ಸಕ್ಷಮ ಸಂಸ್ಥೆಯಿಂದ ಬಡ,ನಿರ್ಗತೀಕ, ವಿಶೇಷಚೇತನ ಕುಟುಂಬಗಳಿಗೆ ನೇರವು,,,
15 ಜನ ಅರ್ಹ ವಿಶೇಷಚೇತನರಿಗೆ ಗಾಲಿಕುರ್ಚಿ ( ವೀಲ್ವೇರ್ ) ಗಳನ್ನು , 10 ಜನ ಅರ್ಹ ವಿಶೇಷಚೇತನರಿಗೆ ವೈದ್ಯಕೀಯ ಮಾಸಾಶನದ ಪ್ರಮಾಣ ಪತ್ರ ( UDID ) ಕಾರ್ಡ್ಗಳನ್ನು ಮತ್ತು ಒಬ್ಬರು ಅರ್ಹ ಶ್ರವಣದೋಷವುಳ್ಳ ವಿಶೇಷಚೇತನರಿಗೆ ಕವಿ ಮಿಷನ್ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. 26/04/2022 ಬುಧವಾರ ಇವತ್ತು ಜಿಲ್ಲಾ ಘಟಕ.ಶಿವಮೊಗ್ಗದ ವತಿಯಿಂದ ಮಾಧವನೆಲೆ, ಕೆ.ಎಚ್.ಬಿ ಕಾಲೋನಿ , ವಿನೋಬನಗರ, ಶಿವಮೊಗ್ಗ ದಲ್ಲಿ 15 ಜನ ಅರ್ಹ ವಿಶೇಷಚೇತನರಿಗೆ ಗಾಲಿಕುರ್ಚಿ ( ವೀಲ್ವೇರ್ ) ಗಳನ್ನು, 10 ಜನ ಅರ್ಹ ವಿಶೇಷಚೇತನರಿಗೆ ವೈದ್ಯಕೀಯ ಮಾಸಾಶನದ ಪ್ರಮಾಣ ಪತ್ರ ( UDID ) ಕಾರ್ಡ್ಗಳನ್ನು ಮತ್ತು ಒಬ್ಬರು ಅರ್ಹ ಶ್ರವಣದೋಷವುಳ್ಳ ವಿಶೇಷಚೇತನರಿಗೆ ಕವಿ ಮಿಷನ್ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು . ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಕ್ಷಮ ಅಧ್ಯಕ್ಷರು ಡಾ.ಪ್ರಶಾಂತ್ ಇನ್ಸೂರು , ಮುಖ್ಯ ಅತಿಥಿಗಳಾಗಿ ಟಿ.ಆರ್ ಅಶ್ವಥ್ ನಾರಾಯಣ ಶೆಟ್ಟಿ , ಪದ್ಮಶ್ರೀ ಡಾ.ಮಾಲತಿ ಕೆ ಹೊಳ್ಳ ಮಾತೃಫೌಂಡೇಶನ್ ಅಧ್ಯಕ್ಷರು ಬೆಂಗಳೂರು , ಶಿಲ್ಪಾ . M ದೊಡ್ಡಮನಿ ಜಿಲ್ಲಾ ಕಲ್ಯಾಣಾಧಿಕಾರಿಗಳು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ . ಶಿವಮೊಗ್ಗ , ಡಾ.ಹರಿಕೃಷ್ಣ ರೈ ಕರ್ನಾಟಕ ದಕ್ಷಿಣ ಪ್ರಾಂತ್ಯ ಕಾರ್ಯದರ್ಶಿ , ಡಾ.ಶ್ರೀಧರ್ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಶಿವಮೊಗ್ಗ ಹಾಗೂ ಸಕ್ಷಮ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ – ಸಂಪಾದಕೀಯ