ತಾವರಗೇರಾ ಹೋಬಳಿಯ ನಾರಿನಾಳ ಗ್ರಾಮದಲ್ಲಿ ಶಾರ್ಟ ಸರ್ಕ್ಯೂಟ್ ನಿಂದ ಬೆಂಕಿ ಅವಘಡ,
ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿಯ ನಾರಿನಾಳ ಗ್ರಾಮದಲ್ಲಿ ನಿನ್ನೆ ರಾತ್ರಿ ರೈತರೊಬ್ಬರ ಹೊಲದಲ್ಲಿ ವಿದ್ಯುತ್ ನಿಂದಾಗಿ ಗಿಡಕ್ಕೆ ಕರೆಂಟ್ ಶಾಕ್ ಹೊಡೆದು ಟ್ಯಾಕ್ಟರ್, ಒಂದುವರೆ ಎಕರೆದಲ್ಲಿ ರೈತ ಬೆಳೆದ ಜೋಳದ ಸ್ವಪ್ಪಿ ನಷ್ಟವಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕದಳದವರು ಆಗಮಿಸಿ, ಆಗ್ನಿ ಶಾಮಕದಳದ ಸಿಬ್ಬಂದಿಯವರು ಬೆಂಕಿ ನಿಂಧಿಸುವಲ್ಲಿ ಹರಸಹಾಸ ಪಟ್ಟು. ಕೊನೆಗೆ ಬೆಂಕಿ ನಿಂಧಿಸಿದರು. ಕರೆಂಟ್ ಶಾರ್ಟ್ ಸರ್ಕ್ಯಟ್ ಆಗಲು ಕಾರಣ ಮೇನ್ ವೈರ್ ತಾವರಗೇರಾ ಪಟ್ಟಣದಿಂದ ನೇರವಾಗಿ ಗರ್ಜನಾಳ ಹತ್ತಿರಾ ಬರುವ ಕರೀಷ್ಮಾ ವೈನ್ ಫ್ಯಾಕ್ಟರಿಗೆ ವಿದ್ಯುತ್ ಲೈನ್ ಹೋಗಿದ್ದು, ಈ ಕಂಬಗಳಿಗೆ ಮುಂಜಾಗ್ರತೆವಿಲ್ಲದೆ ತಮಗೆ ಮನ ಬಂದಂತೆ ವಿದ್ಯುತ್ ಲೈನ್ ಹಾಕಿಕೊಂಡು ಹೋಗಿದ್ದಾರೆ, ಇದರ ನಿಸ್ಕಾಳಜಿವತಿಯಿಂದ ಇಂತಹ ದೃರ್ಘಟನೆಗಳು ಆಗಾಗ ಸಂಭವಿಸುತ್ತಲೆ ಇವೆ, ಇಷ್ಟೆಲ್ಲಾದರೂ ಸಹ ಯಾವುದೇ ಸಂಬಂದಪಟ್ಟ ಅಧಿಕಾರಿಗಳಿಂದ ಯಾವುದೇ ಕ್ರಮವಿಲ್ಲ, ಈ ಶಾರ್ಟ ಸರ್ಕ್ಯೂಟಯಿಂದ ಬೆಂಕಿ ತಗಲಿ ಗಿಡವನ್ನು ಆವರಿಸಿಕೊಂಡಿರುತ್ತದೆ, ಆ ಕಂಬಗಳು ಸಾರ್ವಜನಿಕರಿಗೂ ಹಾಗೂ ರೈತಾಫಿ ವರ್ಗಕ್ಕೆ ತೊಂದರೆಯಾಗುತ್ತಿದೆ ಆದಕಾರಣ ವಿದ್ಯುತ್ ಸಿಬ್ಬಂದಿ ಇಲಾಖೆಯವರು ತಕ್ಷಣ ಮುಂದಾಗುವ ಅನಾಹುತಗಳನ್ನ ತಪ್ಪಿಸಿ, ಯಾವುದೇ ತೊಂದರೆ ಆಗದಂತೆ ಬೇರೆ ಒಂದು ಕಂಬವನ್ನು ಹಾಕಿ, ರೈತರಿಗೆ ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೇಕೆಂದು ನಾರಿನಾಳ ಗ್ರಾಮಸ್ಥರಿಂದ ಒತ್ತಾಯವಾಗಿದೆ.
ವರದಿ – ಸಂಪಾದಕೀಯ