2016-17 ರಲ್ಲಿ 16 ಜನ PSIಗಳು ಅಕ್ರಮಾಗಿ ನೇಮಕವಾಗಿರುವ ಆರೋಪ..?
2016-17ರಲ್ಲಿ 59 ಹುದ್ದೆಯಲ್ಲಿ ಪಿ.ಎಸ್.ಐ ಸ್ಥಾನಕ್ಕೆ 16 ಜನ ಅಕ್ರಮವಾಗಿ ನೇಮಕವಾಗಿದ್ದಾರೆ ಎಂದು ಯಾದಗಿರಿ ಮೂಲದ ಶ್ರೀನಿವಾಸ್ ಎಂಬ ವ್ಯಕ್ತಿ ಮುಖ್ಯಮಂತ್ರಿ ಬಸರಾಜ್ ಬೊಮ್ಮಾಯಿ ಅವರಿಗೆ ಹೆಸರು ಮತ್ತು ಪೋನ್ ನಂಬರ್ ನೀಡುವ ಮೂಲಕ ಎಲ್ಲರನ್ನು ವಜಾ ಮಾಡಲು ಒತ್ತಾಯಿಸಿದ್ದಾರೆ. ಹೌದು ಈಗಾಗಲೇ ರಾಜ್ಯದಲ್ಲಿ ಅಕ್ರಮವಾಗಿ ಪಿ ಎಸ್ ಐ ಹುದ್ದೆಗಳಿಗೆ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂಬ ಬಗ್ಗೆ ಸಂಚಲನ ಮೂಡಿಸಿ ತನಿಖೆಗಳು ಆಗುತ್ತಿವೆ. ಇದೇ ಹೊತ್ತಲ್ಲಿ ಅಕ್ರಮವಾಗಿ ನೇಮಕವಾಗಿರುವ ಅಭ್ಯರ್ಥಿಗಳ ವಿರುದ್ಧ ಪತ್ರದಲ್ಲಿ ರಾಜ್ಯ ಸರ್ಕಾರವು ಸಿ.ಬಿ.ಐ ಅಥವಾ ಸಿ.ಐ.ಡಿ ತನಿಖೆ ಮಾಡಬೇಕು, ಪಿ.ಎಸ್.ಐ ನೇಮಕಾತಿಯಲ್ಲಿ 59 ಹುದ್ದೆ 2016- 17ರಲ್ಲಿ ಪಿ.ಎಸ್.ಐ ಸ್ಥಾನಕ್ಕೆ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸಿತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಸೂರಿಕೆ ಮಾಡಿ ಬ್ಲೂಟುತ್ ಡಿವೈಸ್ ಅಕ್ರಮ ನಡೆಸಿ 40 ಲಕ್ಷ ಕೊಟ್ಟಿದ್ದಾರೆ. ಇವರು ಅಫಜಲಪೂರ ಪಟ್ಟಣ ನಿವಾಸಿಗಳಾಗಿದ್ದು. ಹಣ ನೀಡಿ ಡಿಲ್ ಮಾಡಿದ್ದಾರೆ. ಹಣವನ್ನು ದಿವ್ಯ ಹಾಗರಗಿ ಮತ್ತು ಆರ್.ಡಿ ಪಾಟೀಲ ಅವರ ಕೈಯಿಗೆ ಹಣ ನೀಡಿ ಈಗ ಕರ್ತವದಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ.ಇನ್ನೂ ಕರ್ನಾಟಕ ರಾಜ್ಯ ಪೊಲೀಸ್ ವೆಬ್ ಸೈಟ್, ಲಾಕ್ (ಡಿಲೆಟ್ )ಮಾಡಿದ್ದಾರೆ. ಹಾಗಾಗಿ ಪಿ.ಎಸ್.ಐ ಸಿವಿಲ್ 59 ಹುದ್ದೆಗಳು ಆಯ್ಕೆಯಾದ ಪಟ್ಟಿ ತೆಗೆದುಕೊಂಡು ಪರಿಶಿಲನೆ ಮಾಡಬೇಕು. ಅಕ್ರಮದಲ್ಲಿ ಭಾಗಿಯಾಗಿರುವವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಈ ಹಿಂದೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಠಾಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಗೀತಾಂಜಲಿ ಶಿಂಧೆ ಅವರು ಕೂಡ ಆರೋಪ ಪಟ್ಟಿಯಲ್ಲಿದ್ದಾರೆ. ಈ ಕೇಳಗೆ ನೀಡಿರುವ ಆರೋಪಿ ಪಟ್ಟಿದಾರರ ಹೆಸರುಗಳು :
1) ಗೀತಾಂಜಲಿ ಮತ್ತು ಸಹೋದರಿ
2) ಇಂದುಮತಿ
3) ಗಂಗಮ್ಮ
4) ಹನುಮಂತ.ಬಿ
5) ಲಿಂಗರಾಜು ಮಣ್ಣೂರು
6) ಸಿದ್ರಮ್ಮ ಬಿದ್ರಾಣಿ
7) ಶಿವರಾಜ್ ಪಾಟೀಲ್
8) ಸಿದ್ದಲಿಂಗ
9) ರೇಖಾ
10) ದಿವ್ಯಶ್ರೀ
11) ಪುಷ್ಪ
12) ಸುವರ್ಣ
13) ಕಿರಣ
14) ಶೀಲಾದೇವಿ
15) ಗಜನಂದ ಬಿರಾದಾರ್
16) ನಂದಕುಮಾರ್
ಮುಂತಾದವರು ಎಂದು 16 ಜನರ ಹೆಸರು ಮತ್ತು ದೂರವಾಣಿ ಸಂಖ್ಯೆಗಳನ್ನು ನಮೂದಿಸುವ ಮೂಲಕ ದೂರು ನೀಡಲಾಗಿದೆ. ದೂರಿನಲ್ಲಿ ಸಲ್ಲಿಸಿದ PSI ಹುದ್ದಯಲ್ಲಿರುವವರ ಹೆಸರುಗಳು ಅಕ್ರಮವಾಗಿ ನೇಮಕವಾಗಿರುವ ಎಲ್ಲಾ ಪಿಎಸ್ಐಗಳನ್ನು ತನಿಖೆ ಮಾಡುವ ಮೂಲಕ ಕ್ರಮಕೈಗೊಂಡು ಕೆಲಸದಿಂದ ವಜಾ ಮಾಡಬೇಕು ಎಂದು ಯಾದಗಿರಿಯ ಶ್ರೀನಿವಾಸ್ ಕಟ್ಟಿ ಎಂಬುವವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಹಿನ್ನಲೆಯಲ್ಲಿ ತನೀಖೆ ಕೈಗೊಂಡ ಸಿಐಡಿ ತಂಡವು ಬಲೆ ಬಿಸಿ ದಿವ್ಯ ಹಾಗರಗಿಯವರನ್ನು ಇಂದು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಿ ಕರೆತರುತ್ತಿದ್ದಾರೆ.
ವರದಿ – ಸಂಪಾದಕೀಯ