇ ಇವರ ಕಳಕಳಿ, ಹೀಗಾಗಿ  ಕೈಲಾದಷ್ಟು ಜೋಳಿಗೆ ಹಿಡಿದು ಅನಾಥ ಮಕ್ಕಳ ಪಾಲನೆ ಪೋಷಣೆ ಮಾಡಲೇಬೇಕು ಎನ್ನುವ ನಿಟ್ಟಿನಲ್ಲಿ ಪ್ರಾರಂಭವಾದ ಕೊಡೇಕಲ್ ಗ್ರಾಮದ ಅನಾಥಾಶ್ರಮದಲ್ಲಿ ಅನಾಥ ಮಕ್ಕಳು ಉತ್ತಮ ಸಂಸ್ಕಾರದಿಂದ ಬದುಕುತ್ತಿದ್ದಾರೆ. ಇದಕ್ಕೆ ಸ್ಪೂರ್ತಿ ಎಂದರೆ ಅದು ದಾವಲ್ ಮಲಿಕ್ ಅಜ್ಜನವರು ಎನ್ನುವ ಮಾತಂತು ನಿಜ. ಅದಕ್ಕಾಗಿಯೇ ಬಸವಾದಿ ಶರಣರ ಸದಾಶಯದಂತೆ ಇವನಾರವ ಇವನಾರವ ಎನ್ನದೇ ಇವನಮ್ಮವ ಇವನಮ್ಮವ ಎನ್ನುವಂತೆ ಎಲ್ಲರಿಗೂ ಅಪ್ಪಿಕೊಂಡು ದಯೇ ಧರ್ಮದ ಮೂಲ ಎನ್ನುವ ಹಾಗೆ ಅಜ್ಜನವರ ಜೀವನ ಸಾಗುತ್ತಿದೆ.ಇದಕ್ಕೆ ಈ ನಾಡಿನ ಪ್ರಜ್ಞಾವಂತ ಜನರು ಅಜ್ಜನವರ ಸೇವೆಯೊಂದಿಗೆ ಕೈ ಜೋಡಿಸಬೇಕು. ಅಂದಾಗ ಮಾತ್ರ ನಾವು ಈ ಸಮಾಜದಲ್ಲಿ ಹುಟ್ಟಿದಕ್ಕೂ ಸ್ವಾರ್ಥಕವಾಗುತ್ತದೆ ಜೊತೆಗೆ ಋಣ ತೀರಿಸಲು ಸಾಧ್ಯ. ಇಲ್ಲವಾದಲ್ಲಿ ನಮಗೂ ಮತ್ತು ಮೃಗಗಳಿಗೂ ಯಾವುದೇ ರೀತಿಯ ವ್ಯತ್ಯಾಸ ಇರುವುದಿಲ್ಲ. ಆದಕಾರಣ ಅನಾಥರ ಸಂರಕ್ಷಣೆಗೆ ಸರ್ವರೂ ಮುಂದಾಗುವುದು ಸರ್ವ ಶ್ರೇಷ್ಠ.

ವರದಿಸಂಗಮೇಶ ಎನ್ ಜವಾದಿ, ಬೀದರ ಜಿಲ್ಲೆ.

Leave a Reply

Your email address will not be published. Required fields are marked *