ಹಿಂದಿ ರಾಷ್ಟ್ರ ಭಾಷೆ : ಕಿಚ್ಚ ಸುದೀಪ್ ಮಾತಿಗೆ ದನಿಗೂಡಿಸಿದ ಸಿಎಂ ಬೊಮ್ಮಾಯಿ,,,,,
ನಮ್ಮ ರಾಷ್ಟ್ರ ಭಾಷೆ ಹಿಂದಿ ಅಲ್ಲ ಎನ್ನುವ ಸುದೀಪ್ ಹೇಳಿಕೆಗೆ ವ್ಯಾಪಾಕ ಬೆಂಬಲ ವ್ಯಕ್ತವಾಗುತ್ತಿದೆ. ನಿನ್ನೆ ಸಿನಿಮಾ ರಂಗದ ಗಣ್ಯರು ಮತ್ತು ಮಾಜಿ ಮುಖ್ಯಮಂತ್ರಿಗಳು ಕಿಚ್ಚನ ಪರ ನಿಂತಿದ್ದರು. ಹಿಂದಿ ರಾಷ್ಟ್ರ ಭಾಷೆ ಆಗಲು ಸಾಧ್ಯವೇ ಇಲ್ಲ ಎಂದು ಖಡಕ್ ಸಂದೇಶ ರವಾನಿಸಿದ್ದರು. ಇವತ್ತು ಸಿಎಂ ಬಸವರಾಜ ಬೊಮ್ಮಾಯಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ ‘ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಸುದೀಪ್ ಹೇಳಿದ್ದು ಸರಿಯಿದೆ. ನಮ್ಮ ಪ್ರಾದೇಶಿಕ ಭಾಷೆಯೇ ಸಾರ್ವಭೌಮ. ಆಯಾ ಪ್ರಾದೇಶಿಕ ಭಾಷೆಗಳಿಗೆ ಮನ್ನಣೆ ಇರುತ್ತದೆ. ಸುದೀಪ್ ಅದನ್ನು ಸರಿಯಾಗಿಯೇ ಹೇಳಿದ್ದಾರೆ ಎಂದು ಸುದೀಪ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಸುದೀಪ್ ಅವರ ಆ ಮಾತಿಗೆ ಬಾಲಿವುಡ್ ನಟ ಅಜಯ್ ದೇವಗನ್ ಪ್ರತಿಕ್ರಿಯೆ ನೀಡಿದ್ದರು. ಹಿಂದಿ ರಾಷ್ಟ್ರ ಭಾಷೆ. ಅದನ್ನು ಒಪ್ಪಿಕೊಳ್ಳದೇ ಇದ್ದರೆ ಹಿಂದಿ ಭಾಷೆಗೆ ಇತರ ಭಾಷೆಯ ಸಿನಿಮಾಗಳನ್ನು ಡಬ್ ಮಾಡುವುದು ಯಾಕೆ? ಎಂದು ಪ್ರಶ್ನೆ ಮಾಡಿದ್ದರು. ಅಜಯ್ ದೇವಗನ್ ಈ ಟ್ವಿಟ್ ಭಾರೀ ಸಂಚಲನಕ್ಕೆ ಕಾರಣವಾಗಿತ್ತು.
ವರದಿ – ಸಂಪಾದಕೀಯ