ಗುತ್ತಿಗೇದಾರರಿಂದ ಬಿಲ್ ಪಾವತಿಗಾಗಿ ಕುಷ್ಟಗಿ ತಾಲೂಕ ಪಂಚಾಯತ ಕಾರ್ಯಾಲಯದ ಮುಂದೆ ಅನಿರ್ದೀಷ್ಟ ಧರಣಿ..

Spread the love

ಗುತ್ತಿಗೇದಾರರಿಂದ ಬಿಲ್ ಪಾವತಿಗಾಗಿ ಕುಷ್ಟಗಿ ತಾಲೂಕ ಪಂಚಾಯತ ಕಾರ್ಯಾಲಯದ ಮುಂದೆ ಅನಿರ್ದೀಷ್ಟ ಧರಣಿ..

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಸಂಗನಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ PRED & RWS ಇಲಾಖೆಗಳಿಗೆ MGNREGA ಯೋಜನೆ ಅಡಿಯಲ್ಲಿ ನಮಗೆ ಸಾಮಗ್ರಿ ಸರಬರಾಜು ಮಾಡಲು ಮ್ಯಾನ್ವೊಲ್  ಟೆಂಡರ್ ಇಲಾಖೆಯವರು ಕರೆದಿದ್ದು, ಈ ಟೆಂಡರ್ ಪ್ರಕ್ರಿಯೆಯಲ್ಲಿ ಆಯ್ಕೆಯಾದ ನಾವುಗಳು ಅಂದರೆ ಸಾಮಗ್ರಿ ಸರಬರಾಜುದಾರರು ಇಲಾಖೆಗಳಿಗೆ ಸಾಮಗ್ರಿಗಳನ್ನು ಸರಬರಾಜು ಮಾಡಿರುತ್ತೇವೆ. ಸದರಿ 2018ರಿಂದ ಇಲ್ಲಿಯವರೆಗೂ ಸಾಮಗ್ರಿ ಬಿಲ್ಲನ್ನು ಪಾವತಿ ಮಾಡದ ಕಾರಣ ನಮ್ಮಗಳಿಗೆ ಜೀವನೋಪಾಯ ಕೂಡ ಕಷ್ಟಕರವಾಗಿದ್ದು ಸಾಲಗಾರರ ಒತ್ತಡಕ್ಕೆ ನಮ್ಮ ಜೀವನ ಅಸ್ತವ್ಯಸ್ತಗೊಂಡಿದೆ.  ಸುಮಾರು ಎಂಟು ತಿಂಗಳ ಹಿಂದೆ ಈ ಇಲಾಖೆಗೆ ಸಾಮಗ್ರಿ ಒದಗಿಸಿದ ವ್ಯಕ್ತಿ ಓರ್ವ ಬಿಲ್ ಪಾವತಿ ಆಗದ ಕಾರಣ ಸಾಲಗಾರರ ಒತ್ತಡಕ್ಕೆ ಹೃದಯಾಘಾತದಿಂದ ತೀರಿಕೊಂಡ ಘಟನೆ ಕೂಡ ನಡೆದಿದೆ. ಹಾಗೂ ಸಂಗನಾಳ ಪಂಚಾಯತ್ ಅಧ್ಯಕ್ಷರು ಕೂಡ ಬಿಲ್ ಪಾವತಿ ಆಗದ ಕಾರಣ ಸಾಲಗಾರರು ಒತ್ತಡಕ್ಕೆ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಕೂಡ ನಡೆದಿದ್ದು ಇದ್ಯಾವುದಕ್ಕೂ ಅಧಿಕಾರಿಗಳು ಸ್ಪಂದನೆ ಮಾಡದ ಕಾರಣ ನಾವು ಸದರಿ ಬಿಲ್ ಪಾವತಿ ಆಗುವವರೆಗೂ ಈ ಧರಣಿಯನ್ನು ಕೈ ಬಿಡಲಾರೆವು ಎಂದು ನಿಮಗೆ ಎಚ್ಚರಿಕೆ ನೀಡುತ್ತಿದ್ದೇವೆ. ಎಚ್ಚರಿಕೆ: ಧರಣಿ ನಿರತ ಸಮಯದಲ್ಲಿ ಯಾರಿಗಾದರೂ ಸಮಸ್ಯೆ ಕಂಡು ಬಂದರೆ ಇದಕ್ಕೆ ನೇರ ಹೊಣೆ RWS, AEE ಕುಷ್ಟಗಿ, PRED, AEE ಕುಷ್ಟಗಿ ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಕುಷ್ಟಗಿ ಹಾಗೂ ಜಿಲ್ಲಾ ಪಂಚಾಯತ್  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೊಪ್ಪಳ ನೀವುಗಳೇ ಇದಕ್ಕೆ ನೇರ ಕಾರಣಿಕರ್ತರು ಎಂದು ಧರಣಿ ನಿರತರು ಆಕ್ರೋಶ ವ್ಯಕ್ತ ಪಡಿಸಿದರು. ಈ ಧರಣಿಯಲ್ಲಿ ಶಿವರಾಜ ಕಟ್ಟಿಮನಿ, ನಾಗರಾಜ ಉಪ್ಪಾರ, ಹನುಮಂತಪ್ಪ ಹಿರೇಮನಿ, ಶುಖಮನಿ ಈಳಿಗೇರ್, ಮಂಜುನಾಥ ಟೆಂಗುಂಟಿ,ಸೇರಿದಂತೆ ಇತರರು ಪಾಲುಗೊಂಡರು. ಹಾಗೇಯೆ ಈ ಧರಣಿ ಹೋರಾರಗಾರರ ಬಳಿ ಮಾನ್ಯ ಶಾಸಕರು ಸ್ಥಳಕ್ಕಕೆ ಬೇಟೆ ನೀಡಿ, ಧರಣಿ ನಿರತರರಿಗೆ ಸಾತ್ ನೀಡಿದರು. ನಿರತರ ಮನವಿಯ ಪ್ರತಿಯನ್ನು

1.MGNREGA COMMISSIONER ಬೆಂಗಳೂರು, 2. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೊಪ್ಪಳ.3 RWS AEE, PRED AEE ಕುಷ್ಟಗಿ., 4. ಜಿಲ್ಲಾ ಉಸ್ತುವಾರಿ ಸಚಿವರು ಕೊಪ್ಪಳ, 5. ಲೋಕಸಭಾ ಸದಸ್ಯರು ಕೊಪ್ಪಳ, 6. ಶಾಸಕರು ಕುಷ್ಟಗಿ ವಿಧಾನಸಭಾ ಕ್ಷೇತ್ರ, 7. ಪಂಚಾಯತ್ ರಾಜ್ ಸಚಿವರು ಕರ್ನಾಟಕ ಸರ್ಕಾರ, 8. ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, 9. ರಾಜ್ಯಪಾಲರು ಕರ್ನಾಟಕ ಸರ್ಕಾರ, ಸಲ್ಲಿಸಿದರು.

ವರದಿ  ಸಂಪಾದಕೀಯ

Leave a Reply

Your email address will not be published. Required fields are marked *